ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಪೈಕಿ SC/ST ಸಮುದಾಯದ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಯೋಜನೆ ಜಾರಿಗೆ ತಂದಿದೆ.


COMMERCIAL BREAK
SCROLL TO CONTINUE READING

ಪರಿಶಿಷ್ಟ ಜಾತಿ ಮಾದಿಗ ಮತ್ತು ಸಂಬಂಧಿತ ಜಾತಿಗೆ ಸೇರಿದ ನಿರುದ್ಯೋಗಿಗಳು ಕೈಗಾಡಿಗಳನ್ನು ಖರೀದಿಸಿ, ರೈತರಿಂದ ತರಕಾರಿ-ಹಣ್ಣುಗಳನ್ನು ಖರೀದಿ ಮಾಡಿ ತಳ್ಳುವ ಗಾಡಿ ಮೂಲಕ ಮಾರಾಟ ಮಾಡಿ ಸ್ವಯಂ ಉದ್ಯೋಗ ಕೈಗೊಂಡು ಆದಾಯ ಗಳಿಸಲು ಅವಶ್ಯವಿರುವ ಸಾಲ ಮತ್ತು ಸಹಾಯಧನವನ್ನು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಮಂಜೂರು ಮಾಡಲಾಗುವುದು.


ಸ್ವಯಂ ಉದ್ಯೋಗ:


  • ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಮಾದಿಗ ಜಾತಿಗೆ ಸೇರಿದ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಒದಗಿಸಲಾಗುವುದು.

  • ಯೋಜನೆಯ ಘಟಕ ವೆಚ್ಚ 1 ಲಕ್ಷ ರೂ.ಗಳಾಗಿದ್ದು, ಈ ಪೈಕಿ 50 ಸಾವಿರ ರೂ. ಸಹಾಯಧನ ಮತ್ತು 50 ಸಾವಿರ ರೂ. ಸಾಲವಾಗಿರುತ್ತದೆ.

  • ಸಾಲದ ಮೊತ್ತವನ್ನು ಶೇ.4ರ ಬಡ್ಡಿದರದಲ್ಲಿ 30 ಸಮಾನ ಕಂತುಗಳಲ್ಲಿ ನಿಗಮಕ್ಕೆ ಮರು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ: ರೈಲ್ವೆಯಿಂದ ವಿಶೇಷ ಸೌಲಭ್ಯ! ಹಿರಿಯ ನಾಗರಿಕರಿಗೆ ಹೆಚ್ಚು ಅನುಕೂಲ


ಅರ್ಹತೆ:


  • ಅರ್ಜಿದಾರರು ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು.

  • ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಮೂಲ ಜಾತಿಯನ್ನು ನಮೂದಿಸಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

  • ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ.

  • ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು.

  • ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅವಶ್ಯವಿರುವ ಸ್ಥಳಾವಕಾಶವನ್ನು ಹೊಂದಿರಬೇಕು.


ನಿಯಮಗಳು:


  • ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು.

  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ 1.50 ಲಕ್ಷ ರೂ. ಹಾಗೂ ನಗರ ಪ್ರದೇಶದವರಿಗೆ 2 ಲಕ್ಷ ರೂ.ಗಳ ಮಿತಿಯೊಳಗಿರಬೇಕು.

  • ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು.

  • ಉದ್ದೇಶಿತ ವ್ಯಾಪಾರ /ಚಟುವಟಿಕೆ ಆಧಾರದ ಮೇಲೆ ಸಾಲ/ಸಹಾಯಧನ ಮಂಜೂರು ಮಾಡಲಾಗುವುದು.

  • ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ.

  • ಸಹಾಯಧನ ಮತ್ತು ಸಾಲವನ್ನು ನೇರವಾಗಿ ಫಲಾನುಭವಿಗಳಿಗೆ/ಮಾರಾಟಗಾರರಿಗೆ ಬಿಡುಗಡೆ ಮಾಡಲಾಗುವುದು.


ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:


  • ಅರ್ಜಿ

  • ಭಾವಚಿತ್ರ

  • ಜಾತಿ ಪತ್ರ (RD ಸಂಖ್ಯೆ ಹೊಂದಿರಬೇಕು)

  • ಆಧಾಯ ಪತ್ರ (RD ಸಂಖ್ಯೆ ಹೊಂದಿರಬೇಕು)

  • ಆಧಾರ್ ಕಾರ್ಡ್

  • ಬ್ಯಾಂಕ್ ಪಾಸ್‍ಬುಕ್


ಇದನ್ನೂ ಓದಿ: ನೀವೂ ಕಾಲೇಜು ವಿದ್ಯಾರ್ಥಿಗಳೇ? ನಿಮಗಾಗಿ ಲಾಂಚ್ ಆಗಿವೆ ಎರಡು ಹೊಸ ಇ-ಸ್ಕೂಟರ್ ಗಳು, ಬೆಲೆ ಜಸ್ಟ್ 55 ಸಾವಿರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ