Ministry of Labour : ಸರ್ಕಾರದ ಈ ಯೋಜನೆ ಮೂಲಕ ಕಾರ್ಮಿಕರಿಗೆ ಸಿಗಲಿದೆ ₹3000 : ಅದಕ್ಕೆ ಈ ಕೆಲಸ ಮಾಡಿ
ದೇಶದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ, ಪಡಿತರ, ಆರ್ಥಿಕ ಸಹಾಯದಂತಹ ಅನೇಕ ಯೋಜನೆಗಳನ್ನು ನಡೆಸಲಾಗುತ್ತಿದೆ.
ನವದೆಹಲಿ : ಜನರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಅನೇಕ ರೀತಿಯ ಯೋಜನೆಗಳನ್ನು ನಡೆಸುತ್ತಿದೆ ಮತ್ತು ಅನೇಕ ಹಳೆಯ ಯೋಜನೆಗಳನ್ನು ವಿಸ್ತರಿಸುತ್ತವೆ. ಪ್ರಸ್ತುತ, ದೇಶದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ, ಪಡಿತರ, ಆರ್ಥಿಕ ಸಹಾಯದಂತಹ ಅನೇಕ ಯೋಜನೆಗಳನ್ನು ನಡೆಸಲಾಗುತ್ತಿದೆ.
ಈ ಹಲವು ಯೋಜನೆಗಳನ್ನು ಕಾರ್ಮಿಕ ಸಚಿವಾಲಯ(Ministry of Labour)ವೂ ನಡೆಸುತ್ತಿದೆ. ಉದಾಹರಣೆಗೆ, ಇ-ಶ್ರಮ ಕಾರ್ಡ್. ಇದರಲ್ಲಿ ಕಾರ್ಮಿಕ ಸಚಿವಾಲಯವು ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ‘ಐಕಾನಿಕ್ ವೀಕ್’ ಆರಂಭಿಸಿದೆ. ಇದನ್ನು ಸಚಿವಾಲಯವು 07ನೇ ಮಾರ್ಚ್ 2022 ರಿಂದ 13ನೇ ಮಾರ್ಚ್ 2022 ರ ನಡುವೆ ಆಚರಿಸುತ್ತಿದೆ.
ಇದನ್ನೂ ಓದಿ : ಅರ್ಜಿ ಸಲ್ಲಿಸದೆಯೇ ಸಾವಿರಾರು ಮಂದಿಯ ಖಾತೆಗೆ ಬಿತ್ತು ಲೋನ್ ಹಣ, ತಾಂತ್ರಿಕ ಕಾರಣದಿಂದಾದ ಎಡವಟ್ಟು
ಇದರ ಅಡಿಯಲ್ಲಿ ಪ್ರಧಾನ ಮಂತ್ರಿ ಶ್ರಮದ ಅಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ 'ಪಿಂಚಣಿ ದಾನ' ಕಾರ್ಯಕ್ರಮ(Donate a Pension)ವನ್ನು ಪ್ರಾರಂಭಿಸಲಾಗಿದೆ. ಉಪಕ್ರಮದ ಅಡಿಯಲ್ಲಿ, ಜನರು ತಮ್ಮ ತಕ್ಷಣದ ಸಹಾಯಕ ಸಿಬ್ಬಂದಿಗಳಾದ ಗೃಹ ಕಾರ್ಮಿಕರು, ಚಾಲಕರು, ಸಹಾಯಕರು ಮುಂತಾದವರ ಪ್ರೀಮಿಯಂ ಕೊಡುಗೆಯನ್ನು ದಾನ ಮಾಡಬಹುದು.
ದೇಶದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ, ಪಡಿತರ, ಆರ್ಥಿಕ ಸಹಾಯದಂತಹ ಅನೇಕ ಯೋಜನೆಗಳನ್ನು ನಡೆಸಲಾಗುತ್ತಿದೆ.
Bhupender Yadav), ಪ್ರಧಾನಿ ನರೇಂದ್ರ ಮೋದಿಯವರ ಭಾರತ 2.0, ಆತ್ಮನಿರ್ಭರ ಭಾರತ್‌ನ ದೃಷ್ಟಿಯನ್ನು ಮತ್ತಷ್ಟು ವೇಗಗೊಳಿಸುವ ಆಂದೋಲನವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : PM kisan Update: ರೈತರಿಗೆ 6000 ರೂ ಜೊತೆಗೆ ಸಿಗಲಿದೆ 36000 ರೂ. ಶೀಘ್ರವೇ ಈ ಕೆಲಸ ಮಾಡಿ ಮುಗಿಸಿಕೊಳ್ಳಿ
ಈ ಯೋಜನೆ ಪ್ರಯೋಜನಗಳೇನು? ಮತ್ತು ಯಾರು ಲಾಭ ಪಡೆಯಬಹುದು?
ಅಸಂಘಟಿತ ವಲಯ(Unorganized Sector)ದಲ್ಲಿ ಕೆಲಸ ಮಾಡುತ್ತಿರುವ 18 ರಿಂದ 40 ವರ್ಷದೊಳಗಿನವರು ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. 29 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು. ನಿಮಗೆ 60 ವರ್ಷ ಆಗುವವರಿಗೆ ಪ್ರತಿ ತಿಂಗಳಿಗೆ 100 ರೂ. ಠೇವಣಿ ನೀಡಬೇಕು. ಇದಕ್ಕೆ ಕೇಂದ್ರ ಸರ್ಕಾರವು 100 ರೂ. ಸಮಾನ ಮೊತ್ತವನ್ನು ಕೊಡುಗೆ ನೀಡುತ್ತದೆ. ಚಂದಾದಾರರು ಗ್ಯಾರಂಟಿ 3000 ರೂ. ಮಾಸಿಕ ಪಿಂಚಣಿ ಪ್ರಯೋಜನ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.