PAN link with LIC policy : LIC ಪಾಲಿಸಿ ನಿಯಮಗಳಲ್ಲಿ ಬದಲಾವಣೆ ; ಈ ಕೆಲಸ ಈಗಲೇ ಮಾಡಿ ಇಲ್ಲದಿದ್ದರೆ ಸಮಸ್ಯೆ ತಪ್ಪಿದಲ್ಲ!

ಈಗ ಪ್ಯಾನ್ ಕಾರ್ಡ್ ಅನ್ನು LIC ಯ ಪಾಲಿಸಿಯೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿರುತ್ತದೆ. ಎಲ್ಐಸಿ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಇದರ ಹೊರತಾಗಿ, ಇದಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯು LIC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

Written by - Channabasava A Kashinakunti | Last Updated : Sep 24, 2021, 09:53 AM IST
  • LIC ಈ ಪ್ರಮುಖ ನಿಯಮಗಳನ್ನು ಜಾರಿಗೆ ತಂದಿದೆ
  • ಈಗ ಪಾಲಿಸಿಗೆ ಪ್ಯಾನ್‌ ಲಿಂಕ್ ಮಾಡುವುದು ಕಡ್ಡಾಯ
  • ನೀವು ಈ ಕೆಲಸವನ್ನು ಮನೆಯಿಂದ ಈ ರೀತಿ ಮಾಡಬಹುದು
PAN link with LIC policy : LIC ಪಾಲಿಸಿ ನಿಯಮಗಳಲ್ಲಿ ಬದಲಾವಣೆ ; ಈ ಕೆಲಸ ಈಗಲೇ ಮಾಡಿ ಇಲ್ಲದಿದ್ದರೆ ಸಮಸ್ಯೆ ತಪ್ಪಿದಲ್ಲ! title=

ನವದೆಹಲಿ : ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ ಪಾಲಿಸಿ ಹೊಂದಿರುವವರಿಗೆ ಬಿಗ್ ನ್ಯೂಸ್ ನೀಡಿದೆ. ಈಗ ಪ್ಯಾನ್ ಕಾರ್ಡ್ ಅನ್ನು LIC ಯ ಪಾಲಿಸಿಯೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿರುತ್ತದೆ. ಎಲ್ಐಸಿ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಇದರ ಹೊರತಾಗಿ, ಇದಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯು LIC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಇತ್ತೀಚೆಗೆ ಸರ್ಕಾರವು ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್(Pan-Aadhar Link) ಮಾಡುವ ಕೊನೆಯ ದಿನಾಂಕವನ್ನು 31 ಮಾರ್ಚ್ 2022 ಕ್ಕೆ ವಿಸ್ತರಿಸಿತ್ತು. ಈಗ ಮಾರುಕಟ್ಟೆ ನಿಯಂತ್ರಕ ಸೆಬಿ ಕೂಡ ಇದೇ ನಿಯಮವನ್ನು ಮಾಡಿದೆ. ಎಲ್ಐಸಿಯಲ್ಲಿ ಹೂಡಿಕೆದಾರರು ಆಧಾರ್ ಕಾರ್ಡ್ ಜೊತೆ ಪಾಲಿಸಿಯನ್ನು ಲಿಂಕ್ ಮಾಡಬೇಕಾಗುತ್ತದೆ.

ಇದನ್ನೂ ಓದಿ : Today Petrol-Diesel Price : ವಾಹನ ಸವಾರರ ಗಮನಕ್ಕೆ : ಡೀಸೆಲ್ ಬೆಲೆಯಲ್ಲಿ ಏರಿಕೆ, ಪೆಟ್ರೋಲ್ ದರ ಸ್ಥಿರ!

ಲಿಂಕ್ ಈ ರೀತಿ ಇರುತ್ತದೆ

ನೀವು LIC ಯ ಯಾವುದೇ ಪಾಲಿಸಿ(LIC Policy)ಯನ್ನು ತೆಗೆದುಕೊಂಡಿದ್ದರೆ ಮತ್ತು ಅದನ್ನು ಇನ್ನೂ PAN ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು ಅದನ್ನು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಮಾಡಬಹುದು. ಅದನ್ನು ಹೇಗೆ ಮಾಡಬೇಕೆಂದು ತಿಳಿಯೋಣ ಬನ್ನಿ.

1. ಮೊದಲಿಗೆ ನೀವು LIC ಯ ಅಧಿಕೃತ ತಾಣಕ್ಕೆ ಹೋಗಬೇಕು (https://licindia.in/Home/Online-PAN-Registration).
2. ಇಲ್ಲಿ ನೀವುOnline PAN Registration ಮೇಲೆ ಕ್ಲಿಕ್ ಮಾಡಬೇಕು.
3. ಎಲ್‌ಐಸಿಯ ಸೈಟ್‌ನಲ್ಲಿ ಪಾಲಿಸಿಗಳ ಪಟ್ಟಿಯೊಂದಿಗೆ ಪ್ಯಾನ್ ವಿವರಗಳನ್ನು ಒದಗಿಸಿ.
4. ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಆ ಮೊಬೈಲ್ ಸಂಖ್ಯೆ(Mobile Number)ಯಲ್ಲಿ LIC ಯಿಂದ OTP ಬರುತ್ತದೆ, ಅದನ್ನು ನಮೂದಿಸಿ.
5. ಫಾರ್ಮ್ ಅನ್ನು ಸಲ್ಲಿಸಿದ ನಂತರ, ನೀವು ಯಶಸ್ವಿ ನೋಂದಣಿ ವಿನಂತಿಯ ಸಂದೇಶವನ್ನು ಪಡೆಯುತ್ತೀರಿ.
6. ಈಗ ನಿಮ್ಮ ಪ್ಯಾನ್ ಪಾಲಿಸಿಯೊಂದಿಗೆ ಲಿಂಕ್ ಆಗಿದೆ ಎಂದು ನಿಮಗೆ ತಿಳಿಯುತ್ತದೆ.

ಅಪ್ಲಿಕೇಶನ್ ಸ್ಟೇಟಸ್ ಹೇಗೆ ಪರಿಶೀಲಿಸುವುದು

ಪ್ಯಾನ್‌ನೊಂದಿಗೆ ಎಲ್‌ಐಸಿ ಪಾಲಿಸಿಯನ್ನು(PAN link with LIC policy) ಲಿಂಕ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ನೀವು ಅದರ ಸ್ಥಿತಿಯನ್ನು ಪರಿಶೀಲಿಸಬಹುದು. ಸ್ಥಿತಿಯನ್ನು ಪರೀಕ್ಷಿಸಲು, ನೀವು ಎಲ್‌ಐಸಿಯ ವೆಬ್‌ಸೈಟ್‌ಗೆ ಹೋಗಿ ಮತ್ತು ಆನ್‌ಲೈನ್ ಚೆಕಿಂಗ್ ಪಾಲಿಸಿ ಪ್ಯಾನ್ ಸ್ಥಿತಿಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಬೇಕು. ಈ ಪ್ರಕ್ರಿಯೆಯೊಂದಿಗೆ, ನಿಮ್ಮ ಪಾಲಿಸಿಯ ಸ್ಥಿತಿಯನ್ನು ನೀವು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ : ಈ ಬ್ಯಾಂಕುಗಳ ಚೆಕ್ ಬುಕ್ ಗಳು ಅಕ್ಟೋಬರ್ ನಿಂದ ಅಮಾನ್ಯ- Check details

ಎಲ್‌ಐಸಿ ವೆಬ್‌ಸೈಟ್‌(LIC Website)ನಲ್ಲಿ, ನೀವು ಮನೆಯಲ್ಲಿ ಕುಳಿತು ಅನೇಕ ಕೆಲಸಗಳನ್ನು ಮಾಡಬಹುದು ಎಂದು ನಾವು ನಿಮಗೆ ಹೇಳೋಣ. ನೀವು LIC ಪಾಲಿಸಿ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಬೇಕು. ಇದರ ಹೊರತಾಗಿ, ನಿಮಗೆ ಯಾವುದೇ ಮಾಹಿತಿ ಬೇಕಾದರೆ, ನೀವು 022 6827 6827 ಗೆ ಕರೆ ಮಾಡಬಹುದು ಮತ್ತು LICHELP <ಪಾಲಿಸಿ ನಂಬರ್> ಬರೆಯುವ ಮೂಲಕ 9222492224 ಗೆ SMS ಕಳುಹಿಸಬಹುದು. ಇದರಲ್ಲಿ SMS ಕಳುಹಿಸಲು ನಿಮ್ಮ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News