ನವದೆಹಲಿ: ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಕೇವಲ 2 ತಿಂಗಳು ಬಾಕಿಯಿದ್ದು, ಕೊನೆಯ ಕ್ಷಣದವರೆಗೂ ಕಾಯದಿರುವುದು ಉತ್ತಮ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿಮ್ಮ ಮುಂದೆ ಹಲವಾರು ಆನ್‌ಲೈನ್ ಆಯ್ಕೆಗಳು ಲಭ್ಯವಿವೆ. ಆದಾಯ ತೆರಿಗೆ ಅಧಿಕೃತ ವೆಬ್‌ಸೈಟ್ ಸೇರಿ ಎಸ್‌ಬಿಐನ ಯೋನೋ ಆ್ಯಪ್(SBI YONO App) ಕೂಡ ತುಂಬಾ ಉಪಯುಕ್ತವಾಗಿದೆ. ಸರಳ ಐಟಿಆರ್ ಫೈಲಿಂಗ್(ITR filing FY 2020-21)ಗಾಗಿ ಪ್ರಕ್ರಿಯೆಯು ಉಚಿತವಾಗಿ ಲಭ್ಯವಿದೆ.
‘ನಿಮ್ಮ ಐಟಿಆರ್ ಅನ್ನು ಯೋನೋದಲ್ಲಿ Tax2win ನೊಂದಿಗೆ ಮುಂಚಿತವಾಗಿ ಸಲ್ಲಿಸುವ ಮೂಲಕ ನೀವು ಅತ್ಯಾಕರ್ಷಕ ಪ್ರಯೋಜನಗಳನ್ನು ಪಡೆಯುತ್ತೀರಿ. ಉಚಿತ ಐಟಿಆರ್ ಫೈಲಿಂಗ್ ಜೊತೆಗೆ ನೀವು ಮುಂಚಿತವಾಗಿ ಮರುಪಾವತಿ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಸಾಕಷ್ಟು ಸಮಯ ಮತ್ತು ಇನ್ನು ಹೆಚ್ಚಿನದನ್ನು ಪಡೆಯುತ್ತೀರಿ’ ಎಂದು ಎಸ್‌ಬಿಐ(SBI) ಟ್ವೀಟ್ ಮಾಡಿದೆ.
ಇದನ್ನೂ ಓದಿ: Cheapest MPV:ಕಡಿಮೆ ವೆಚ್ಚದಲ್ಲಿ ಅತ್ಯಂತ ಅಗ್ಗದ 7 ಸೀಟರ್ ಖರೀದಿಸಬೇಕೆ? ಇಲ್ಲಿದೆ ಸುವರ್ಣಾವಕಾಶ
You get exciting benefits on filing your ITR early with Tax2win on YONO. Besides FREE filing, you also get early refunds, enough time to reconcile, and more. Download now: https://t.co/BwaxSaM77i#YONO #Tax2Win #ITR #Offer pic.twitter.com/z2e5CC9KTM
— State Bank of India (@TheOfficialSBI) October 10, 2021
ಐಟಿಆರ್ ಸಲ್ಲಿಸುವ ಮೊದಲು ಈ ದಾಖಲೆಗಳು ನಿಮ್ಮ ಬಳಿ ಇರಬೇಕು
1) ಪ್ಯಾನ್ ಕಾರ್ಡ್
2) ಆಧಾರ್ ಕಾರ್ಡ್ ಸಂಖ್ಯೆ
3) ಸಂಬಳ/ಪಿಂಚಣಿ(Salary/Pension) ಉದ್ಯೋಗದಾತರಿಂದ (ನಮೂನೆ) ನಮೂನೆ 16
4) ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿಗಾಗಿ ಬ್ಯಾಂಕ್ ಸ್ಟೇಟ್ಮೆಂಟ್/ಪಾಸ್ ಬುಕ್
5) ನಿಮ್ಮ ನಮೂನೆ 26AS ನಲ್ಲಿ ಲಭ್ಯವಿರುವಂತೆ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸಿ.
ಇದನ್ನೂ ಓದಿ: Mahindra XUV700 ಬುಕಿಂಗ್ ಮಾಡುತ್ತಿದ್ದೀರಾ? ಹಾಗಿದ್ದಲ್ಲಿ ನೀವು ಈ ಮಾಹಿತಿ ತಿಳಿದುಕೊಳ್ಳಲೇ ಬೇಕು..!
2020-21ರ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (Income Tax Return) ಸಲ್ಲಿಸುವ ಗಡುವನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮತ್ತೆ ತೆರಿಗೆದಾರರಿಗೆ ಪರಿಹಾರ ನೀಡುವ ಸಲುವಾಗಿ ವಿಸ್ತರಿಸಿದೆ ಎಂಬುದನ್ನು ಗಮನಿಸಬೇಕು. ಐಟಿಆರ್ ಸಲ್ಲಿಸುವ ಹೊಸ ಗಡುವು ಸೆಪ್ಟೆಂಬರ್ 30 ರಿಂದ ಡಿಸೆಂಬರ್ 31ಕ್ಕೆ ಬದಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ