Cow Dung Monetization: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹೊಸ ಹೆಜ್ಜೆಯೊಂದನ್ನು ಇಟ್ಟಿದೆ. ಹಸುವಿನ ಸಗಣಿ ಬಳಕೆಯ ಮೂಲಕ ಹೈನುಗಾರರ ಆದಾಯವನ್ನು ಹೆಚ್ಚಿಸುವ ಸಲುವಾಗಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ, NDDB ಮೃಡಾ ಲಿಮಿಟೆಡ್‌ನ ಹೊಸ ಅಂಗಸಂಸ್ಥೆಯನ್ನು ಪ್ರಾರಂಭಿಸಿದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB) ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿದ್ದು, ಹಾಲು, ಡೈರಿ ಉತ್ಪನ್ನಗಳು, ಖಾದ್ಯ ತೈಲಗಳು ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ತಯಾರಿಸುತ್ತದೆ, ಮಾರುಕಟ್ಟೆ ಒದಗಿಸುತ್ತದೆ ಮತ್ತು ಮಾರಾಟ ಕೂಡ ಮಾಡುತ್ತದೆ. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲಾ, NDDB ಈ ಹೊಸ ಸಂಸ್ಥೆಯನ್ನು ಸರಿಯಾದ ಸಮಯದಲ್ಲಿ ಸ್ಥಾಪಿಸಿದೆ. ದೇಶವು ಬೃಹತ್ ಜಾನುವಾರು ಜನಸಂಖ್ಯೆಯನ್ನು ಹೊಂದಿದೆ ಮತ್ತು ಹಸುವಿನ ಸಗಣಿಯ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಆದಾಯದ ಮೂಲದ ರೂಪದಲ್ಲಿ ಹಸುವಿನ ಸಗಣಿ
ಹೊಸ ಕಂಪನಿ ಎನ್‌ಡಿಡಿಬಿ ಮೃಡಾ ಜೈವಿಕ ಅನಿಲ, ಕಾಂಪೋಸ್ಟ್ ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲು ಹಸುವಿನ ಸಗಣಿಯ ಗರಿಷ್ಠ ಬಳಕೆಗೆ ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲಿ ಎನ್‌ಡಿಡಿಬಿಯ ಸುಧಾನ್ ಟ್ರೇಡ್‌ಮಾರ್ಕ್ ಅನ್ನು ಅನಾವರಣಗೊಳಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ  ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಭಾರತದಲ್ಲಿ 30 ಕೋಟಿಗೂ ಅಧಿಕ ಜಾನುವಾರುಗಳಿವೆ. ಹಸುವಿನ ಸಗಣಿಯಿಂದ ತಯಾರಿಸಿದ ಜೈವಿಕ ಅನಿಲದಿಂದ ದೇಶೀಯ ಅನಿಲ ಅವಶ್ಯಕತೆಯ ಸುಮಾರು ಶೇ.50 ರಷ್ಟನ್ನು ಪೂರೈಸಬಹುದು ಮತ್ತು ಅದರ ಕೆಲ ಭಾಗವನ್ನು NPK ಗೊಬ್ಬರಗಳಾಗಿ ಪರಿವರ್ತಿಸಬಹುದು. ಹಸುವಿನ ಸಗಣಿ ಹಣಗಳಿಕೆಯಿಂದ ಹೈನುಗಾರರ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದ್ದು, ಇದು ಸರ್ಕಾರದ ಆದ್ಯತೆಯಲ್ಲಿಯೂ ಕೂಡ ಒಂದಾಗಿದೆ ಎಂದಿದ್ದಾರೆ. 


ಈ ರಾಜ್ಯಗಳಲ್ಲಿ ಮಾಡೆಲ್ ಗಳ ಪ್ರಯತ್ನ
ಎನ್‌ಡಿಡಿಬಿ ಮೃಡಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಭಾರ್ತಿ ಮಾತನಾಡಿ, ಗುಜರಾತ್‌ನ ಆನಂದ್ ಜಿಲ್ಲೆಯ ಜಕರಿಯಾಪುರದಲ್ಲಿ ಪ್ರಾಯೋಗಿಕ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಈ ಮಾದರಿಯನ್ನು ಮಹಾರಾಷ್ಟ್ರ, ರಾಜಸ್ಥಾನ, ಸಿಕ್ಕಿಂ, ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ಒಟ್ಟು ಆರು ರಾಜ್ಯಗಳಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Vegetable Price: ಬೆಳೆಗಳ ಮೇಲೆ ಮಾನ್ಸೂನ್‌ ಪ್ರಭಾವ: ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ


ಹೊಸ ಕಂಪನಿಯು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಮಾದರಿಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಭಾರ್ತಿ ಹೇಳಿದ್ದಾರೆ. ಉದಾಹರಣೆಗೆ, ಜಕರಿಯಾಪುರದಲ್ಲಿ, ಪ್ರತಿ ಹೈನುಗಾರರ ಮನೆಯಲ್ಲಿ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಲಾಗಿದೆ, ಇದು ಒಂದು ತಿಂಗಳಲ್ಲಿ ಎರಡು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Hero ಕಂಪನಿಯಿಂದ ಮತ್ತೊಂದು ಅಗ್ಗದ ಬೈಕ್ ಬಿಡುಗಡೆ ..!


ರೈತರಿಂದ ಸಗಣಿ ಖರೀದಿಸಲಾಗುತ್ತಿದೆ
ಜೈವಿಕ ಅನಿಲ ಸ್ಥಾವರದಿಂದ ಉತ್ಪತ್ತಿಯಾಗುವ ದ್ರಾವಣವನ್ನು ಎನ್‌ಡಿಡಿಬಿಯಿಂದ ಲೀಟರ್‌ಗೆ 1-2 ರೂ.ನಂತೆ ಖರೀದಿಸಿ ಸಾವಯವ ಗೊಬ್ಬರ ತಯಾರಿಸಲು ಸಂಸ್ಕರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.  ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬೃಹತ್ ಬಯೋಗ್ಯಾಸ್ ಸ್ಥಾವರವನ್ನು ಸ್ಥಾಪಿಸಲಾಗಿದ್ದು, ಇದಕ್ಕಾಗಿ ಹಸುವಿನ ಸಗಣಿಯನ್ನು ರೈತರಿಂದ ಖರೀದಿಸಲಾಗುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.