UDID Enrolment Number : ನಿಮ್ಮ ಕುಟುಂಬದಲ್ಲಿ ವಿಕಲ ಚೇತನರು ಅಥವಾ ದಿವ್ಯಾಂಗರು ಇದ್ದರೆ ಇದು ಅತ್ಯಂತ ಮುಖ್ಯವಾದ ಸುದ್ದಿಯಾಗಿದೆ. ಯಾಕೆಂದರೆ ಸರ್ಕಾರದಿಂದ ಪಡೆಯವ ಯೋಜನೆಗಳ ಕುರಿತು ಇದೀಗ ಮಹತ್ತರ ಮಾಹಿತಿ ಹೊರ ಬಿದ್ದಿದೆ. ವಿಕಲಚೇತನರಿಗಾಗಿ ಸರ್ಕಾರ ಒಟ್ಟು 17 ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸಿವೆ.
ಬದಲಾದ ನಿಯಮ ಏಪ್ರಿಲ್ 1, 2023 ರಿಂದ ಅನ್ವಯ :
ಸರ್ಕಾರ ವಿಕಲ ಚೇತನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿಕಲ ಚೇತನರಿಗೆ ಸಹಾಯವಾಗಲಿ ಎನ್ನವ ಉದ್ದೇಶದಿಂದ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕಾದರೆ ಈ ಒಂದು ದಾಖಲೆ ಅಗತ್ಯವಾಗಿದೆ. ಇದು ಇಲ್ಲವಾದಲ್ಲಿ ದಿವ್ಯಾಂಗರಿಗೆ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗದೆ ಹೋಗಬಹುದು. ಏಪ್ರಿಲ್ 1, 2023 ರಿಂದ, ವಿಕಲಾ ಚೇತನರು ಸರ್ಕಾರಿ ಯೋಜನಗೆಳ ಲಾಭ ಪಡೆಯಬೇಕಾದರೆ ಕೇಂದ್ರವು ನೀಡುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಯುಡಿಐಡಿ ಕಾರ್ಡ್ ಇಲ್ಲದಿರುವವರು ವಿಕಲಚೇತನ ಪ್ರಮಾಣಪತ್ರದೊಂದಿಗೆ ಯುಡಿಐಡಿ ನೋಂದಣಿ ಸಂಖ್ಯೆಯನ್ನು ಒದಗಿಸಬೇಕು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ : Good News: ಶ್ರೀಸಾಮಾನ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ!
ಯುಡಿಐಡಿ ಸಂಖ್ಯೆ ಲಭ್ಯವಿದ್ದಲ್ಲಿ ಅಂಗವೈಕಲ್ಯ ಪ್ರಮಾಣಪತ್ರದ ಭೌತಿಕ ಪ್ರತಿ ಅಥವಾ ಅಂಗವೈಕಲ್ಯ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡುವ ಅಗತ್ಯ ವಿಲ್ಲ ಎಂದು ಇಲಾಖೆ ನೀಡಿದ ನೋಟಿಫಿಕೆಶನ್ ನಲ್ಲಿ ತಿಳಿಸಲಾಗಿದೆ.
ಯುಡಿಐಡಿ ಸಂಖ್ಯೆ ಪಡೆಯುವುದು ಹೇಗೆ ? :
1: ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಯುಡಿಐಡಿ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಲು ರಿಜಿಸ್ಟರ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
2: PwD ಸಿಸ್ಟಮ್‌ಗೆ ಲಾಗ್ ಇನ್ ಮಾಡಿ Apply online for Disability Certificate ಮೇಲೆ ಕ್ಲಿಕ್ ಮಾಡಿ.
3: ಕಲರ್ ಪಾಸ್‌ಪೋರ್ಟ್ ಫೋಟೋ ಮತ್ತು ಅಗತ್ಯವಿರುವಂತೆ ಆದಾಯ ಪುರಾವೆ, ಗುರುತಿನ ಪುರಾವೆ ಮತ್ತು SC/ST/OBC ಪುರಾವೆಗಳಂತಹ ಇತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
4:CMO ಕಚೇರಿ/ವೈದ್ಯಕೀಯ ಪ್ರಾಧಿಕಾರಕ್ಕೆ ಡೇಟಾ ಸಲ್ಲಿಕೆಯಾಗುತ್ತದೆ.
5: ನಂತರ ಸಲ್ಲಿಕೆಯಾದಾಗ ಡೇಟಾವನ್ನು CMO ಕಚೇರಿ/ವೈದ್ಯಕೀಯ ಪ್ರಾಧಿಕಾರವು ಪರಿಶೀಲಿಸುತ್ತದೆ.
6: ಸಲ್ಲಿಕೆಯಾದ ಡೇಟಾ ಪರಿಶೀಲನೆಗೆ ಸಂಬಂಧಪಟ್ಟ ತಜ್ಞರನ್ನು CMO ಕಚೇರಿ ಅಥವಾ ವೈದ್ಯಕೀಯ ಪ್ರಾಧಿಕಾರವು ನಿಯೋಜಿಸುತ್ತದೆ.
7: ತಜ್ಞ ವೈದ್ಯರು PwD ಯ ಅಂಗವೈಕಲ್ಯವನ್ನು ನಿರ್ಣಯಿಸುತ್ತಾರೆ ಮತ್ತು ಅಂಗವೈಕಲ್ಯದ ಬಗ್ಗೆ ಅಭಿಪ್ರಾಯ ನೀಡುತ್ತಾರೆ.
8:CMO ಕಚೇರಿ ಅಂಗವೈಕಲ್ಯ ಪ್ರಮಾಣಪತ್ರವನ್ನು ಸಿದ್ಧಪಡಿಸುತ್ತದೆ ಮತ್ತು UDID ಮತ್ತು ಅಂಗವೈಕಲ್ಯ ಪ್ರಮಾಣಪತ್ರವನ್ನು ಜನರೇಟ್ ಮಾಡುತ್ತದೆ. .
9: UDID ಡೇಟಾಶೀಟ್ UDID ಕಾರ್ಡ್ ಅನ್ನು ಮುದ್ರಣಕ್ಕೆ ಕಳುಹಿಸಲಾಗುತ್ತದೆ. ನಂತರ ಈ ಕಾರ್ಡ್ ಅನ್ನು PwD ಗೆ ರವಾನಿಸಲಾಗುತ್ತದೆ.
ಇದನ್ನೂ ಓದಿ : ಹಿರಿಯ ನಾಗರಿಕರಿಗೊಂದು ಬಂಬಾಟ್ ಸುದ್ದಿ, ತಿಂಗಳಿಗೆ 70,500 ನೀಡುವುದಾಗಿ ಘೋಷಿಸಿದೆ ಮೋದಿ ಸರ್ಕಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.