ಬೆಂಗಳೂರು : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತಿಗೆ ನೋಂದಣಿ ಆರಂಭವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಈಗಾಗಲೇ ರೈತರ ಖಾತೆ ಸೇರಿದೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ. ನೀಡಲಾಗುವುದು. 


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರ ಈ ಮೊತ್ತವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ವರ್ಗಾಯಿಸುತ್ತದೆ. ಇದುವರೆಗೆ ಸರ್ಕಾರ ರೈತರ ಖಾತೆಗೆ 15 ಕಂತುಗಳ ಹಣವನ್ನು ವರ್ಗಾಯಿಸಿದೆ. ಒಂದು ವೇಳೆ ಈ ಯೋಜನೆಯ ಪ್ರಯೋಜನಗಳನ್ನು ನೀವು ಇಲ್ಲಿಯವರೆಗೆ ಪಡೆಯಲು ಸಾಧ್ಯವಾಗದಿದ್ದರೆ, 16 ನೇ ಕಂತಿಗೆ ನೋಂದಾಯಿಸಿಕೊಳ್ಳಬಹುದು.


ಇದನ್ನೂ ಓದಿ : ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ! ರೈತರಿಗೆ ಸರ್ಕಾರದ ಯೋಜನೆ


ಪ್ರಧಾನ ಮಂತ್ರಿ ಕಿಸಾನ್ ಯೋಜನೆಗಾಗಿ ನೋಂದಾಯಿಸಲು ಯಾವುದೇ ಸರ್ಕಾರಿ ಕಚೇರಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತೇ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯ ಪ್ರಯೋಜನವು ಅರ್ಹ ರೈತರಿಗೆ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಗಾಗಿ ರೈತರು  pmkisan.gov.in ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.  ಮನೆಯಿಂದಲೇ ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವ ಹಂತ ಹಂತದ ಮಾಹಿತಿ ಇಲ್ಲಿದೆ. 


ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸುವುದು ಹೇಗೆ ? : 
1 - ಮೊದಲು ಸರ್ಕಾರಿ ಪೋರ್ಟಲ್ pkisan.gov.in ನಲ್ಲಿ PM ಕಿಸಾನ್ ಯೋಜನೆಗೆ ಲಾಗಿನ್ ಆಗಬೇಕು.
2 - ಪೋರ್ಟಲ್‌ನಲ್ಲಿ ನೀವು 'ಫಾರ್ಮರ್ಸ್ ಕಾರ್ನರ್' ಮೇಲೆ ಕ್ಲಿಕ್ ಮಾಡಿ ಮತ್ತು 'New Farmer Registration'ಆಯ್ಕೆಯನ್ನು ಆರಿಸಬೇಕಾಗುತ್ತದೆ.
3 - ಈಗ ನಗರವನ್ನು ಆಯ್ಕೆ ಮಾಡಿಕೊಳ್ಳಬೇಕು. 
4 - ಮುಂದಿನ ಪುಟದಲ್ಲಿ ನೀವು ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ರಾಜ್ಯವನ್ನು ಆಯ್ಕೆ ಮಾಡಬೇಕು. ಇದರ ನಂತರ 'Get OTP' ಮೇಲೆ ಕ್ಲಿಕ್ ಮಾಡಿ.
5 - ಮೊಬೈಲ್ ನಲ್ಲಿ ಸ್ವೀಕರಿಸಿದ OTP ಯನ್ನು ನಮೂದಿಸಿ ಮತ್ತು 'ಪ್ರೋಸೀಡ್ ಫಾರ್ ರಿಜಿಸ್ಟ್ರೇಶನ್ ಆಯ್ಕೆಯನ್ನು ಆರಿಸಿ.
6 - ಮುಂದಿನ ಪುಟದಲ್ಲಿ ನಿಮ್ಮ ಬ್ಯಾಂಕ್ ಖಾತೆ ಮತ್ತು ಇತರ ವಿನಂತಿಸಿದ ಮಾಹಿತಿಯನ್ನು ಒದಗಿಸಬೇಕು. ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್‌ನ ಪ್ರಕಾರ ಮಾತ್ರ ನೀವು ಈ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. 
7–ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. 
8 - ಈಗ ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTPಯನ್ನು ನಮೂದಿಸಿ ಸಬ್ಮಿಟ್ ಮಾಡಿ. 
9 -ಮುಂದಿನ ಪುಟದಲ್ಲಿ, ನಿಮ್ಮ ಕೃಷಿ ಸಂಬಂಧಿತ ವಿವರಗಳು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. 
10 - ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ನೋಂದಣಿ ಪೂರ್ಣಗೊಂಡಿದೆ  ಎನ್ನುವ ಸಂದೇಶ ನಿಮ್ಮ ಮೊಬೈಲ್ ಗೆ  ಬರುತ್ತದೆ. 


ಇದನ್ನೂ ಓದಿ : Maruti Suzuki EV SUV: ಈ ದಿನ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ


ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಕೆಲವು ಅಗತ್ಯ ಷರತ್ತುಗಳು : 
* ಈ ಯೋಜನೆಯ ಪ್ರಯೋಜನವು 2 ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಲಭ್ಯವಿರುತ್ತದೆ.
* ಇದರಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರು ಅಥವಾ ನಿವೃತ್ತರಾದ ರೈತ ಕುಟುಂಬಗಳನ್ನು ಹೊರಗಿಡಲಾಗಿದೆ.
* ಹೆಚ್ಚುವರಿಯಾಗಿ, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಲಾಗಿಲ್ಲ.
* 10,000 ರೂ.ಗಿಂತ ಹೆಚ್ಚು ಮಾಸಿಕ ಪಿಂಚಣಿ ಪಡೆಯುವ ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರು ಸೇರಿದಂತೆ ವೃತ್ತಿಪರರನ್ನು ಸಹ ಯೋಜನೆಯಿಂದ ಹೊರಗಿಡಲಾಗಿದೆ.
* ಆದಾಯ ತೆರಿಗೆ ಪಾವತಿಸುವ ರೈತರನ್ನೂ ಈ ಯೋಜನೆಯಿಂದ ಹೊರಗಿಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.