ನವದೆಹಲಿ: PM Modi Big Announcement ಕೊರೊನಾ ಮಹಾಮಾರಿಯ (Corona Pandemic) ಕಾರಣ ಅನಾಥರಾಗಿರುವ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Modi), 'ಕೊರೊನಾದಲ್ಲಿ (Covid-19) ತಮ್ಮ ತಾಯಿ-ತಂದೆಯರನ್ನು ಕಳೆದುಕೊಂಡ ಎಲ್ಲ ಮಕ್ಕಳಿಗೆ 'PM Cares For Children' ಯೋಜನೆಯ ಅಡಿ ನೆರವು ನೀಡಲಾಗುವುದು. ಈ ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಮಾಸಿಕ ಸ್ಟೈಪೆಂಡ್ (Monthly Stipend) ಹಾಗೂ 23 ವರ್ಷ ತುಂಬಿದ ಬಳಿಕ ಪಿಎಂ ಕೆಯರ್ಸ್ ನಿಧಿಯಿಂದ 10 ಲಕ್ಷ ಫಂಡ್ ಸಿಗಲಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ- 5 ರೂ.ಗಳ ಈ ನೋಟು ನಿಮಗೆ ದೊಡ್ಡ ಆದಾಯ ನೀಡಲಿದೆ, ಇದರಲ್ಲಡಗಿವೆ ವಿಶೇಷ ಸಂಗತಿಗಳು
Supporting our nation’s future!
Several children lost their parents due to COVID-19. The Government will care for these children, ensure a life of dignity & opportunity for them. PM-CARES for Children will ensure education & other assistance to children. https://t.co/V3LsG3wcus
— Narendra Modi (@narendramodi) May 29, 2021
ಇದನ್ನೂ ಓದಿ-EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ
5 ಲಕ್ಷ ರೂ.ಗಳ ಉಚಿತ ವಿಮಾ ಹಾಗೂ ಬಡ್ಡಿರಹಿತ ಸಾಲ
ಈ ಕುರಿತು PMO ನೀಡಿರುವ ಮಾಹಿತಿ ಪ್ರಕಾರ, ಕೊರೊನಾ ಕಾರಣ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಅಷ್ಟೇ ಅಲ್ಲ ಉನ್ನತ ಶಿಕ್ಷಣ ಪಡೆಯಲು ಬಯಸುವ ಮಕ್ಕಳಿಗೆ ಅವರ ಪಡೆಯುವ ಸಾಲದಲ್ಲಿ (Education Loan) ಸರ್ಕಾರ ಅವರಿಗೆ ಸಹಾಯ ಮಾಡಲಿದೆ. ಹೇಳಿಕೆಯ ಪ್ರಕಾರ ಈ ಸಾಲದ ಬಡ್ಡಿಯನ್ನು ಪಿಎಂ ಕೆಯರ್ಸ್ ಫಂಡ್ ನಿಂದ ಪಾವತಿಸಲಾಗುವುದು ಎನ್ನಲಾಗಿದೆ. ಇದಲ್ಲದೆ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಅಡಿ 18 ವರ್ಷಗಳವರೆಗೆ ಮಕ್ಕಳಿಗೆ 5 ಲಕ್ಷ ರೂ.ಗಳ ವರೆಗೆ ಉಚಿತ ಆರೋಗ್ಯ ವಿಮಾ ಕೂಡ ಸಿಗಲಿದೆ ಹಾಗೂ ಪಿಎಂ ಕೆಯರ್ಸ್ ಫಂಡ್ (PM Cares Fund) ನಿಂದ ಅದರ ಪ್ರಿಮಿಯಂ ಪಾವತಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.