Sukanya Samriddhi Yojana ಹಾಗೂ PPF ಹೂಡಿಕೆದಾರರಿಗೆ ಸಂತಸದ ಸುದ್ದಿ, ಶೀಘ್ರದಲ್ಲಿಯೇ ಬಡ್ಡಿ ದರ ಹೆಚ್ಚಳ ಸಾಧ್ಯತೆ! ಎಷ್ಟು?
Sukanya Samriddhi Yojana Update: ನೀವೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಪಿಪಿಎಫ್ ನಂತಹ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಶೀಘ್ರದಲ್ಲಿಯೇ ಸರ್ಕಾರ ಇಂತಹ ಯೋಜನೆಗಳಲ್ಲಿನ ಹೂಡಿಕೆಯ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿದೆ ಎನ್ನಲಾಗಿದೆ.
Sukanya Samriddhi Yojana Update: ನೀವು ಸುಕನ್ಯಾ ಸಮೃದ್ಧಿ ಯೋಜನೆ, ಎನ್‌ಎಸ್‌ಸಿ, ಪಿಪಿಎಫ್‌ನಂತಹ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಈಗ ನೀವು ಈ ಸಣ್ಣ ಯೋಜನೆಗಳಲ್ಲಿ ಪ್ರಚಂಡ ಲಾಭವನ್ನು ಪಡೆಯಬಹುದು. ಏಕೆಂದರೆ, ಕೇಂದ್ರ ಸರ್ಕಾರವು ತನ್ನ ಉಳಿತಾಯ ಯೋಜನೆಗಳಾದ ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿನ ಹೂಡಿಕೆಯ ಮೇಲಿನ ಬಡ್ಡಿದರಗಳಲ್ಲಿ ಭಾರಿ ಹೆಚ್ಚಳ ಘೋಷಿಸುವ ಸಾಧ್ಯತೆ ಇದೆ. ಪ್ರತಿ ತ್ರೈಮಾಸಿಕ ಪ್ರಾರಂಭವಾಗುವ ಮೊದಲು ಹಣಕಾಸು ಸಚಿವಾಲಯವು ಸರ್ಕಾರಿ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಶೀಲಿಸುತ್ತದೆ ಮತ್ತು ಪ್ರಕಟಿಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ. ಇಂತಹ ಪರಿಸ್ಥಿತಿಯಲ್ಲಿ, ಸೆಪ್ಟೆಂಬರ್ 2022 ರಿಂದ, ಸರ್ಕಾರದ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು 0.50 ರಿಂದ 0.75 ರಷ್ಟು ಹೆಚ್ಚಿಸಲು ಹಣಕಾಸು ಸಚಿವಾಲಯ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
30 ಜೂನ್ 2022 ರಂದು ಎರಡು ಬಾರಿ ರೆಪೊ ದರವನ್ನು ಹೆಚ್ಚಿಸಿರುವ RBI ನಿರ್ಧಾರದ ನಂತರವೂ, ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆದರೆ 30 ಸೆಪ್ಟೆಂಬರ್ 2022 ರಂದು ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಹಣಕಾಸು ಸಚಿವಾಲಯವು ಈ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಶೀಲಿಸಿದಾಗ, ಈ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು ಹೆಚ್ಚಾಗಲಿವೆ!
RBI ರೆಪೊ ದರವನ್ನು ಹೆಚ್ಚಿಸಿದ ನಂತರ, ಅನೇಕ ಬ್ಯಾಂಕುಗಳು ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ಸರ್ಕಾರಿ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸಹ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಹೂಡಿಕೆಯ ಮೇಲೆ ವಾರ್ಷಿಕವಾಗಿ ಶೇ. 7.1 ಬಡ್ಡಿದರವನ್ನು ನೀಡಲಾಗುತ್ತಿದೆ, ಆದರೆ NSC ಯಲ್ಲಿ ಈ ಬಡ್ಡಿದರ ಶೇ.6.8 ರಷ್ಟಿದೆ.
ಇದನ್ನೂ ಓದಿ-PM Kisan New Rule: ಇನ್ಮುಂದೆ ಪತಿ-ಪತ್ನಿ ಇಬ್ಬರ ಖಾತೆಗೂ ರೂ. 6000 ಬರಲಿದೆಯಾ? ಹೊಸ ನಿಯಮ ಏನು ಹೇಳುತ್ತದೆ?
ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆಯ ಮೇಲೆ ಶೇ. 7.6 ಮತ್ತು ಹಿರಿಯ ನಾಗರಿಕರ ತೆರಿಗೆ ಉಳಿತಾಯ ಯೋಜನೆಯಲ್ಲಿ ಶೇ.7.4 ರಷ್ಟು ಬಡ್ಡಿ ಲಭ್ಯವಿದೆ. ಇದಲ್ಲದೇ ಕಿಸಾನ್ ವಿಕಾಸ್ ಪತ್ರದಲ್ಲಿ ಶೇ.6.9 ಬಡ್ಡಿ ದೊರೆಯುತ್ತಿದೆ. ಇದೀಗ ಸರ್ಕಾರವು ಜುಲೈನಿಂದ ಈ ಯೋಜನೆಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.
ಇದನ್ನೂ ಓದಿ-ಇನ್ಮುಂದೆ UPI ಆಧರಿತ ವಹಿವಾಟಿಗೆ ಬೀಳಲಿದೆಯಾ ಶುಲ್ಕ! ಎಷ್ಟಾಗಬಹುದು ಚಾರ್ಜ್?
ಏಪ್ರಿಲ್ 2020 ರಿಂದ ಯಾವುದೇ ಬದಲಾವಣೆ ಇಲ್ಲ
2020-21ರ ಮೊದಲ ತ್ರೈಮಾಸಿಕದ ಬಳಿಕ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಇದಕ್ಕೂ ಮೊದಲು ಅಧಿಸೂಚನೆಯನ್ನು ಹೊರಡಿಸಿದ್ದ ಒಂದು ಅಧಿಸೂಚನೆಯಲ್ಲಿ ವಿತ್ತ ಸಚಿವಾಲಯ, ಆರ್ಥಿಕ ವರ್ಷ 2022-23 ರ ಮೊದಲ ತ್ರೈಮಾಸಿಕಕ್ಕೆ ವಿಭಿನ್ನ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಏಪ್ರಿಲ್ 1, 2022 ರಂದು ಆರಂಭಗೊಂಡು ಜೂನ್ 30, 2022 ರ ನಾಲ್ಕನೇ ತ್ರೈಮಾಸಿಕಕ್ಕೆ ಅನ್ವಯಿಸುವ ದರಗಳಲ್ಲಿ ಯಾವುದೇ ಪರಿವರ್ತನೆ ಇರುವುದಿಲ್ಲ ಎಂದು ಹೇಳಿದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಣೆಗೊಳ್ಳುತ್ತವೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.