Gold-Sliver Price: ಗ್ರಾಹಕರೇ ಗಮನಿಸಿ: ಮತ್ತೆ ಏರಿಕೆಯಾಯ್ತು ಹಳದಿಲೋಹದ ಬೆಲೆ!

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

Written by - Bhavishya Shetty | Last Updated : May 28, 2022, 10:22 AM IST
  • ಮತ್ತೆ ಏರಿಕೆಯಾದ ಚಿನ್ನ-ಬೆಳ್ಳಿ ಬೆಲೆ
  • ಗುಡ್ ರಿಟರ್ನ್ ಮಾಹಿತಿ ಇಲ್ಲಿದೆ
  • 24 ಕ್ಯಾರೆಟ್ ಬಂಗಾರದ ಬೆಲೆ ಹೀಗಿದೆ
Gold-Sliver Price: ಗ್ರಾಹಕರೇ ಗಮನಿಸಿ: ಮತ್ತೆ ಏರಿಕೆಯಾಯ್ತು ಹಳದಿಲೋಹದ ಬೆಲೆ!  title=
Gold-Sliver Price

ಬೆಂಗಳೂರು : Gold Price Today : ಕಳೆದ ಎರಡು ಮೂರು ದಿನಗಳಿಂದ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದೆ.  ಚಿನ್ನದ ಬೆಲೆಯಲ್ಲಿ ಇಂದು 110 ರೂ. ಏರಿಕೆಯಾಗಿದೆ. ಈ ಮೂಲಕ 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 52,090  ರೂ. ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆಯಲ್ಲಿಯೂ 100 ರೂ. ಏರಿಕೆಯಾಗಿ 10 ಗ್ರಾಂ ಗೆ 47,750 ರೂ. ಆಗಿದೆ.  

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ ಚಿನ್ನದ ಬೆಲೆ-22 ಕ್ಯಾರೆಟ್ (ರೂ.ಗಳಲ್ಲಿ) ಚಿನ್ನದ ಬೆಲೆ -24 ಕ್ಯಾರೆಟ್‌ (ರೂ.ಗಳಲ್ಲಿ)
ಚೆನ್ನೈ  47,800  52,150
ಮುಂಬಯಿ 47,750 52,090
ದೆಹಲಿ  47,750 52,090
ಕೋಲ್ಕತ್ತಾ 47,750  52,090
ಬೆಂಗಳೂರು 47,750 52,090
ಹೈದರಾಬಾದ್   47,750   52,090
ಕೇರಳ               47,750 52,090

ಚಿನ್ನದ ಬೆಲೆಯಂತೆಯೇ ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದ್ದು,  ಬೆಳ್ಳಿ ದರ ಒಂದೇ ದಿನಕ್ಕೆ 650 ರೂ.ಗಳಷ್ಟು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬೆಳ್ಳಿ ದರ ಇಷ್ಟಿದೆ. 

ನಗರ   ಇಂದಿನ ಬೆಳ್ಳಿ ದರ (ರೂ.ಗಳಲ್ಲಿ)
ಚೆನ್ನೈ 66,600
ಮುಂಬಯಿ 62,150
ದೆಹಲಿ  62,150 
ಕೋಲ್ಕತ್ತಾ 62,150
ಬೆಂಗಳೂರು 62,150
ಹೈದರಾಬಾದ್ 66,600
ಕೇರಳ 66,600

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News