Emergency Credit Line Guarantee ಯೋಜನೆಯ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ
ECLGS Latest News: ಇಸಿಎಲ್‌ಜಿಎಸ್ ಸಾಲ ಯೋಜನೆಯ (ECLGS Loan Scheme) ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ಮುಂದುವರಿಯಲಿದ್ದು, ಡಿಸೆಂಬರ್ 31 ರವರೆಗೆ ಬ್ಯಾಂಕ್ ಗಳು ಸಾಲವನ್ನು ವಿತರಿಸಲು ಸಾಧ್ಯವಾಗಲಿದೆ.
ನವದೆಹಲಿ: ECLGS Latest News: ಕೋವಿಡ್ -19 (Covid-19)ರ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ ಮತ್ತೊಮ್ಮೆ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯ (Emergence Credit Line Guarantee Scheme) ವ್ಯಾಪ್ತಿಯನ್ನು ವಿಸ್ತರಿಸಿದೆ. ಇಸಿಎಲ್‌ಜಿಎಸ್ (ECLGS) ಯೋಜನೆಯಲ್ಲಿ, ಗರಿಷ್ಠ ಅವಧಿ 60 ತಿಂಗಳುಗಳು, ಪ್ರಾರಂಭವಾದ 24 ತಿಂಗಳವರೆಗೆ ಬಡ್ಡಿ ಮರುಪಾವತಿ ಮಾಡಲು ಮತ್ತು ಮುಂದಿನ 36 ತಿಂಗಳಲ್ಲಿ ಬಡ್ಡಿಯನ್ನು ಮರುಪಾವತಿಸಲು ಅವಕಾಶವಿದೆ. ಸರ್ಕಾರದ ಈ ನಿರ್ಧಾರವು ಹೆಚ್ಚಿನ ಸಂಖ್ಯೆಯ ಜನರಿಗೆ ಅಥವಾ ಸಣ್ಣ ಸಂಸ್ಥೆಗೆ ದೊಡ್ಡ ಪರಿಹಾರವನ್ನು ನೀಡಿದಂತಾಗಿದೆ.
ಕೊವಿಡ್ ಎರಡನೇ ಅಲೆಯಿಂದ (Covid-19 Second Wave)ಆರ್ಥಿಕ ಚಟುವಟಿಕೆಗಳು ಕುಂಠಿತ
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಅಧ್ಯಕ್ಷ ದಿನೇಶ್ ಖಾರಾ, ಕೋವಿಡ್‌ನ ಎರಡನೇ ಅಲೆಯು ಆರ್ಥಿಕ ಚಟುವಟಿಕೆಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ.ಅದರಲ್ಲೋ ವಿಶೇಷವಾಗಿ SMEಗಳ ಮೇಲಂತೂ ವಿಪರೀತ ಪರಿಣಾಮ ಉಂಟಾಗಿದೆ. ಮೇ 5 ರ ಸುತ್ತೋಲೆಯಲ್ಲಿ ರಿಸರ್ವ್ ಬ್ಯಾಂಕ್ (Reserve Bank Of India) ಅನೇಕ ಪರಿಹಾರಗಳನ್ನು ನೀಡಲು ಪ್ರಯತ್ನಿಸಿದೆ ಎಂದು ಅವರು ಹೇಳಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಆಕ್ಸಿಜನ್ ಸ್ಥಾವರಕ್ಕೆ 2 ಕೋಟಿ ವರೆಗೆ ಶೇ.7.5% ಬಡ್ಡಿಯಂತೆ ಬ್ಯಾಂಕ್ ಗಳ ಮೂಲಕ 5 ವರ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ-PM Modi Big Announcement: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ಪರಿಹಾರ ಧನ
ಈ ಸ್ಕೀಮ್ ವ್ಯಾಪ್ತಿ ಸೆಪ್ಟೆಂಬರ್ 30ರವರೆಗೆ ಇರಲಿದೆ
ಇಸಿಎಲ್‌ಜಿಎಸ್ ಸಾಲ (ECLGS Loan) ಯೋಜನೆಯ ಅವಧಿ ಸೆಪ್ಟೆಂಬರ್ 30 ರವರೆಗೆ ಮುಂದುವರಿಯಲಿದ್ದು, ಡಿಸೆಂಬರ್ 31 ರವರೆಗೆ ಬ್ಯಾಂಕ್ ಗಳು ಸಾಲವನ್ನು ವಿತರಿಸಲು ಸಾಧ್ಯವಾಗಲಿದೆ. ಸ್ಟೇಟ್ ಬ್ಯಾಂಕ್ ECLGS ಯೋಜನೆಯಡಿ 2000 ಕೋಟಿ ರೂ.ಗಳ ಸಾಲವನ್ನು ವಿತರಿಸುವ ಗುರಿ ಹೊಂದಿದೆ ಎಂದು ಎಸ್‌ಬಿಐ ಅಧ್ಯಕ್ಷರು ತಿಳಿಸಿದ್ದಾರೆ. ಈ ಯೋಜನೆಯಡಿ ಇದುವರೆಗೆ 2,45,000 ಕೋಟಿ ಸಾಲ ನೀಡಲಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಪ್ರತಿ ಸಾಲಗಾರರ ಉಪರ್ ಲಿಮಿಟ್ 200 ಕೋಟಿ ಮಾತ್ರ ಎಂದು ಅವರು ಹೇಳಿದ್ದಾರೆ. ಚಿಕಿತ್ಸೆಗಾಗಿಯೂ ಕೂಡ ವೈಯಕ್ತಿಕ ಚಿಕಿತ್ಸೆಗಾಗಿ ಇದುವರೆಗೆ ಕೇವಲ ಪರ್ಸನಲ್ ಲೋನ್ ಆಯ್ಕೆ ಮಾತ್ರ ಇತ್ತು. ಆದರೆ, ಇನ್ಮುಂದೆ ಚಿಕಿತ್ಸೆಗಾಗಿಯೂ ಕೂಡ 5 ಲಕ್ಷ ರೂ.ಗಳ ವರೆಗೆ ಸಾಲ ನೀಡಬಹುದು. ಇಂತಹ ಸಾಲದ (Bank Loan) ಮೇಲಿನ SBI ಬಡ್ಡಿದರ ಶೇ.8.5 ರಷ್ಟಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ- PF ಖಾತೆದಾರರಿಗೆ ಉಚಿತವಾಗಿ ಸಿಗಲಿದೆ 7 ಲಕ್ಷ ರೂಪಾಯಿಗಳ ವಿಮೆ
ಮೇ ತಿಂಗಳ ಕಲೆಕ್ಷನ್ ಮೇಲೆ ಪ್ರಭಾವ ಕಂಡುಬಂದಿದೆ
IBA ಚೇರ್ಮನ್ ರಾಜ್ ಕಿರಣ್ ರಾಯ್ ಹೇಳುವ ಪ್ರಕಾರ, ಏಪ್ರಿಲ್ ತಿಂಗಳ ಕಲೆಕ್ಷನ್ ಮೇಲೆ ಹೆಚ್ಚು ಪರಿಣಾಮ ಕಂಡು ಬಂದಿರಲಿಲ್ಲ ಆದರೆ, ಅದಕ್ಕೆ ವಿಪರೀತ ಎಂಬಂತೆ ಮೇ ತಿಂಗಳ ಕಲೆಕ್ಷನ್ ಪ್ರಭಾವಕ್ಕೆ ಒಳಗಾಗಿದೆ. ಇದಲ್ಲದೆ ರಿಟೇಲ್ ಸಾಲ ಪಡೆದವರಿಗೆ ರೀಸ್ಟ್ರಕ್ಚರಿಂಗ್ ಅವಕಾಶ ಈಗಾಗಲೇ ಕಲ್ಪಿಸಲಾಗುತ್ತಿದೆ ಎಂದು ರಾಯ್ ಹೇಳಿದ್ದಾರೆ.
ಇದನ್ನೂ ಓದಿ-Black Fungus ಬಳಿಕ ಇದೀಗ ಕೋರೋನಾ ರೋಗಿಗಳ ಮೇಲೆ ಮತ್ತೊಂದು ಕಾಯಿಲೆಯ ದಾಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ