ಬೆಂಗಳೂರು : ಕೊನೆಗೂ ಕೇಂದ್ರ ನೌಕರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ. ಕಳೆದ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಆ ಮೂಲಕ ನೌಕರರ ತುಟ್ಟಿ ಭತ್ಯೆ ಶೇ.46ಕ್ಕೆ ತಲುಪಿದೆ. ಆದರೆ, ಈ ಖುಷಿ ಇಲ್ಲಿಗೇ  ಸೀಮಿತವಾಗುವುದಿಲ್ಲ. ಕೇಂದ್ರ ಉದ್ಯೋಗಿಗಳಿಗೆ ಇನ್ನಷ್ಟು ಒಳ್ಳೆಯ ಸುದ್ದಿ ಕಾದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತ ಉಡುಗೊರೆ ಸರ್ಕಾರದ ಕಡೆಯಿಂದ ಸಿಗಲಿದೆ. 


COMMERCIAL BREAK
SCROLL TO CONTINUE READING

ಮುಂದಿನ ಹೆಚ್ಚಳದ ಬಗ್ಗೆ ಅಪ್ಡೇಟ್ : 
ಈಗ ಹೆಚ್ಚಿಸಲಾದ ತುಟ್ಟಿಭತ್ಯೆಯನ್ನು ಜುಲೈ 1, 2023 ರಿಂದ ಜಾರಿಗೊಳಿಸಲಾಗಿದೆ. ಆದರೆ, ಈಗ ಮುಂದಿನ ತುಟ್ಟಿಭತ್ಯೆ ಏರಿಕೆ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದಾಗಿ, ಎರಡು ತಿಂಗಳ ಎಐಸಿಪಿಐ ಸೂಚ್ಯಂಕ ಹೊರಬಿದ್ದಿದೆ. ಇದರಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಆದರೆ, ಈ ಎರಡು ತಿಂಗಳ ಸೂಚ್ಯಂಕದ ಆಧಾರದಲ್ಲಿ ತುಟ್ಟಿಭತ್ಯೆ ಹೆಚ್ಚ್ಳವಾಗುವುದಿಲ್ಲ, ಅದಕ್ಕಾಗಿ 2024ರವರೆಗೆ ಕಾಯಬೇಕು. ಏಕೆಂದರೆ ಜುಲೈನಿಂದ ಡಿಸೆಂಬರ್ ವರೆಗಿನ ಹಣದುಬ್ಬರ ಸೂಚ್ಯಂಕದ ಆಧಾರದ ಮೇಲೆ ಮುಂದಿನ ಡಿಎ ಎಷ್ಟು ಹೆಚ್ಚಾಗುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. 


ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಶಾಕ್


ಎರಡನೇ ದೊಡ್ಡ ಕಾರಣ ಏನು?: 
2024 ರ ವೇಳೆಗೆ 50 ಪ್ರತಿಶತ ಡಿಎ ಎನ್ನುವುದೇ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಮತ್ತೊಂದು ಕಾರಣ. ನಿಯಮಗಳ ಪ್ರಕಾರ ಒಮ್ಮೆ ತುಟ್ಟಿಭತ್ಯೆ 50% ತಲುಪಿದರೆ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ನಂತರ 50% ಡಿಎ ಮೊತ್ತವನ್ನು ನೌಕರರ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. 2024ರಲ್ಲಿ ಲೋಕಸಭೆ ಚುನಾವಣೆಯೂ ಬರಲಿದೆ. ಹೀಗಾಗಿ ಈ ವೇಳೆ ನೌಕರರನ್ನು ಓಲೈಸಲು ಸರ್ಕಾರ ದೊಡ್ಡ ಉಡುಗೊರೆ ನೀಡಬಹುದು. ಶೇ.50ರಷ್ಟು ತುಟ್ಟಿಭತ್ಯೆಯನ್ನು ನೌಕರರ ವೇತನದಲ್ಲಿ ಅಳವಡಿಸಿದರೆ ಕನಿಷ್ಠ 9,000 ರೂ. ವೇತನ ಹೆಚ್ಚಾಗಲಿದೆ. 


AICPI ಸೂಚ್ಯಂಕ ಸಂಖ್ಯೆ ಎಂದರೇನು? : 
ಬ್ಯೂರೋ ಆಫ್ ಲೇಬರ್ AICPI ಸೂಚ್ಯಂಕ ಸಂಖ್ಯೆಗಳನ್ನು ಪ್ರಕಟಿಸುತ್ತದೆ.  ಇದೀಗ ಎರಡು ತಿಂಗಳುಗಳು (ಜುಲೈ, ಆಗಸ್ಟ್) ಸೂಚ್ಯಂಕ ಪ್ರಕಟವಾಗಿದೆ. ಸೆಪ್ಟೆಂಬರ್ ಸೂಚ್ಯಂಕ ಅಕ್ಟೋಬರ್ 31 ರಂದು  ಹೊರಬೀಳಲಿದೆ. ಇಲ್ಲಿಯವರೆಗೆ ಸೂಚ್ಯಂಕವು 139.2 ಅಂಕಗಳನ್ನು ತಲುಪಿದೆ. ಇದರ ಆಧಾರದ ಮೇಲೆ ಒಟ್ಟು ಡಿಎ 47.97% ತಲುಪಿದೆ. ಜೂನ್ ಸಂಖ್ಯೆಗಳ ಆಧಾರದ ಮೇಲೆ,  ತುಟ್ಟಿಭತ್ಯೆಯನ್ನು 4 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಆಗ ಒಟ್ಟಾರೆ ಅಂಕ ಶೇ.46.24 ಆಗಿತ್ತು. ಈಗ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಸಂಖ್ಯೆಗಳು ಜನವರಿ 2024 ರಿಂದ  ಎಷ್ಟು ತುಟ್ಟಿಭತ್ಯೆ ಹೆಚ್ಚಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ತಜ್ಞರ ಪ್ರಕಾರ, ಜನವರಿ 2024 ರ ವೇಳೆಗೆ ತುಟ್ಟಿಭತ್ಯೆ 50 ಪ್ರತಿಶತವನ್ನು ದಾಟುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೂ ಸಿಹಿ ಸುದ್ದಿ ! ದಸರಾ ವೇಳೆಯಲ್ಲಿಯೇ ವೇತನ ಹೆಚ್ಚಳ ಘೋಷಿಸಿದ ಸರ್ಕಾರ ! ಖಾತೆ ಸೇರುವ ಹಣ ಎಷ್ಟು ?


ತುಟ್ಟಿಭತ್ಯೆ 50 ಪ್ರತಿಶತವನ್ನು ತಲುಪಿದರೆ ಏನಾಗುತ್ತದೆ? : 
7ನೇ ವೇತನ ಆಯೋಗದ ಪ್ರಕಾರ ಕೇಂದ್ರ ನೌಕರರ ತುಟ್ಟಿಭತ್ಯೆ ಶೇ.50 ದಾಟಿದರೆ ತುಟ್ಟಿಭತ್ಯೆ ಶೂನ್ಯಕ್ಕೆ ಇಳಿಯಲಿದೆ. ಅಂದರೆ, ತುಟ್ಟಿಭತ್ಯೆಯ ಲೆಕ್ಕಾಚಾರವು 0 ರಿಂದ ಪ್ರಾರಂಭವಾಗುತ್ತದೆ. 50 ಪ್ರತಿಶತದಂತೆ ಗಳಿಸಿದ ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ನೌಕರನ ಮೂಲ ವೇತನ 18000 ರೂ. ಎಂದಿಟ್ಟುಕೊಳ್ಳಿ. ಆಗ ಆತನಿಗೆ ಶೇ.50 ರಂತೆ 9000 ರೂಪಾಯಿ ಡಿಎ  ಸಿಗುತ್ತದೆ. ಆದರೆ ತುಟ್ಟಿಭತ್ಯೆ ಶೇಕಡಾ 50 ಆಗಿದ್ದರೆ, ಇದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಮತ್ತು ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.