PF Interest Hike: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) 6 ಕೋಟಿಗೂ ಹೆಚ್ಚು ಪಿಎಫ್ ಚಂದಾದಾರರಿಗೆ, ಭರ್ಜರಿ ಸುದ್ದಿಯೊಂದು ಪ್ರಕಟಗೊಂಡಿದೆ. ಶನಿವಾರ ನಡೆದ ಸಿಬಿಟಿ ಸಭೆಯಲ್ಲಿ ಬಡ್ಡಿದರವನ್ನು ಗಣನೀಯವಾಗಿ ಶೇ.0.10ರಷ್ಟು (ಪಿಎಫ್ ಬಡ್ಡಿ ದರ ಏರಿಕೆ) ಹೆಚ್ಚಿಸಲು ನಿರ್ಧರಿಸಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಟಿಸಿರುವ ವರದಿಯ ಪ್ರಕಾರ, ಇಪಿಎಫ್‌ಒ 2023-24ಕ್ಕೆ ಭವಿಷ್ಯ ನಿಧಿಯ ಅಂದರೆ ಪಿಎಫ್‌ನ ಬಡ್ಡಿ ದರವನ್ನು ಶೇಕಡಾ 8.25 ಕ್ಕೆ ನಿಗದಿಪಡಿಸಿದೆ. ಇದು ಕಳೆದ 3 ವರ್ಷಗಳಲ್ಲಿ ಅತಿ ಹೆಚ್ಚು. (Business News In Kannada)


COMMERCIAL BREAK
SCROLL TO CONTINUE READING

ಕಳೆದ ವರ್ಷಗಳಲ್ಲಿ ಬಡ್ಡಿದರಗಳು ಹೇಗಿದ್ದವು?
ಈ ಹಿಂದೆ, ಸರ್ಕಾರವು 2022-23ರಲ್ಲಿ ಪಿಎಫ್ ಖಾತೆದಾರರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 8.10 ರಿಂದ ಶೇಕಡಾ 8.15 ಕ್ಕೆ ಹೆಚ್ಚಿಸಿತ್ತು. ಮಾರ್ಚ್ 2022 ರಲ್ಲಿ, ಇಪಿಎಫ್ಒ 2021-22 ರ ಇಪಿಎಫ್ ಮೇಲಿನ ಬಡ್ಡಿ ದರವನ್ನು ಶೇಕಡಾ 8.1 ಕ್ಕೆ ಇಳಿಸಿತ್ತು. ಇದು 4 ದಶಕಗಳಲ್ಲೇ ಅತ್ಯಂತ ಕಡಿಮೆ ಬಡ್ಡಿ ದರವಾಗಿತ್ತು.


ಇದನ್ನೂ ಓದಿ-Good News To Farmers: ಈ ರೈತರಿಗೆ ನಿರಾವರಿಗಾಗಿ ಸಿಗಲಿದೆ ಉಚಿತ ವಿದ್ಯುತ್, ಭೂಮಿ ರಹಿತ ಕಾರ್ಮಿಕರಿಗೆ ಸಿಗಲಿದೆ 10,000 ರೂ.!


ಬಡ್ಡಿ ದರ ಒಂದು ಕಾಲದಲ್ಲಿ ಶೇ. 8.5 ರಷ್ಟಿತ್ತು 
2020-21ರಲ್ಲಿ EPF ಮೇಲಿನ ಬಡ್ಡಿ ದರವು 8.5 ಪ್ರತಿಶತದಷ್ಟಿತ್ತು. ಇಪಿಎಫ್‌ಒದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ 'ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್' (ಸಿಬಿಟಿ) ಶನಿವಾರದ ತನ್ನ ಸಭೆಯಲ್ಲಿ 2023-24 ನೇ ಸಾಲಿಗೆ ಇಪಿಎಫ್‌ಗೆ ಶೇಕಡಾ 8.25 ಬಡ್ಡಿ ದರವನ್ನು ನೀಡಲು ನಿರ್ಧರಿಸಿದೆ.


ಇದನ್ನೂ ಓದಿ-Free Heath Insurance: ಬಡ-ಶ್ರೀಮಂತ ಎನ್ನದೆ ಎಲ್ಲಾ ಕುಟುಂಬಗಳಿಗೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆ ಘೋಷಿಸಿದೆ ಈ ರಾಜ್ಯ ಸರ್ಕಾರ!


ಇದನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುವುದು
CBT ಯ ನಿರ್ಧಾರದ ನಂತರ, ಇದೀಗ 2023-24 ರ EPF ಠೇವಣಿಗಳ ಮೇಲಿನ ಬಡ್ಡಿ ದರದ ನಿರ್ಧಾರದ ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಅನುಮೋದನೆಯ ದೊರೆತ ಬಳಿಕ, 2023-24ರ EPF ಮೇಲಿನ ಬಡ್ಡಿ ದರವನ್ನು EPFO ​​ನ ಆರು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಲ್ಲಿ ಠೇವಣಿ ಮಾಡಲಾಗುವುದು.


ಇಯನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.