Convenience Fee on Mobile Recharge : ನೀವು ಕೂಡಾ Google Pay ಮೂಲಕ ನಿಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡುವವರಾದರೆ ಈ ಸುದ್ದಿಯನ್ನು ನೀವು ಓದಲೇ ಬೇಕು. Google Pay ಯುಪಿಐ ಬಳಸಿ ತಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಶುಲ್ಕವನ್ನು ವಿಧಿಸಲು (Convenience Fee)ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ಕಂಪನಿಯು 3 ರೂ.ವರೆಗೆ ಶುಲ್ಕವನ್ನು ವಿಧಿಸುತ್ತಿದೆ. Google Pay ಮೂಲಕ ಪ್ರಿಪೇಯ್ಡ್ ಯೋಜನೆಗಳನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಈ ಶುಲ್ಕ ಅನ್ವಯವಾಗುತ್ತದೆ. ಈ ಮೊದಲು ಈ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿತ್ತು. ಟೆಲಿಕಾಂ ಆಪರೇಟರ್ ವಿಧಿಸಿದ ಹಣವನ್ನು ಮಾತ್ರ ಬಳಕೆದಾರರು ಪಾವತಿಸಬೇಕಾಗಿತ್ತು.


COMMERCIAL BREAK
SCROLL TO CONTINUE READING

ಅಧಿಕೃತ ಮಾಹಿತಿ ನೀಡಿಲ್ಲ : 
ನೀವು  ಗೂಗಲ್ ಪೇ ಮೂಲಕ ರೀಚಾರ್ಜ್ ಮಾಡುತ್ತಿದ್ದರೂ ಈ ವಿಷಯವನ್ನು ಇಲ್ಲಿಯವರೆಗೆ ಗಮನಿಸಿರಲಿಕ್ಕಿಲ್ಲ. ಆದರೆ ಈಗ Google Pay ಕೂಡಾ Paytm ಮತ್ತು PhonePe ಪಟ್ಟಿಗೆ ಸೇರಿಕೊಂಡಿದೆ. Paytm ಮತ್ತು PhonePe ಕಳೆದ ಹಲವು ದಿನಗಳಿಂದ ಮೊಬೈಲ್ ರೀಚಾರ್ಜ್‌ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ. ಮೊಬೈಲ್ ರೀಚಾರ್ಜ್‌ನಲ್ಲಿ ವಿಧಿಸಲಾಗುವ Convenience Fee ಕುರಿತು Google ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.


ಇದನ್ನೂ ಓದಿ : ಹಣ ಹೂಡಿಕೆ ಮಾಡುವ ಈ ಜಬರ್ದಸ್ತ್ ಐಡಿಯಾ ನಿಮಗೆ ತಿಳಿದಿರಲಿ!


100 ರೂ.ವರೆಗಿನ ರೀಚಾರ್ಜ್‌ಗೆ ಶುಲ್ಕ ಅನ್ವಯಿಸುವುದಿಲ್ಲ : 
ಬಳಕೆದಾರರೊಬ್ಬರು ತಮ್ಮ ಮೊಬೈಲ್ ಅನ್ನು Google Pay ಮೂಲಕ ರೀಚಾರ್ಜ್ ಮಾಡುವ ವೇಳೆ ಇದು ಬೆಳಕಿಗೆ ಬಂದಿದೆ. ಬಳಕೆದಾರರು ತಮ್ಮ ಮೊದಲ ರೀಚಾರ್ಜ್ ಅನ್ನು ನವೆಂಬರ್ 11 ರಂದು ಮಾಡಿದ್ದಾರೆ. ಆದರೆ ಆ ವೇಳೆ ಅವರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ತೆಗೆದುಕೊಳ್ಳಲಾಗಿಲ್ಲ. ಆದರೆ ನಂತರದ ರಿಚಾರ್ಜ್ ಗೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ ಎನ್ನಲಾಗಿದೆ.   ಮಾಹಿತಿಯ ಪ್ರಕಾರ, Google Pay ಮೂಲಕ  100 ರೂ.ವರೆಗೆ ರೀಚಾರ್ಜ್ ಮಾಡಿದರೆ, ಯಾವುದೇ  ರೀತಿಯ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


ಇದಲ್ಲದೇ 100 ರಿಂದ 200 ರೂ.ಗಳ ರೀಚಾರ್ಜ್‌ಗೆ 2 ರೂ. ಮತ್ತು 300 ರೂ. ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ಗೆ 3 ರೂ.ಗಳಷ್ಟು ಹಣವನ್ನು ನೀಡಬೇಕಾಗುತ್ತದೆ. ಈ ಹೆಚ್ಚುವರಿ ಶುಲ್ಕ ಪಾವತಿಸುವುದನ್ನು ತಪ್ಪಿಸಬೇಕಾದರೆ ಆಪರೇಟರ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೇರವಾಗಿ ರೀಚಾರ್ಜ್ ಮಾಡಬಹುದು. Paytm ಮತ್ತು PhonePeನಂತಹ ಪಾವತಿ ಸೇವಾ ಪೂರೈಕೆದಾರ ಅಪ್ಲಿಕೇಶನ್‌ಗಳ ನಿಯಮಗಳನ್ನು ಅನುಸರಿಸಲು Google Pay ತನ್ನ ನೀತಿಯನ್ನು ಬದಲಾಯಿಸಿದೆ. 


ಇದನ್ನೂ ಓದಿ : ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ