New Packaging Law: ಎಫ್ಎಂಸಿಜಿ ಕಂಪನಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ
New Packaging Law In India: ವಿದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳ ಮೇಲೆ ಉತ್ಪನ್ನ ತಯಾರಿಸಿದ ಮೂಲ ದೇಶ ಮತ್ತು ದಿನಾಂಕ ನಮೂದಿಸುವುದು ಕಡ್ಡಾಯವಾಗಿದೆ. ಈ ಮೊದಲು ಯಾವ ನಿಯಮ ಅಸ್ತಿತ್ವದಲ್ಲಿತ್ತು ಮತ್ತು ಆ ನಿಯಮ ಬದಲಾಗಲು ಕಾರಣವೇನು ತಿಳಿದುಕೊಳ್ಳೋಣ ಬನ್ನಿ,
Packaging Policy Change: ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಅಂದರೆ ಎಫ್ಎಂಸಿಜಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಸರ್ಕಾರ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿದೆ. ಜನವರಿ 1, 2023 ರಿಂದ 'ಹೊಸ ಪ್ಯಾಕೇಜಿಂಗ್ ನಿಯಮಗಳನ್ನು' ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಡಿಸೆಂಬರ್ 1, 2022 ರಿಂದ ಈ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ, ಇದೀಗ ಈ ನಿರ್ಧಾರವನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ. ಹೊಸ ಪ್ಯಾಕೇಜಿಂಗ್ ನಿಯಮಗಳ ಪ್ರಕಾರ, ಹಾಲು, ಚಹಾ, ಬಿಸ್ಕತ್ತು, ಬೇಬಿ ಫುಡ್, ಕಾಳುಗಳು, ಬಾಟಲ್ ನೀರು, ಖಾದ್ಯ ತೈಲ, ಹಿಟ್ಟು, ಸಿಮೆಂಟ್ ಚೀಲಗಳು, ಬ್ರೆಡ್ ಮತ್ತು ಡಿಟರ್ಜೆಂಟ್ ಸೇರಿದಂತೆ 19 ರೀತಿಯ ಸರಕುಗಳ ಪ್ಯಾಕೆಟ್‌ಗಳ ಮೇಲೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಅಲ್ಲದೆ, ಆಮದು ಮಾಡಿದ ಉತ್ಪನ್ನಗಳಿಗೆ ಉತ್ಪಾದನೆಯ ದಿನಾಂಕ ಮತ್ತು ಮೂಲದ ದೇಶವನ್ನು ನಮೂದಿಸುವುದು ಕಡ್ಡಾಯವಾಗಿರಲಿದೆ.
ಉತ್ಪನ್ನದ ಪ್ರಮಾಣದ ಮಾಹಿತಿಯನ್ನೂ ಕೂಡ ನೀಡಬೇಕು
ಉತ್ಪನ್ನದ ತೂಕವು ಪ್ರಮಾಣಿತ ತೂಕಕ್ಕಿಂತ ಕಡಿಮೆ ಅಥವಾ ಹೆಚ್ಚಿದ್ದರೆ, ತಯಾರಕರು ಪ್ರತಿ ಗ್ರಾಂ ಅಥವಾ ಮಿಲಿಗೆ ಬೆಲೆಯನ್ನು ನಮೂದಿಸಬೇಕಾಗುತ್ತದೆ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.
ಈ ವರ್ಷದ ಜುಲೈನಲ್ಲಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಗುರುವಾರ ಎಲೆಕ್ಟ್ರಾನಿಕ್ ಸರಕುಗಳ ಪ್ಯಾಕೇಜಿಂಗ್‌ಗೆ ಹೊಸ ನಿಯಮಗಳನ್ನು ಹೊರಡಿಸಿತ್ತು. ಹೊಸ ನಿಯಮದ ಪ್ರಕಾರ, ಜುಲೈ 15 ಅಥವಾ ನಂತರ ತಯಾರಿಸಿದ ಉತ್ಪನ್ನಗಳ ಪ್ಯಾಕೇಜಿಂಗ್‌ನ ಸಂಪೂರ್ಣ ಮಾಹಿತಿಯೊಂದಿಗೆ ಕ್ಯೂಆರ್ ಕೋಡ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ-Employee's Pension Limit: ಇನ್ಮುಂದೆ 25000 ರೂ. ಪೆನ್ಷನ್ ಸಿಗಲಿದೆ! ಶೇ.333 ವೃದ್ಧಿ, ಹೇಗೆ ಇಲ್ಲಿ ತಿಳಿದುಕೊಳ್ಳಿ
ಪ್ಯಾಕೇಜಿಂಗ್‌ನ ಭಾಗವಾಗಿರಲಿವೆ ಈ ಮಾಹಿತಿಗಳು
ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ ಮಾಡಲಾದ ಸರಕುಗಳು) (ಎರಡನೇ ತಿದ್ದುಪಡಿ) ನಿಯಮಗಳು, 2022 ರ ನಿಯಮಗಗಳನ್ನು ಸಚಿವಾಲಯವು ಸೂಚಿಸಿದೆ, QR ಕೋಡ್‌ನ ರೂಪದಲ್ಲಿ ನಮೂದಿಸದಿದ್ದರೆ, ಮಾಹಿತಿಯು ಪ್ಯಾಕೇಜಿಂಗ್‌ನ ಭಾಗವಾಗಿರಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ-Digital Rupee: ಡಿಸೆಂಬರ್ 1 ಕ್ಕೆ ಡಿಜಿಟಲ್ ರೂಪಾಯಿ e₹-R ಬಿಡುಗಡೆ! RBI ನಿಂದ ಮಹತ್ವದ ಘೋಷಣೆ
ಈ ಕುರಿತಾದ ಪ್ರಾಸಂಗಿಕ ಸೆಕ್ಷನ್ ಮತ್ತು ಸಬ್-ಸೆಕ್ಷನ್ ಉಲ್ಲೇಖಿಸಿ ಹೇಳಿಕೆ ನೀಡಿದ್ದ ಸಚಿವಾಲಯವು "ಜುಲೈ 15 ನೇ ದಿನದ ನಂತರ ತಯಾರಿಸಲಾದ ಅಥವಾ ಪ್ಯಾಕ್ ಮಾಡಲಾದ ಅಥವಾ ಆಮದು ಮಾಡಿಕೊಳ್ಳಲಾಗುವ ಎಲೆಕ್ಟ್ರಾನಿಕ್ ಉತ್ಪನ್ನದ ಸಂದರ್ಭದಲ್ಲಿ, ಅಂತಹ ಉತ್ಪನ್ನದ ಪ್ಯಾಕೇಜ್ ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ. ಅಂತಹ ದಿನಾಂಕದಂದು ತಯಾರಕರು ಅಥವಾ ಪ್ಯಾಕರ್ ಅಥವಾ ಆಮದುದಾರರ ಹೆಸರು, ಪ್ಯಾಕೇಜ್‌ನಲ್ಲಿಯೇ ಇರಬಹುದು ಮತ್ತು ಅಂತಹ ಘೋಷಣೆಯು ವಿಳಾಸ ಮತ್ತು ಇತರ ಸಂಬಂಧಿತ ಮಾಹಿತಿಗಾಗಿ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಗ್ರಾಹಕರಿಗೆ ಸೂಚಿಸಿತ್ತು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.