Fake Reviews - ಇ-ಕಾಮರ್ಸ್ ಪೋರ್ಟಲ್‌ಗಳು ಅಥವಾ ವೆಬ್‌ಸೈಟ್‌ಗಳಲ್ಲಿ ಬರುವ ನಕಲಿ ವಿಮರ್ಶೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಕಾರ್ಯವಿಧಾನವೊಂದನ್ನು ರಚಿಸಲಿದೆ. ಇದಕ್ಕಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ASCI ಒಟ್ಟಾಗಿ ನಿಯಮಗಳನ್ನು ರೂಪಿಸಲಿವೆ. ತನ್ನ್ಮೂಲಕ, ಇ-ಕಾಮರ್ಸ್‌ ವೆಬ್ ಸೈಟ್ ಗಳಲ್ಲಿ ನಕಲಿ ವಿಮರ್ಶೆಗಳನ್ನು ಬರೆಯುವವರನ್ನು ಪತ್ತೆಹಚ್ಚಲು ಕಾರ್ಯವಿಧಾನವನ್ನು ರಚಿಸಲಾಗುತ್ತಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ವಿಮರ್ಶೆಗಳು ಭಾರಿ ಸವಾಲಾಗಿ ಪರಿಣಮಿಸಿವೆ ಮತ್ತು ಅವುಗಳನ್ನು ತಡೆದು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಕ್ಷದ ಜನರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಹಕರಿಂದ ಇಂತಹ ವಿಮರ್ಶೆಗಳು ಮೋಸ ಮಾಡುವ ಪ್ರಯತ್ನದ ಒಂದು ಭಾಗವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.


COMMERCIAL BREAK
SCROLL TO CONTINUE READING

ಮುನ್ನೆಚ್ಚರಿಕೆ ಕ್ರಮಗಳ ಸಾಧ್ಯತೆಯನ್ನು ಕೂಡ ಪರಿಗಣಿಸಲಾಗಿದೆ
ವರದಿಗಳ ಪ್ರಕಾರ, ಆನ್‌ಲೈನ್ ಮಾರಾಟ ವೇದಿಕೆಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ನಕಲಿ ವಿಮರ್ಶೆಗಳಿಂದ ಗ್ರಾಹಕರನ್ನು ರಕ್ಷಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಇ-ಕಾಮರ್ಸ್ ಕಂಪನಿಗಳು ಮತ್ತು ಇತರ ಸಂಬಂಧಿತ ಪಕ್ಷಗಳೊಂದಿಗೆ ಈ ವಿಷಯದ ಕುರಿತು ಸಭೆ ನಡೆಸಿದ್ದಾರೆ. ಇದರಲ್ಲಿ, ಇ-ಕಾಮರ್ಸ್‌ನಲ್ಲಿ ನಕಲಿ ವಿಮರ್ಶೆಗಳೊಂದಿಗೆ ಸಂಭಾವ್ಯ ಗ್ರಾಹಕರನ್ನು ದಾರಿ ತಪ್ಪಿಸುವ ವಿಷಯವನ್ನು ವಿವರವಾಗಿ ಚರ್ಚಿಸಲಾಗಿದೆ. ಈ ವೇಳೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಕೂಡ ಪರಿಶೀಲನೆ ನಡೆಸಲಾಗಿದೆ.


ಇದನ್ನೂ ಓದಿ-Petrol Price Today : ತೆರಿಗೆ ಕಡಿತದ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಕುಸಿತ ; ಇಲ್ಲಿದೆ ನೋಡಿ ಇಂದಿನ ಬೆಲೆ!


ಸಭೆಯಲ್ಲಿ ಯಾರು ಯಾರು ಭಾಗವಹಿಸಿದ್ದರು?
ಈ ಸಭೆಯಲ್ಲಿ, ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ, ಇತರ ಹಿರಿಯ ಅಧಿಕಾರಿಗಳು, ಇ-ಕಾಮರ್ಸ್ ಕಂಪನಿಗಳ ಪ್ರತಿನಿಧಿಗಳು, ಗ್ರಾಹಕ ಸಂಸ್ಥೆಗಳು ಮತ್ತು ಕಾನೂನು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ನಿಟ್ಟಿನಲ್ಲಿ ಯಾವುದೇ ಎಸ್‌ಒಪಿ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ-Gold-Sliver Price: ಗ್ರಾಹಕರೇ ಗಮನಿಸಿ: ಮತ್ತೆ ಏರಿಕೆಯಾಯ್ತು ಹಳದಿಲೋಹದ ಬೆಲೆ!


ಎಲ್ಲಾ ಪಕ್ಷಗಳಿಗೆ ಸಲಹೆ ನೀಡಲು ಕೋರಲಾಗಿದೆ
ಇ-ಕಾಮರ್ಸ್‌ನಲ್ಲಿನ ನಕಲಿ ವಿಮರ್ಶೆಗಳಿಂದ ಗ್ರಾಹಕರನ್ನು ರಕ್ಷಿಸಲು ಯಾವ ರೀತಿಯ ಸ್ಟ್ಯಾಂಡರ್ಡ್ ಆಪರೇಟಿಂಗ್ ರೂಲ್ಸ್ ಗಳನ್ನು ರೂಪಿಸಬಹುದು ಎಂಬ ಸಾಧ್ಯತೆಯನ್ನು ಸಹ ಪರಿಶೀಲಿಸಲಾಗುತ್ತಿದೆ. ಈ ಸಭೆಯಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳಿಗೆ ಸಲಹೆ ನೀಡಲು ಕೋರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವುಗಳ ಆಧಾರದ ಮೇಲೆ, ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಸಚಿವಾಲಯವು SOP ಅನ್ನು ಸಿದ್ಧಪಡಿಸಲಿದೆ ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.