Life Insurance: IRDAI ಅನುಮತಿ ಇಲ್ಲದೆಯೂ ಕೂಡ ಆರೋಗ್ಯ ವಿಮೆ ಉತ್ಪನ್ನಗಳು ಬಿಡುಗಡೆಯಾಗಬಹುದು, ಗ್ರಾಹಕರಿಗೆ ಸಿಗಲಿವೆ ಹೆಚ್ಚಿನ ಆಯ್ಕೆಗಳು

Life Insurance:  ಪ್ರಸ್ತುತ ಲೈಫ್ ಇನ್ಸುರೆನ್ಸ್ ಕಂಪನಿಗಳ ಎಲ್ಲಾ ಉತ್ಪನ್ನಗಳು ರೈಡರ್ ಸೇರಿದಂತೆ ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ ಐಆರ್ಡಿಎಐ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ.

Written by - Nitin Tabib | Last Updated : Jun 10, 2022, 08:50 PM IST
  • ಆರೋಗ್ಯ, ಮೋಟಾರು ಮತ್ತು ಆಸ್ತಿ ವಿಮೆಯ ನಂತರ, ಇದೀಗ ಜೀವ ವಿಮಾ ಉತ್ಪನ್ನಗಳನ್ನು ಕೂಡ ವಿಮಾ ನಿಯಂತ್ರಕ IRDAI ಯ ಅನುಮೋದನೆಯಿಲ್ಲದೆ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದಾಗಿದೆ.
  • ಅದನ್ನು ಸಹ ಇದೀಗ ಅನುಮೋದಿಸಲಾಗಿದೆ.ಅಂದರೆ, ಇದೀಗ ಜೀವ ವಿಮಾ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಐಆರ್ಡಿಎಐಯ ಅನುಮೋದನೆ ಪಡೆಯುವುದಕ್ಕೂ ಮುನ್ನವೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಾಗಲಿದೆ.
Life Insurance: IRDAI ಅನುಮತಿ ಇಲ್ಲದೆಯೂ ಕೂಡ ಆರೋಗ್ಯ ವಿಮೆ ಉತ್ಪನ್ನಗಳು ಬಿಡುಗಡೆಯಾಗಬಹುದು, ಗ್ರಾಹಕರಿಗೆ ಸಿಗಲಿವೆ ಹೆಚ್ಚಿನ ಆಯ್ಕೆಗಳು title=
IRDAI Rule Change

Life Insurance: ಆರೋಗ್ಯ, ಮೋಟಾರು ಮತ್ತು ಆಸ್ತಿ ವಿಮೆಯ ನಂತರ, ಇದೀಗ ಜೀವ ವಿಮಾ ಉತ್ಪನ್ನಗಳನ್ನು ಕೂಡ ವಿಮಾ ನಿಯಂತ್ರಕ IRDAI ಯ ಅನುಮೋದನೆಯಿಲ್ಲದೆ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದಾಗಿದೆ. ಅದನ್ನು ಸಹ ಇದೀಗ  ಅನುಮೋದಿಸಲಾಗಿದೆ.ಅಂದರೆ, ಇದೀಗ ಜೀವ ವಿಮಾ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಐಆರ್ಡಿಎಐಯ ಅನುಮೋದನೆ ಪಡೆಯುವುದಕ್ಕೂ ಮುನ್ನವೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಾಗಲಿದೆ.  

ಪ್ರಸ್ತುತ ಐಆರ್ಡಿಎಐ ಅನುಮೋದನೆ ಪಡೆಯುವುದು ಅನಿವಾರ್ಯವಾಗಿದೆ
ವರದಿಗಳ ಪ್ರಕಾರ, ಜೀವ ವಿಮಾ ಉತ್ಪನ್ನಗಳಲ್ಲಿನ ಬಳಕೆ ಮತ್ತು ಫೈಲ್, ವೈಯಕ್ತಿಕ ಉಳಿತಾಯ, ವೈಯಕ್ತಿಕ ಪಿಂಚಣಿ ಉತ್ಪನ್ನಗಳು ಮತ್ತು ವರ್ಷಾಶನ ಉತ್ಪನ್ನಗಳನ್ನು ತಕ್ಷಣದ ಮಾರುಕಟ್ಟೆ ಬಿಡುಗಡೆಯ ವ್ಯಾಪ್ತಿಯಿಂದ ಹೊರಗಿಡಲಾಗಿದ್ದು, ಉಳಿದ ಎಲ್ಲಾ ಜೀವ ವಿಮಾ ಉತ್ಪನ್ನಗಳನ್ನು ಕಂಪನಿಗಳು ಐಆರ್ಡಿಎಐ ಅನುಮೋದನೆಯನ್ನು ಪಡೆಯುವ ಮುನ್ನವೇ ತಕ್ಷಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎನ್ನಲಾಗಿದೆ. ಪ್ರಸ್ತುತ ಇರುವ ನಿಯಮಗಳ ಜೀವವಿಮಾ ಕಂಪನಿಗಳ ಎಲ್ಲಾ ಉತ್ಪನ್ನಗಳನ್ನು ರೈಡರ್ ಒಳಗೊಂಡಂತೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಐಆರ್ಡಿಎಐ ಅನುಮೋದನೆ ಪಡೆಯುವುದು ಅನಿವಾರ್ಯವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-EPFO ಚಂದದಾರರಿಗೊಂದು ಸಂತಸದ ಸುದ್ದಿ, 7 ಕೋಟಿಗೂ ಅಧಿಕ PF ಖಾತೆಗಳಿಗೆ ಒಟ್ಟು 72 ಸಾವಿರ ಕೋಟಿ ವರ್ಗಾವಣೆ!

ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಸಿಗಲಿವೆ
ಇದುವರೆಗೆ ಇನ್ಸುರೆನ್ಸ್ ಕ್ಷೇತ್ರದಲ್ಲಿ 'ಫೈಲ್ ಅಂಡ್ ಯೂಜ್' ನಿಯಮ ಚಾಲ್ತಿಯಲ್ಲಿತ್ತು. ಅಂದರೆ, ಈ ಮೊದಲು ಉತ್ಪನ್ನಗಳನ್ನೂ ತಯಾರಿಸಿ ಕಂಪನಿಗಳು ವಿಮಾ ನಿಯಂತ್ರಕ ಐಆರ್ಡಿಎಐ ಅನುಮೋದನೆ ಪಡೆದುಕೊಳ್ಳಬೇಕಾಗುತ್ತಿತ್ತು ಮತ್ತು ನಂತರ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾಗುತ್ತಿತ್ತು. ಆದರೆ, ಇದೀಗ ಈ ಪ್ರಕ್ರಿಯೆಯನ್ನು ಸರಳಗೊಳಿಸಿ, ಉತ್ಪನ್ನವನ್ನು ತಕ್ಷಣವೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ವಿಮಾ ನಿಯಂತ್ರಕ 'ಫೈಲ್ ಅಂಡ್ ಯೂಜ್' ಬದಲಿಗೆ 'ಯೂಜ್ ಅಂಡ್ ಫೈಲ್' ನಿಯಮ ಜಾರಿಗೆ ತಂದಿದೆ. ಅಂದರೆ ವಿಮಾ ಕಂಪನಿಗಳು ಉತ್ಪನ್ನಗಳನ್ನು ಮೊದಲು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ನಂತರ ಉತ್ಪನ್ನಗಳ ಕುರಿತು ವಿಮಾ ನಿಯಂತ್ರಕಕ್ಕೆ ಮಾಹಿತಿಯನ್ನು ನೀಡಬಹುದಾಗಿದೆ. 

ಇದನ್ನೂ ಓದಿ-Home Loan Repo Rate: ಗೃಹ ಸಾಲದ ಮೇಲಿನ ಬಡ್ಡಿ ಹೆಚ್ಚಿಸಿದ ಈ ಎರಡು ಬ್ಯಾಂಕ್ ಗಳು.. !

ಉತ್ಪನ್ನ ನಿರ್ವಹಣಾ ಸಮಿತಿಯನ್ನು ರಚಿಸಬೇಕಾಗಲಿದೆ
ಈ ಹೊಸ ನಿಯಮದ ಪ್ರಕಾರ, ಇದೀಗ ಪ್ರತಿಯೊಂದು ವಿಮಾ ಕಂಪನಿಗೆ ತನ್ನದೇ ಆದ ಉತ್ಪನ್ನ ನಿರ್ವಹಣಾ ಸಮಿತಿ ರಚಿಸುವ ಅವಶ್ಯಕತೆ ಇದೆ. ಈ ಸಮಿತಿಯಲ್ಲಿ ಕಂಪನಿಯ ವತಿಯಿಂದ ಓರ್ವ ಜ್ಯೂರಿ ಸದಸ್ಯ, ಮುಖ್ಯ ಮಾರುಕಟ್ಟೆ ಅಧಿಕಾರಿ, ಮುಖ್ಯ ತಾಂತ್ರಿಕ ಅಧಿಕಾರಿ ಹಾಗೂ ಕಂಪನಿಯ ಹಿರಿಯ ಆಡಳಿತಾಧಿಕಾರಿಗಳು ಶಾಮೀಲಾಗಿರಬೇಕು, ಈ ಸಮಿತಿ ನೀಡುವ ಅನುಮೋದನೆ ಪಡೆದು ಉತ್ಪನ್ನವನ್ನು ವಿಮಾ ನಿಯಂತ್ರಕದ ಅನುಮೋದನೆಯನ್ನು ಪಡೆಯುವ ಮುನ್ನ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News