PM Jan Dhan Yojana: ದೇಶದ ಪ್ರತಿ ನಾಗರೀಕರೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು, ಇದರೊಂದಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಫಲಾನುಭವಿಗಳಿಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಮೋದಿ ಸರ್ಕಾರ 'ಜನ್ ಧನ್ ಯೋಜನೆ'ಯನ್ನು ಆರಂಭಿಸಿತು. ದೇಶದಾದ್ಯಂತ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಸುಮಾರು 47 ಕೋಟಿ ಜನರು ಖಾತೆಗಳನ್ನು ತೆರೆದಿದ್ದಾರೆ. ಆದರೆ, ಇದರ ಪ್ರಯೋಜನಗಳ ಬಗ್ಗೆ ನಮ್ಮಲ್ಲಿ ಬಹುತೇಕ ಜನರಿಗೆ ಸರಿಯಾದ ಮಾಹಿತಿಯೇ ಇಲ್ಲ. ಅಂತಹ ಪ್ರಯೋಜನಗಳಲ್ಲಿ ಒಂದು ಸರ್ಕಾರದಿಂದ ಜನ್ ಧನ್ ಖಾತೆದಾರರಿಗೆ 10 ಸಾವಿರ ರೂ.ಗಳನ್ನು ನೀಡುವುದು. 


COMMERCIAL BREAK
SCROLL TO CONTINUE READING

ಹೌದು, ಜನ್ ಧನ್ ಖಾತೆದಾರರಿಗೆ ಸರ್ಕಾರ 10 ಸಾವಿರ ರೂಪಾಯಿಗಳನ್ನು ನೀಡುತ್ತಿದೆ, ಆದರೆ ಇದಕ್ಕಾಗಿ ನೀವು ನಿಮ್ಮ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇದಲ್ಲದೇ ಈ ಖಾತೆಯಿಂದ ಹಲವು ಪ್ರಯೋಜನಗಳಿದ್ದು, ಈ ಖಾತೆಗಳಲ್ಲಿ 1 ಲಕ್ಷ 30 ಸಾವಿರ ರೂ.ಗಳ ವಿಮೆ ಲಭ್ಯವಿದೆ. ನಿಮಗೂ ಈ ಯೋಜನೆಗಳ ಬಗ್ಗೆ ತಿಳಿದಿಲ್ಲದಿದ್ದರೆ ಈ ಕುರಿತಂತೆ ಇಲ್ಲಿದೆ ಮಾಹಿತಿ.


ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಲ್ಲಿ 10 ಸಾವಿರ ರೂ. ಪಡೆಯಲು ಈ ಕೆಲಸ ಮಾಡಿ:
ಸರ್ಕಾರದ ವತಿಯಿಂದ ಜನ್ ಧನ್ ಖಾತೆಯಲ್ಲಿ ಖಾತೆದಾರರಿಗೆ ಹಲವು ರೀತಿಯ ಪ್ರಯೋಜನಗಳನ್ನು ನೀಡಲಾಗುತ್ತದೆ. ಮೊದಲ ಪ್ರಯೋಜನವೆಂದರೆ ಖಾತೆದಾರರು ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇದು ಶೂನ್ಯ ರೂ.ಗಳಲ್ಲಿ ತೆರೆಯಬಹುದಾದ ಖಾತೆ ಆಗಿದೆ.  ಇದಲ್ಲದೇ, ಜನ್ ಧನ್ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಅಷ್ಟೇ ಅಲ್ಲ, ಖಾತೆದಾರರು ಬಯಸಿದರೆ, ನೀವು ಬ್ಯಾಂಕ್‌ಗೆ ಅರ್ಜಿ ಸಲ್ಲಿಸುವ ಮೂಲಕ ಈ ಖಾತೆಯಲ್ಲಿ 10,000 ರೂ.ಗಳ ಓವರ್‌ಡ್ರಾಫ್ಟ್ ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು.


ಇದನ್ನೂ ಓದಿ- Ration Card : ಉಚಿತ ಪಡಿತರ ಪಡೆಯುವ ಫಲಾನುಭವಿಗಳಿಗೆ ಕೇಂದ್ರದಿಂದ ಸಿಹಿ ಸುದ್ದಿ!


ಜನ್ ಧನ್ ಖಾತೆಯಲ್ಲಿ 1 ಲಕ್ಷ 30 ಸಾವಿರ ರೂ.ಗಳ ವಿಮೆ ಕೂಡ ಲಭ್ಯ:
ಜನ್ ಧನ್ ಖಾತೆದಾರರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇದರಲ್ಲಿ ಖಾತೆದಾರರಿಗೆ 1 ಲಕ್ಷ ರೂಪಾಯಿ ಅಪಘಾತ ವಿಮೆ ಸೌಲಭ್ಯವೂ ಸೇರಿದೆ. ಇದಲ್ಲದೇ 30 ಸಾವಿರ ರೂಪಾಯಿಗಳ ಜೀವ ವಿಮಾ ರಕ್ಷಣೆಯನ್ನೂ ನೀಡಲಾಗುತ್ತದೆ. ಖಾತೆದಾರರು ಅಪಘಾತದಲ್ಲಿ ಮೃತಪಟ್ಟರೆ, ಆ ಖಾತೆದಾರರ ಕುಟುಂಬಕ್ಕೆ 1 ಲಕ್ಷ ರೂಪಾಯಿ ವಿಮಾ ರಕ್ಷಣೆ ನೀಡಲಾಗುತ್ತದೆ. ಮತ್ತೊಂದೆಡೆ, ಸಾಮಾನ್ಯ ಸಂದರ್ಭಗಳಲ್ಲಿ ಸಾವು ಸಂಭವಿಸಿದರೆ, ನಂತರ 30,000 ರೂಪಾಯಿಗಳ ವಿಮಾ ರಕ್ಷಣೆಯ ಮೊತ್ತವನ್ನು ನೀಡಲಾಗುತ್ತದೆ.


ಇದನ್ನೂ ಓದಿ- Bank News: ಕೋಟ್ಯಾಂತರ ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ


ಜನ್ ಧನ್ ಖಾತೆಯನ್ನು ತೆರೆಯುವುದು ಹೇಗೆ?
ನೀವು ಸಹ ಈ ಯೋಜನೆಗಳ ಲಾಭವನ್ನು ಪಡೆಯಲು ಬಯಸಿದರೆ ಮತ್ತು ಇದುವರೆಗೂ ನೀವು ಯಾವುದೇ ಬ್ಯಾಂಕಿನಲ್ಲಿ ಜನ್ ಧನ್ ಖಾತೆಯನ್ನು ತೆರೆದಿಲ್ಲ ಎಂದಾದರೆ ನೀವೂ ಕೂಡ ಈ ಖಾತೆಯನ್ನು ತೆಗೆಯಬಹುದು. ಇದಕ್ಕಾಗಿ, ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹೊಂದಿರುವುದು ಅತ್ಯಗತ್ಯವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.