Government Pension Scheme: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಒಂದು  ಮಹತ್ವದ ಸುದ್ದಿ ಪ್ರಕಟವಾಗಿದೆ. ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ಮರಣ ಹೊಂದಿದ ಸರ್ಕಾರಿ ನೌಕರರ ಮಾನಸಿಕ ವಿಕಲಚೇತನ ಮಕ್ಕಳಿಗೂ ಕೂಡ ಇನ್ಮುಂದೆ ಕುಟುಂಬ ಪಿಂಚಣಿ ಪ್ರಯೋಜನ ಸಿಗಲಿದೆ. ಅಂದರೆ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಕೂಡ ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ಹೇಳಿದೆ.


COMMERCIAL BREAK
SCROLL TO CONTINUE READING

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕುಟುಂಬ ಪಿಂಚಣಿ ಈ ಮೊದಲು ಸಿಗುತ್ತಿಲ್ಲವಾದ್ದರಿಂದ ಅವರ ಪಾಲನೆ ಮತ್ತು ಜೀವನಶೈಲಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ತಮ್ಮ ಈ ಅಗತ್ಯತೆಗಳಿಗೆ ಅವರು ಇತರರನ್ನು ಅವಲಂಭಿಸಬೇಕಾಗುತ್ತಿತ್ತು ಎಂಬುದು ಇಲ್ಲಿ ಗಮನಾರ್ಹ. 


ಮಾಹಿತಿ ನೀಡಿದ ಕೇಂದ್ರ ಸಚಿವರು
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ , 'ಇಂತಹ ಮಕ್ಕಳಿಗೆ ಕುಟುಂಬ ಪಿಂಚಣಿಯ ಲಾಭವನ್ನು ಬ್ಯಾಂಕ್‌ಗಳು ನೀಡುತ್ತಿಲ್ಲ ಎಂಬುದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಜನರೊಂದಿಗೆ ಸಂವಾದದಲ್ಲಿ ತಿಳಿದು ಬಂದಿದೆ. ಇಂತಹ ಮಾನಸಿಕ ಅಸ್ವಸ್ಥತೆ ಇರುವ ಮಕ್ಕಳಿಗೆ ಪಿಂಚಣಿ ನೀಡಲು ಬ್ಯಾಂಕ್ ಗಳು ನಿರಾಕರಿಸುತ್ತಿವೆ. ಈ ಮಕ್ಕಳಿಂದ ಪಿಂಚಣಿಯ ಲಾಭ ನೀಡಲು ಬ್ಯಾಂಕ್‌ಗಳು ನ್ಯಾಯಾಲಯ ನೀಡುವ ಗಾರ್ಡಿಯನ್ ಪ್ರಮಾಣಪತ್ರವನ್ನು ಕೇಳುತ್ತಿವೆ. ಈ ಹಿನ್ನೆಲೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಇದಕ್ಕಾಗಿ ಉತ್ತಮ ಆಡಳಿತದ ಮಂತ್ರವನ್ನು ಒತ್ತಿಹೇಳುತ್ತಿದೆ' ಎಂದಿದ್ದಾರೆ.



ಕುಟುಂಬ ಪಿಂಚಣಿಯಲ್ಲಿ ನಾಮನಿರ್ದೇಶನ ಅಗತ್ಯ
ಇದಕ್ಕೂ ಮುಂದುವರೆದು ಮಾತನಾಡಿರುವ ಕೇಂದ್ರ ಸಚಿವರು, 'ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡಲು, ನೌಕರರ ಮಕ್ಕಳು ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಕುಟುಂಬ ಪಿಂಚಣಿಯಲ್ಲಿ ನಾಮನಿರ್ದೇಶನವನ್ನು ಒದಗಿಸುವುದು ಅಗತ್ಯವಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಸಹ ನ್ಯಾಯಾಲಯದಿಂದ ಗಾರ್ಡಿಯನ್ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯಬಹುದು, ಅದನ್ನು ಸಹ ಸುಲಭಗೊಳಿಸಲಾಗಿದೆ. ಮೃತ ಸರ್ಕಾರಿ ನೌಕರನ ಮಕ್ಕಳು ನ್ಯಾಯಾಲಯದಿಂದ ಪ್ರಮಾಣಪತ್ರವನ್ನು ನೀಡಬೇಕು, ಅದರ ಆಧಾರದ ಮೇಲೆ ಕುಟುಂಬ ಪಿಂಚಣಿ ನೀಡಲಾಗುತ್ತದೆ. ಬ್ಯಾಂಕುಗಳು ಅಂತಹ ಮಕ್ಕಳಿಂದ ಪೋಷಕರ ಪ್ರಮಾಣಪತ್ರ ಒತ್ತಾಯಿಸುವಂತಿಲ್ಲ ಮತ್ತು ಅವರು ಮೊದಲು ನ್ಯಾಯಾಲಯದಿಂದ ಪ್ರಮಾಣಪತ್ರವನ್ನು ಪಡೆಯಬೇಕು ಎಂಬ ಕಾರಣಕ್ಕಾಗಿ ಪಿಂಚಣಿ ನಿರಾಕರಿಸುವಂತಿಲ್ಲ' ಎಂದಿದ್ದಾರೆ.


ಇದನ್ನೂ ಓದಿ-ಜುಲೈ 1ರಿಂದ ಹೊಸ ಕಾರ್ಮಿಕ ಕಾನೂನು! ಕೆಲಸದ ಸಮಯ, ಪಿಎಫ್ ಮತ್ತು ಇನ್-ಹ್ಯಾಂಡ್ ಸಂಬಳದಲ್ಲಿ ಬದಲಾವಣೆ


ಪ್ರಮಾಣಪತ್ರ ಇಲ್ಲದಿದ್ದರೂ ಪಿಂಚಣಿ ನೀಡಬೇಕು
ಈ ಪ್ರಕಟಣೆಯ ನಂತರ, ಯಾವುದೇ ಬ್ಯಾಂಕ್ ನ್ಯಾಯಾಲಯವು ನೀಡಿದ ಪೋಷಕರ ಪ್ರಮಾಣಪತ್ರವಿಲ್ಲ ಎಂಬ ಆಧಾರದ ಮೇಲೆ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕುಟುಂಬ ಪಿಂಚಣಿ ನೀಡಲು ನಿರಾಕರಿಸಿದರೆ, ಅದು ಕೇಂದ್ರ ನಾಗರಿಕ ಸೇವಾ (ಪಿಂಚಣಿ) ನಿಯಮಗಳು, 2021 ರ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘನೆಯಾಗುತ್ತದೆ. ಅಂದರೆ, ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ವಿರುದ್ಧ ಕ್ರಮ ಜರುಗಿಸಲಾಗುವುದು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಗು ತನ್ನ ಪೋಷಕರ ಪಿಂಚಣಿ ಯೋಜನೆಯಲ್ಲಿ ನಾಮಿನಿಯಾಗಿಲ್ಲದಿದ್ದರೆ ಮತ್ತು ನ್ಯಾಯಾಲಯದ ಪ್ರಮಾಣಪತ್ರವನ್ನು ಅವನಿಂದ ಕೋರಿದರೆ, ಅದು ಪಿಂಚಣಿ ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ.


ಇದನ್ನೂ ಓದಿ-Indian Railways: ರೈಲ್ವೆಯಿಂದ ಹೊಸ ಸೇವೆ, ಈಗ ಶೀಘ್ರವೇ ಸಿಗಲಿದೆ ದೃಢೀಕೃತ ಸೀಟು


ಬ್ಯಾಂಕ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ
ಕೇಂದ್ರ ಸರ್ಕಾರದ ಈ ಪ್ರಕಟಣೆಯ ಬಳಿಕ ಪಿಂಚಣಿ ವಿತರಿಸುವ ಎಲ್ಲಾ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸರ್ಕಾರದಿಂದ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಮಾನಸಿಕ ಅಸ್ವಸ್ಥ ಮಕ್ಕಳು ಕುಟುಂಬ ಪಿಂಚಣಿಯ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಕೇಂದ್ರೀಕೃತ ಪಿಂಚಣಿ ಸಂಸ್ಕರಣಾ ಕೇಂದ್ರ, ಪಿಂಚಣಿ ಪಾವತಿ ಶಾಖೆಗೆ ಸೂಚನೆ ನೀಡುವಂತೆ ಸರ್ಕಾರವು ನಿರ್ದೇಶಕರನ್ನು ಕೇಳಿದೆ. ಈ ಪಿಂಚಣಿಯನ್ನು ನಾಮಿನಿ ಮೂಲಕ ಆ ಮಕ್ಕಳಿಗೆ ನೀಡಲಾಗುವುದು. ಇದು ಯಾವುದೇ ಸಂಸ್ಥೆಯು ನಿರಾಕರಿಸಲಾಗದ ಶಾಸನಬದ್ಧ ನಿಬಂಧನೆಯಾಗಿದೆ. ಅಂತಹ ಮಕ್ಕಳಿಗೆ ನ್ಯಾಯಾಲಯದ ಗಾರ್ಡಿಯನ್ ಶಿಪ್ ಪ್ರಮಾಣಪತ್ರವನ್ನು ಬ್ಯಾಂಕ್‌ಗಳು ಕೇಳುವಂತಿಲ್ಲ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.