ನವದೆಹಲಿ :  ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ (PM Shram Yogi Man Dhan Yojna) ಅಸಂಘಟಿತ ವಲಯದ ಕಾರ್ಮಿಕರಿಗೆ ಅತ್ಯಂತ ಪರಿಣಾಮಕಾರಿ ಯೋಜನೆಯಾಗಿದೆ. ಇದರ ಅಡಿಯಲ್ಲಿ, ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಕಾರ್ಮಿಕರು ತಮ್ಮ ವೃದ್ಧಾಪ್ಯಕ್ಕೆ ಹಣವನ್ನು ಉಳಿಸುವುದು ಸಾಧ್ಯವಾಗುತ್ತದೆ. ಈ ಯೋಜನೆಯಡಿ, ಸರ್ಕಾರವು ಕಾರ್ಮಿಕರಿಗೆ ಪಿಂಚಣಿಯ (Pension) ಖಾತರಿ ನೀಡುತ್ತದೆ. ಈ ಯೋಜನೆಯಲ್ಲಿ, ದಿನಕ್ಕೆ ಕೇವಲ 2 ರೂಪಾಯಿ ಉಳಿತಾಯ ಮಾಡುವ ಮೂಲಕ ವಾರ್ಷಿಕ 36000 ರೂಪಾಯಿ ಪಿಂಚಣಿ ಪಡೆಯಬಹುದು.


COMMERCIAL BREAK
SCROLL TO CONTINUE READING

ತಿಂಗಳಿಗೆ 55 ರೂಪಾಯಿ ಜಮಾ ಮಾಡಬೇಕು :
ಈ ಯೋಜನೆಯನ್ನು ಪ್ರಾರಂಭಿಸುವಾಗ ಪ್ರತಿ ತಿಂಗಳು 55 ರೂಪಾಯಿಗಳನ್ನು ಜಮಾ ಮಾಡಬೇಕು. ಅಂದರೆ, 18 ನೇ ವಯಸ್ಸಿನಲ್ಲಿ ದಿನಕ್ಕೆ ಸುಮಾರು 2 ರೂ.ಗಳನ್ನು ಉಳಿಸುವ ಮೂಲಕ, ವಾರ್ಷಿಕ 36000 ರೂ. ಪಿಂಚಣಿ (Pension) ಪಡೆಯಬಹುದು. ಒಬ್ಬ ವ್ಯಕ್ತಿಯು ಈ ಯೋಜನೆಯನ್ನು 40 ವರ್ಷದಿಂದ ಆರಂಭಿಸಿದರೆ, ಅವನು ಪ್ರತಿ ತಿಂಗಳು 200 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ 60 ವರ್ಷದ ನಂತರ ಪಿಂಚಣಿ ಪಡೆಯಬಹುದು. ಅಂದರೆ 60 ವರ್ಷಗಳ ನಂತರ, ಪ್ರತಿ ತಿಂಗಳಿಗೆ 3000 ರೂಪಾಯಿ ಪಿಂಚಣಿ ಪಡೆಯಬಹುದು. ಅಂದರೆ ವರ್ಷಕ್ಕೆ 36000 ರೂ.


ಇದನ್ನೂ ಓದಿ :   ನಿಮಗೂ LPG ಸಬ್ಸಿಡಿ ಸಿಗುತ್ತಿಲ್ಲವೇ ? ಇಂದೇ ಈ ಕೆಲಸ ಮಾಡಿ, ತಕ್ಷಣ ನಿಮ್ಮ ಖಾತೆಗೆ ಹಣ ಬರುತ್ತದೆ


ಅಗತ್ಯವಾದ ದಾಖಲೆಗಳು :
ಈ ಯೋಜನೆಯ ಲಾಭ ಪಡೆಯಲು, ಉಳಿತಾಯ ಬ್ಯಾಂಕ್ ಖಾತೆ (Bank saving account) ಮತ್ತು ಆಧಾರ್ ಕಾರ್ಡ್ (Aadhaar card) ಹೊಂದಿರಬೇಕು. ವ್ಯಕ್ತಿಯ ವಯಸ್ಸು 18 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು 40 ವರ್ಷಗಳಿಗಿಂತ ಹೆಚ್ಚಿರಬಾರದು.


ನೋಂದಣಿ ಇಲ್ಲಿ ನಡೆಯಲಿದೆ :
 ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ಯೋಜನೆಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕಾರ್ಮಿಕರು ಸಿಎಸ್‌ಸಿ ಕೇಂದ್ರದಲ್ಲಿರುವ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಸರ್ಕಾರವು ಈ ಯೋಜನೆಗಾಗಿ ವೆಬ್ ಪೋರ್ಟಲ್ ಅನ್ನು ರಚಿಸಿದೆ. 


ಈ ಮಾಹಿತಿಯನ್ನು ನೀಡಬೇಕು :
ನೋಂದಣಿಗಾಗಿ, ನಿಮ್ಮ ಆಧಾರ್ ಕಾರ್ಡ್, ಉಳಿತಾಯ ಅಥವಾ ಜನ್ ಧನ್ ಬ್ಯಾಂಕ್ ಖಾತೆ (Jan Dhan account) ಪಾಸ್ಬುಕ್, ಮೊಬೈಲ್ ಸಂಖ್ಯೆಯ ಅಗತ್ಯವಿದೆ. ಇದರ ಹೊರತಾಗಿ, ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ.  ಈ ಯೋಜನೆಗೆ ಸಕಾಲದಲ್ಲಿ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಬಹುದು ಎಂದು ಬ್ಯಾಂಕ್ ನಲ್ಲಿ ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ. 


ಇದನ್ನೂ ಓದಿ :   Punjab Politics Latest Update: ಪಂಜಾಬ್ ಕಾಂಗ್ರೆಸ್ ಗೆ ಬಿಗ್ ಶಾಕ್!, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ


ಯಾರು ಯೋಜನೆಯ ಲಾಭವನ್ನು ಪಡೆಯಬಹುದು ? :
ಪ್ರಧಾನ ಮಂತ್ರಿ ಶ್ರಮ ಯೋಗಿ ಮಹಾಂಧನ್ ಪಿಂಚಣಿ ಯೋಜನೆಯಡಿಯಲ್ಲಿ, ಯಾವುದೇ ಅಸಂಘಟಿತ ವಲಯದ ಕೆಲಸಗಾರ, ಅವರ ವಯಸ್ಸು 40 ವರ್ಷಕ್ಕಿಂತ ಕಡಿಮೆ ಮತ್ತು ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆಯದೆ, ಇರುವವರು ಲಾಭ ಪಡೆಯಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ವ್ಯಕ್ತಿಯ ಮಾಸಿಕ ಆದಾಯವು 15 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಬೇಕು. 


ಟೋಲ್ ಫ್ರೀ ಸಂಖ್ಯೆಯಿಂದ ಪಡೆಯಿರಿ ಮಾಹಿತಿ:
ಈ ಯೋಜನೆಗಾಗಿ, ಕಾರ್ಮಿಕ ಇಲಾಖೆ, ಎಲ್‌ಐಸಿ (LIC) , ಇಪಿಎಫ್‌ಒಗಳ ಕಚೇರಿಯನ್ನು ಸರ್ಕಾರವು ಶ್ರಮಿಕ್ ಫೆಸಿಲಿಟೇಶನ್ ಕೇಂದ್ರವನ್ನಾಗಿ ಮಾಡಿದೆ. ಇಲ್ಲಿಗೆ ಹೋಗುವ ಮೂಲಕ, ಕಾರ್ಮಿಕರು ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈ ಯೋಜನೆಗಾಗಿ ಸರ್ಕಾರ 18002676888 ಟೋಲ್ ಫ್ರೀ ಸಂಖ್ಯೆಯನ್ನು ನೀಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಕೂಡಾ ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.