ನವದೆಹಲಿ : ದೇಶಾದ್ಯಂತ ಮತ್ತೊಮ್ಮೆ ಲಾಕ್ ಡೌನ್ (Lockdown) ಆಗಲಿದ್ದು, ದೀಪಾವಳಿ ತನಕ ಎಲ್ಲಾ ರೈಲು ಸೇವೆಗಳು ಸ್ಥಗಿತಗೊಳ್ಳಲಿವೆ. ಈ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿವೆ. ನೀವು ಕೂಡಾ ಈ ಸುದ್ದಿಯನ್ನು ಸ್ವೀಕರಿಸಿದ್ದೀರಿ ಎಂದಾದರೆ ಅದನು ದೃಡೀಕರಿಸುವುದು ಬಹಳ ಮುಖ್ಯ. ಕೊರೊನಾ ವೈರಸ್‌ನ ಮೂರನೇ ಅಲೆಯನ್ನು (Coronavirus third wave)  ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಹೇರಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಈ ಮಾಹಿತಿಯನ್ನು ನೀಡಿದೆ.


COMMERCIAL BREAK
SCROLL TO CONTINUE READING

ಈ ಸುದ್ದಿಯ ಹಿಂದಿನ ಸತ್ಯ ಏನು ? 
PIB ಫ್ಯಾಕ್ಟ್ ಚೆಕ್ (PIB fact check) ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಸುದ್ದಿಯಲ್ಲಿ ಶೇರ್ ಮಾಡಿದೆ. ಕರೋನವೈರಸ್ ಸೋಂಕುಗಳ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ, ನಾಳೆ ಬೆಳಿಗ್ಗೆಯಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್ (Lockdown) ವಿಧಿಸಲಾಗುವುದು ಎಂಬ ಸುದ್ದಿಯನ್ನು ಹಬ್ಬಲಾಗುತ್ತಿದೆ.  ದೀಪಾವಳಿ ತನಕ ದೇಶದಾದ್ಯಂತ ಎಲ್ಲಾ ರೈಲು ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಆದರೆ,   ಈ ಸುದ್ದಿ ಸಂಪೂರ್ಣ ಸುಳ್ಳು . ಕೇಂದ್ರ ಸರ್ಕಾರ ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ.


ಇದನ್ನೂ ಓದಿ  : ITR filing FY 2020-21: ಎಸ್‌ಬಿಐ ಯೋನೋ ಆ್ಯಪ್‌ ಬಳಸಿ ಉಚಿತವಾಗಿ ತೆರಿಗೆ ರಿಟರ್ನ್ ಸಲ್ಲಿಸಿ, ಹೇಗೆಂದು ತಿಳಿಯಿರಿ


whatsapp message) ಬಂದಿದ್ದರೆ, ಎಚ್ಚರವಹಿಸಿ. ಇದು ಸಂಪೂರ್ಣ ನಕಲಿ ಸುದ್ದಿ. ಅದನ್ನು ನಂಬಬೇಡಿ. ಮತ್ತು ಅದನ್ನು ಬೇರೆಯವರಿಗೂ ಈ ಸುದ್ದಿಯನ್ನು ಫಾರ್ವರ್ಡ್ ಮಾಡಬೇಡಿ. ಇತ್ತೀಚಿನ ದಿನಗಳಲ್ಲಿ ಇಂತಹ ನಕಲಿ ಸಂದೇಶಗಳ ಪ್ರವೃತ್ತಿ ಬಹಳಷ್ಟು ಹೆಚ್ಚಾಗಿದೆ. ಮತ್ತು ನಕಳಿ ಸಂದೇಶಗಳ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ.


ಸರ್ಕಾರಿ ಯೋಜನೆಗಳ ಬಗ್ಗೆಯೂ  ತಪ್ಪು ಮಾಹಿತಿ : 
 ಸರ್ಕಾರಿ ನೀತಿಗಳು ಅಥವಾ ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿ ಶೇರ್ ಮಾಡುವ ಕ್ರಮವನ್ನು ಪಿಐಬಿ ಫ್ಯಾಕ್ಟ್ ಚೆಕ್ (PIB fact check) ಖಂಡಿಸುತ್ತದೆ. ಯಾವುದೇ ಸರ್ಕಾರಿ ಸಂಬಂಧಿತ ಸುದ್ದಿಗಳು ನಕಲಿ ಎಂಬ ಅನುಮಾನ ಮೂಡಿದರೆ, ನೀವು ಅದರ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್‌ಗೆ ಮಾಹಿತಿ ನೀಡಬಹುದು. ಇದಕ್ಕಾಗಿ  8799711259 ಈ ಮೊಬೈಲ್ ಸಂಖ್ಯೆ ಅಥವಾ socialmedia@pib.gov.in ಇಮೇಲ್ ಐಡಿಗೆ ನಿಮ್ಮ ಅನುಮಾನಗಳನ್ನು ಕಳುಹಿಸಬಹುದು.


ಇದನ್ನೂ ಓದಿ  : Good news...! ಕೇವಲ 634 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ