Maruti Suzuki EV SUV: ಈ ದಿನ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ

Maruti Suzuki EV SUV: ಭಾರತೀಯ ಮಾರುಕಟ್ಟೆಯಲ್ಲಿ ಪ್ರಸಿದ್ಧ ಕಾರು ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ. 

Written by - Yashaswini V | Last Updated : Dec 7, 2023, 12:53 PM IST
  • ಈ ಎಲೆಕ್ಟ್ರಿಕ್ ಎಸ್‌ಯುವಿ ಫುಲ್ ಚಾರ್ಜ್‌ನಲ್ಲಿ 550 ಕಿಮೀ ವ್ಯಾಪ್ತಿಯನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
  • ಇದಕ್ಕಾಗಿ ತನ್ನ ಅಸ್ತಿತ್ವದಲ್ಲಿರುವ ಘಟಕಕ್ಕೆ ಮತ್ತೊಂದು ಹೊಸ ಘಟಕವನ್ನು ಸೇರಿಸಿದೆ ಎಂದು ಕಂಪನಿ ಹೇಳಿದೆ.
Maruti Suzuki EV SUV: ಈ ದಿನ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ  title=

Maruti Suzuki EV SUV: ಭಾರತದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾದ  ಮಾರುತಿ ಸುಜುಕಿ ನೆನ್ನೆಯಷ್ಟೇ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಘೋಷಿಸಿದ್ದು, ಗುಜರಾತ್‌ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಇದನ್ನು ತಯಾರಿಸಲಾಗುವುದು ಎಂದು ಮಾಹಿತಿ ನೀಡಿದೆ. 

ಫುಲ್ ಚಾರ್ಜ್‌ನಲ್ಲಿ 550 ಕಿಮೀ ವ್ಯಾಪ್ತಿ: 
ಲೆಕ್ಟ್ರಿಕ್ ಎಸ್‌ಯುವಿ ಫುಲ್ ಚಾರ್ಜ್‌ನಲ್ಲಿ 550 ಕಿಮೀ ವ್ಯಾಪ್ತಿಯನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದಕ್ಕಾಗಿ ತನ್ನ ಅಸ್ತಿತ್ವದಲ್ಲಿರುವ ಘಟಕಕ್ಕೆ ಮತ್ತೊಂದು ಹೊಸ ಘಟಕವನ್ನು ಸೇರಿಸಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ಈ ಇವಿ ಎಸ್‌ಯುವಿ ಅನ್ನು ಮುಂದಿನ ಹಣಕಾಸು ವರ್ಷದಲ್ಲಿ  ಎಂದರೆ 2024-25 ರಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣ ಮಾಡಬಹುದು ! ಜಾರಿಯಾಗಿದೆ ಹೊಸ ನಿಯಮ

ಈ ಬಗ್ಗೆ ಮಾಹಿತಿ ನೀಡಿರುವ ಮಾರುತಿ ಸುಜುಕಿಯ ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಪೊರೇಟ್ ವ್ಯವಹಾರಗಳು) ರಾಹುಲ್ ಭಾರ್ತಿ, "ನಮ್ಮ ಮೊದಲ ಇವಿ ಎಸ್‌ಯುವಿ ಆಗಿದ್ದು ಮುಂದಿನ ಹಣಕಾಸು ವರ್ಷದಲ್ಲಿ 2024-25 ರಲ್ಲಿ ಇದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ಎಸ್ಎಂಜಿಯ ಗುಜರಾತ್ ಸ್ಥಾವರದಿಂದ ಬರಲಿದೆ.  

ಇಲ್ಲಿನ ಎಸ್‌ಎಂಜಿ ಸ್ಥಾವರದಲ್ಲಿ ಉತ್ಪಾದನೆಯಾಗಲಿರುವ ಇವಿ ಎಸ್‌ಯುವಿಯನ್ನು ರಫ್ತು ಸಹ ಮಾಡಲಾಗುವುದು. ಮಾರ್ಚ್ 2022 ರಲ್ಲಿ, ಎಸ್‌ಎಂಜಿಯ ಮೂಲ ಕಂಪನಿ ಸುಜುಕಿ ಮೋಟಾರ್ ಕಾರ್ಪೊರೇಷನ್ ಇವಿ ಉತ್ಪಾದನೆಗಾಗಿ ಹಂಸಲ್‌ಪುರ ಸ್ಥಾವರದಲ್ಲಿ ರೂ 3,100 ಕೋಟಿ ಹೂಡಿಕೆ ಮಾಡಲು ಗುಜರಾತ್ ಸರ್ಕಾರದೊಂದಿಗೆ ಎಂಒಯುಗೆ ಸಹಿ ಹಾಕಿದೆ ಎಂದು ಭಾರ್ತಿ ಹೇಳಿದರು.

ಇದನ್ನೂ ಓದಿ- ಬೆಂಗಳೂರಿನಲ್ಲಿ ವಿನೂತನ ಜಿಯೊಂಗಿ ಬಿಸಿನೆಸ್ ಸೆಂಟರ್ ಉದ್ಘಾಟನೆ

ನಮ್ಮ ಇವಿ ಕಾನ್ಸೆಪ್ಟ್ ಕಾರನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಇದು 550 ಕಿಮೀ (ಒಂದೇ ಚಾರ್ಜ್‌ನಲ್ಲಿ) ಮತ್ತು 60 ಕಿಲೋವ್ಯಾಟ್-ಗಂಟೆಯ ಬ್ಯಾಟರಿಯೊಂದಿಗೆ ಹೆಚ್ಚಿನ ನಿರ್ದಿಷ್ಟತೆಯ SUV ಆಗಿರುತ್ತದೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News