Good News To Farmers: ಈ ರೈತರಿಗೆ ನಿರಾವರಿಗಾಗಿ ಸಿಗಲಿದೆ ಉಚಿತ ವಿದ್ಯುತ್, ಭೂಮಿ ರಹಿತ ಕಾರ್ಮಿಕರಿಗೆ ಸಿಗಲಿದೆ 10,000 ರೂ.!

Good News To Farmers: ಛತ್ತೀಸ್‌ಗಢ ಸರ್ಕಾರ ಕೃಷಿ ಬಜೆಟ್ ಅನ್ನು ಶೇ.33 ರಷ್ಟು ಹೆಚ್ಚಿಸಿದೆ. ವಿಷ್ಣು ಸರ್ಕಾರದಿಂದ ಕೃಷಿಗೆ ಒಟ್ಟು 13,438 ಕೋಟಿ ರೂ. ಮೀಸಲಿರಿಸಲಾಗಿದೆ (Business News In Kannada)  

Written by - Nitin Tabib | Last Updated : Feb 9, 2024, 10:50 PM IST
  • ವಿಷ್ಣು ಅವರ ಉತ್ತಮ ಆಡಳಿತದ ಬಜೆಟ್ ನಲ್ಲಿ ಅನ್ನದಾತರ ಹಿತರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ.
  • ಛತ್ತೀಸ್‌ಗಢ ಸರ್ಕಾರವು ರೈತರಿಗೆ 5 ಹೆಚ್ಪಿ ಕೃಷಿ ಪಂಪ್‌ಗಳಿಗೆ ಉಚಿತ ವಿದ್ಯುತ್ ನೀಡಲಿದೆ.
  • ಇದಕ್ಕಾಗಿ ಬಜೆಟ್‌ನಲ್ಲಿ 3,500 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ
Good News To Farmers: ಈ ರೈತರಿಗೆ ನಿರಾವರಿಗಾಗಿ ಸಿಗಲಿದೆ ಉಚಿತ ವಿದ್ಯುತ್, ಭೂಮಿ ರಹಿತ ಕಾರ್ಮಿಕರಿಗೆ ಸಿಗಲಿದೆ 10,000 ರೂ.! title=

Good News To Farmers: ಛತ್ತೀಸ್‌ಗಢ ಸರ್ಕಾರ 2024-25 ನೇ ಹಣಕಾಸು ವರ್ಷಕ್ಕೆ 1,47,446 ಕೋಟಿ ರೂಪಾಯಿಗಳ ಬಜೆಟ್ ಅನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದೆ. ಛತ್ತೀಸ್‌ಗಢ ಸರ್ಕಾರವು ಕೃಷಿ ಬಜೆಟ್ ಅನ್ನು ಶೇ. 33 ರಷ್ಟು ಹೆಚ್ಚಿಸಿದೆ. ವಿಷ್ಣು ಸರ್ಕಾರದಿಂದ ಕೃಷಿಗೆ ಒಟ್ಟು 13,438 ಕೋಟಿ ರೂ. ಮೀಸಲಿರಿಸಲಾಗಿದೆ. ಬಜೆಟ್‌ನಲ್ಲಿ, ಛತ್ತೀಸ್‌ಗಢ ಸರ್ಕಾರವು 'ಕೃಷಿಕ್ ಉನ್ನತಿ ಯೋಜನೆ' ಅಡಿಯಲ್ಲಿ 10,000 ಕೋಟಿ ರೂ ಮತ್ತು ಸಣ್ಣ ಮತ್ತು ಮಧ್ಯಮ ರೈತರನ್ನು ಬಲಪಡಿಸಲು ಜಲ ಜೀವನ್ ಮಿಷನ್‌ಗೆ 4,500 ಕೋಟಿ ರೂ. ಮೀಸಲಿರಿಸಿದೆ ಇದರಿಂದ ರಾಜ್ಯದ 24.72 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರಿಂದ 2 ಲಕ್ಷ 30 ಸಾವಿರ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. (Business News In Kannada)

ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್
ವಿಷ್ಣು ಅವರ ಉತ್ತಮ ಆಡಳಿತದ ಬಜೆಟ್ ನಲ್ಲಿ ಅನ್ನದಾತರ ಹಿತರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಛತ್ತೀಸ್‌ಗಢ ಸರ್ಕಾರವು ರೈತರಿಗೆ 5 ಹೆಚ್ಪಿ ಕೃಷಿ ಪಂಪ್‌ಗಳಿಗೆ ಉಚಿತ ವಿದ್ಯುತ್ ನೀಡಲಿದೆ. ಇದಕ್ಕಾಗಿ ಬಜೆಟ್‌ನಲ್ಲಿ 3,500 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ

ಭೂರಹಿತ ಕೃಷಿ ಕೂಲಿಕಾರರ ಯೋಜನೆಗೆ ಚಾಲನೆ
ದೀನದಯಾಳ್ ಉಪಾಧ್ಯಾಯ ಭೂರಹಿತ ಕೃಷಿ ಕೂಲಿಕಾರರ ಯೋಜನೆಯನ್ನು ವಿಷ್ಣು ದೇವ್ ಸರ್ಕಾರವು ಕೃಷಿ ಕಾರ್ಮಿಕರಿಗಾಗಿ ಆರಂಭಿಸಿದೆ. ಭೂರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ 10,000 ರೂ. ಸಹಾಯಧನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.  ಇದಕ್ಕಾಗಿ ಛತ್ತೀಸ್‌ಗಢ ಸರ್ಕಾರದ ಬಜೆಟ್‌ನಲ್ಲಿ 500 ಕೋಟಿ ರೂ.ಮೀಸಲಿರಿಸಿದೆ

ತೆಂದು ಎಲೆ ಕೃಷಿಕರಿಗೆ ಬಂಬಾಟ್ ಲಾಭ
ಈ ಕುರಿತು ಮಾತನಾಡಿರುವ ರಾಜ್ಯ ಹಣಕಾಸು ಸಚಿವ ಒ.ಪಿ.ಚೌಧರಿ, ನಮ್ಮ ಅರಣ್ಯವಾಸಿಗಳ ಆದಾಯದ ಮುಖ್ಯ ಮೂಲ ಅರಣ್ಯ ಉತ್ಪನ್ನವಾಗಿದೆ. ಅವರನ್ನು ಆರ್ಥಿಕವಾಗಿ ಬಲಪಡಿಸಲು, ವಿಷ್ಣುದೇವ್ ಸರ್ಕಾರವು ತೆಂದು ಎಲೆ ಸಂಗ್ರಹಕಾರರ ಸಂಭಾವನೆಯನ್ನು ಪ್ರತಿ ಮಾನಕ ಚೀಲಕ್ಕೆ 4000 ರೂ.ನಿಂದ 5,500 ರೂ.ಗೆ ಹೆಚ್ಚಿಸಿದೆ.

ಇದನ್ನೂ ಓದಿ-Free Heath Insurance: ಬಡ-ಶ್ರೀಮಂತ ಎನ್ನದೆ ಎಲ್ಲಾ ಕುಟುಂಬಗಳಿಗೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆ ಘೋಷಿಸಿದೆ ಈ ರಾಜ್ಯ ಸರ್ಕಾರ!

ನಮ್ಮ ರೈತರು ನಮ್ಮ ಆರ್ಥಿಕತೆಯ ಬೆನ್ನೆಲುಬು ಎಂದು ಹಣಕಾಸು ಸಚಿವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಈ ಬೆನ್ನೆಲುಬನ್ನು ಬಲಪಡಿಸಲು ವಿಷ್ಣುದೇವ್ ಸಾಯಿ ಅವರ ನೇತೃತ್ವದಲ್ಲಿ ಛತ್ತೀಸ್‌ಗಢ ಸರ್ಕಾರದ ಮೊದಲ ಬಜೆಟ್‌ನಲ್ಲಿ ಕೃಷಕ್ ಉನ್ನತಿ ಯೋಜನೆಯಡಿ 10,000 ಕೋಟಿ ರೂ. ಮೀಸಲಿರಿಸಿದೆ, ಇದರಿಂದ ರಾಜ್ಯದ 24.72 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 02 ಲಕ್ಷ 30 ಸಾವಿರ ಹೆಚ್ಚು ರೈತರಿಗೆ ಇದರಿಂದ ಅನುಕೂಲವಾಗಲಿದೆ.

ಇದನ್ನೂ ಓದಿ-Gold Scheme: ಶೀಘ್ರದಲ್ಲೇ ಮತ್ತೆ ಆರಂಭವಾಗಲಿದೆ ಅಗ್ಗದ ಚಿನ್ನ ಮಾರಾಟದ ಈ ಯೋಜನೆ, ಕೈಯಲ್ಲಿ ಹಣ ಇಟ್ಟುಕೊಳ್ಳಿ!

ನೂತನ ಸರಕಾರದ ಬಜೆಟ್ ನಲ್ಲಿ ಸೋಲಾರ್ ಸಮುದಾಯ ನೀರಾವರಿ ಯೋಜನೆಗೆ 30 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಈ ಯೋಜನೆಯಡಿ 795 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News