ITR Filing Update : 2021-22 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇನ್ನು ಕೇವಲ ಆರು ದಿನ ಬಾಕಿ ಇದೆ. ಐಟಿಆರ್ ಸಲ್ಲಿಸಲು ಜುಲೈ 31 ದಿನಾಂಕವಾಗಿದೆ. ಈ ಮಧ್ಯೆ ಐಟಿಆರ್ ಸಲ್ಲಿಕೆಗೆ ಸಂಬಂಧಪಟ್ಟಂತೆ, ಆದಾಯ ತೆರಿಗೆ ಇಲಾಖೆ ದೊಡ್ಡ ಅಪ್ಡೇಟ್ ನೀಡಿದೆ. , 2021-22 ರ ಆರ್ಥಿಕ ವರ್ಷಕ್ಕೆ ಇ-ಫೈಲಿಂಗ್ ಪೋರ್ಟಲ್ ಮೂಲಕ ಇಲ್ಲಿಯವರೆಗೆ ಮೂರು ಕೋಟಿಗೂ ಹೆಚ್ಚು ಜನ ರಿಟರ್ನ್ಸ್ ಸಲ್ಲಿಸಿದ್ದಾರೆ.
3 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ :
ಜುಲೈ 25, 2022 ರವರೆಗೆ 3 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2022. ಒಂದು ವೇಳೆ ಇನ್ನೂ ರಿಟರ್ನ್ ಸಲ್ಲಿಸದೇ ಇದ್ದಲ್ಲಿ ಆದಷ್ಟು ಬೇಗ ರಿಟರ್ನ್ ಸಲ್ಲಿಸುವಂತೆ ಇಲಾಖೆ ವತಿಯಿಂದ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : Gold Price Today : ಅಗ್ಗವಾಯಿತು ಬೆಳ್ಳಿ ಬೆಲೆ ಹಾಗಾದರೆ ಚಿನ್ನದ ದರ ಎಷ್ಟು ?
ಕಳೆದ ವರ್ಷ 5.89 ಕೋಟಿ ಐಟಿಆರ್ ಸಲ್ಲಿಕೆ :
2021-22ರ ಹಣಕಾಸು ವರ್ಷದಲ್ಲಿ ಜುಲೈ 20 ರವರೆಗೆ 2.3 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2020-21ರಲ್ಲಿ ವಿಸ್ತರಿಸಿದ ದಿನಾಂಕದೊಂದಿಗೆ ಡಿಸೆಂಬರ್ 31, 2021 ರವರೆಗೆ ಒಟ್ಟು 5.89 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಇದರ ಪ್ರಕಾರ ಇದುವರೆಗೆ ಸುಮಾರು 2.9 ಕೋಟಿ ಐಟಿಆರ್ ಸಲ್ಲಿಕೆಯಾಗಿದೆ. ಐಟಿಆರ್ ಸಲ್ಲಿಕೆಯ ಕೊನೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಕೆಲವು ಸಮಸ್ಯೆಗಳು ಕಂಡುಬರುತ್ತಿವೆ.
ಜುಲೈ 31 ರ ನಂತರ ದಿನಾಂಕ ವಿಸ್ತರನೇ ಇಲ್ಲ :
ಜುಲೈ 31 ರ ನಂತರ ಐಟಿಆರ್ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವ ಆಲೋಚನೆ ಸರ್ಕಾರಕ್ಕೆ ಇಲ್ಲ ಎಂದು ಇತ್ತೀಚೆಗೆ, ಕಂದಾಯ ಕಾರ್ಯದರ್ಶಿ ಹೇಳಿದ್ದರು. ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ತೆರಿಗೆ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸುವ ನಿರೀಕ್ಷೆಯಿತ್ತು. ಆದರೆ ಈಗ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : RBI On Note: ಭಾರತೀಯ ಕರೆನ್ಸಿ ನೋಟುಗಳಿಗೆ ಸಂಬಂಧಿಸಿದಂತೆ RBI ಹೇಳಿದ್ದೇನು?
ವೈಯಕ್ತಿಕ HUFಗಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2022. ಅದೇ ಸಮಯದಲ್ಲಿ, ಆಡಿಟ್ ಅಗತ್ಯವಿರುವವರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31, 2022 ಆಗಿದೆ. ಮತ್ತು ವ್ಯಾಪಾರಸ್ಥರಿಗೆ ಟಿಪಿ ವರದಿ ಅಗತ್ಯವಿದೆ. ಹಾಗಾಗಿ ಅವರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30, 2022 ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.