ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ! ಇನ್ನು ಕೆಲವೇ ಗಂಟೆಗಳಲ್ಲಿ ಹೊರ ಬೀಳುವುದು ಮಾಹಿತಿ
7th Pay Commission DA Hike: ಉದ್ಯೋಗಿಗಳು ಮತ್ತು ಪಿಂಚಣಿದಾರರು ಇಂದು ಒಳ್ಳೆಯ ಸುದ್ದಿಯಾಗಿರಲಿದೆ. ಈ ಬಾರಿ ಸರ್ಕಾರ ಶೇ. 4ರಷ್ಟು ಡಿಎ ಹೆಚ್ಚಿಸುವ ನಿರೀಕ್ಷೆ ಇದೆ. ಹೀಗಾದರೆ ಸರ್ಕಾರಿ ನೌಕರರು ಪಡೆಯುವ ಡಿಎ ಶೇ.42ಕ್ಕೆ ಏರಿಕೆಯಾಗಲಿದೆ.
7th Pay Commission DA Hike : ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಡಿಎ / ಡಿಆರ್ ಹೆಚ್ಚಳಕ್ಕಾಗಿ ಅನೇಕ ಸಮಯಗಳಿಂದ ಕಾಯುತ್ತಿದ್ದಾರೆ. ನೌಕರರ ನಿರೀಕ್ಷೆ ಇದೀಗ ಕೈಗೊಡುವ ಸಮಯ ಸನಿಹವಾಗಿದೆ. ಉದ್ಯೋಗಿಗಳು ಮತ್ತು ಪಿಂಚಣಿದಾರರು ಇಂದು ಒಳ್ಳೆಯ ಸುದ್ದಿಯಾಗಿರಲಿದೆ. ಈ ಬಾರಿ ಸರ್ಕಾರ ಶೇ.4ರಷ್ಟು ಡಿಎ ಹೆಚ್ಚಿಸುವ ನಿರೀಕ್ಷೆ ಇದೆ. ಹೀಗಾದರೆ ಸರ್ಕಾರಿ ನೌಕರರು ಪಡೆಯುವ ಡಿಎ ಶೇ.42ಕ್ಕೆ ಏರಿಕೆಯಾಗಲಿದೆ.
ಜನವರಿ 1 ರಿಂದ ಅನ್ವಯವಾಗಲಿದೆ ಹೆಚ್ಚಳವಾದ ಡಿಎ :
ಸೆಪ್ಟೆಂಬರ್ 28, 2022 ರಂದು ಡಿಎ ಹೆಚ್ಚಳವಾದ ನಂತರ ಕೇಂದ್ರ ನೌಕರರು ಶೇಕಡಾ 38 ರಷ್ಟು ಡಿಎ ಪಡೆಯುತ್ತಿದ್ದಾರೆ. ಶೇ .4 ರಷ್ಟು ಡಿಎ ಹೆಚ್ಚಳದೊಂದಿಗೆ ಜುಲೈ 1, 2022 ರಿಂದ ಜಾರಿಗೊಳಿಸಲಾಗಿದೆ. ಇದಾದ ಬಳಿಕ ಇಂದು ಮತ್ತೆ ಡಿಎ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಮಾರ್ಚ್ 14 ರಂದೇ ಸಭೆ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಸಭೆ ಇಂದು ಅಂದರೆ ಮಾರ್ಚ್ 17 ರಂದು ನಡೆಯುತ್ತಿದೆ.
ಇದನ್ನೂ ಓದಿ : ಬದಲಾಗಿದೆ ನಿಯಮ ! ದಿವ್ಯಾಂಗರು ಸರ್ಕಾರದ ಯೋಜನೆಯ ಲಾಭ ಪಡೆಯಬೇಕಾದರೆ ಇನ್ನು ಈ ದಾಖಲೆ ಅಗತ್ಯ
ಮಾರ್ಚ್ ತಿಂಗಳ ವೇತನದಲ್ಲಿ ಆಗಲಿದೆ ಲಾಭ :
ಇದನು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಮಾರ್ಚ್ ತಿಂಗಳ ವೇತನ ಮತ್ತು ಪಿಂಚಣಿಯಲ್ಲಿ ಹೆಚ್ಚಿದ ಡಿಎ ಮತ್ತು ಡಿಎ ಲಾಭವನ್ನು ನೌಕರರು ಪಡೆಯಲಿದ್ದಾರೆ. ಎರಡು ತಿಂಗಳ ಬಾಕಿ ಡಿಎ ಕೂಡಾ ಈ ವೇತನದಲ್ಲಿ ಸೇರ್ಪಡೆಯಾಗಲಿದೆ.
ಇದಲ್ಲದೆ, ತಿಂಗಳಿಗೆ 56,900 ರೂ. ಮೂಲ ವೇತನ ಹೊಂದಿರುವವರು ಪ್ರತಿ ತಿಂಗಳು 2,276 ರೂಪಾಯಿ ಲಾಭವನ್ನು ಪಡೆಯಲಿದ್ದಾರೆ. ವಾರ್ಷಿಕ ವೇತನದ ಆಧಾರದ ಮೇಲೆ 27,312 ರೂ.ಗಳಷ್ಟು ಹೆಚ್ಚಾಗುತ್ತದೆ ಎಂದರ್ಥ. ಡಿಎ ಮತ್ತು ಡಿಆರ್ ಹೆಚ್ಚಳದಿಂದ ಲಕ್ಷಾಂತರ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಇದನ್ನೂ ಓದಿ : ಎಸ್‌ಬಿಐ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಇಂದಿನಿಂದ ಬದಲಾಗಲಿದೆ ಈ ನಿಯಮ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.