IT Returns File : IT ರಿಟರ್ನ್ ಸಲ್ಲಿಕೆಗೆ ಮೇ 31ರವರೆಗೆ ಅವಕಾಶ ನೀಡಿದ ಸರ್ಕಾರ!
2020-21ರ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ /ಐಟಿಆರ್ ಸಲ್ಲಿಸುವ ದಿನಾಂಕ ಬದಲಾಗಿಲ್ಲ
ನವದೆಹಲಿ : ಕೋವಿಡ್-19 ಸೊಂಕಿನ ಕಾರಣದಿಂದಾಗಿ ಆರ್ಥಿಕ ವರ್ಷ 2019-20ರ ಸಂಬಂಧಿಸಿದಂತೆ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಮೇ 31, 2021ರವರೆಗೆ ಅವಕಾಶ ಒದಗಿಸಿ ಕೊನೆಯ ದಿನಾಂಕವನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ಕೋವಿಡ್ (Covid-19)ಸೋಂಕಿನ ಹಟಾತ್ ಏರಿಕೆಯ ಕಾರಣದಿಂದಾಗಿ ದೇಶದ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ಹಾಫ್ ಲಾಕ್ ಡೌನ್, ಲಾಕ್ ಡೌನ್ ನಂತಹ ನಿರ್ಬಂಧಗಳನ್ನು ಹೇರಿರುವ ಕಾರಣದಿಂದಾಗಿ ತೆರಿಗೆದಾರರಿಗೆ ಪರಿಹಾರ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ : SBI: ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯ ಒದಗಿಸಿದ ಎಸ್‌ಬಿಐ
2020-21ರ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್(IT Returns) /ಐಟಿಆರ್ ಸಲ್ಲಿಸುವ ದಿನಾಂಕ ಬದಲಾಗಿಲ್ಲ. ಈ ಐ ಟಿ ಆರ್ ನನ್ನು ಜುಲೈ 31 ರೊಳಗೆ ಸಲ್ಲಿಸಬೇಕು. ಈ ದಿನಾಂಕದ ವೇಳೆಗೆ, ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ : Investment Planning: ನಿತ್ಯ ಕೇವಲ ರೂ.50 ಹೂಡಿಕೆ ಮಾಡಿ 50 ಲಕ್ಷ ರೂ. ಸಂಪಾದಿಸಿ
ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT):
ಆದೇಶ ಸಿಬಿಡಿಟಿ ಹೊರಡಿಸಿದ ಆದೇಶದ ಪ್ರಕಾರ, 2020-21ರ ಮೌಲ್ಯಮಾಪನ ವರ್ಷಕ್ಕೆ (Financial Year 2019-20) ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 139 ರ ಉಪವಿಭಾಗ 4 ಮತ್ತು 5 ರ ಅಡಿಯಲ್ಲಿ ದ್ವಿಪಕ್ಷೀಯ ರಿಟರ್ನ್ಸ್ ಮತ್ತು ಪರಿಷ್ಕೃತ ರಿಟರ್ನ್ಸ್ ಸಲ್ಲಿಸಿದ ದಿನಾಂಕವನ್ನು 31 ಮೇ 2021 ಕ್ಕೆ ಹೆಚ್ಚಿಸಲಾಗಿದೆ. ಮೊದಲ ಗಡುವು 31 ಮಾರ್ಚ್ 2021ರವರೆಗಿದ್ದು, ಅದು ಮುಗಿದಿದೆ.
ಇದನ್ನೂ ಓದಿ : SBI Alert: ಮೇ 31ರವರೆಗೆ ಈ ಕೆಲಸ ಮಾಡಿಲ್ಲ ಅಂದ್ರೆ Freeze ಆಗುತ್ತೆ ಖಾತೆ
ರಿಟರ್ನ್ ಫೈಲಿಂಗ್ ಗಡುವು ಮೇ 31 ರವರೆಗೆ ವಿಸ್ತರಣೆ ಸೆಕ್ಷನ್ 148 ರ ಅಡಿಯಲ್ಲಿ ನೋಟಿಸ್(Notes) ಬಂದಿದ್ದರೆ, ರಿಟರ್ನ್ ಫೈಲಿಂಗ್ ಗಡುವನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ : Home Loan: ಕೊರೊನಾ ಮಹಾಮಾರಿಯ ಪ್ರಭಾವ, ಗೃಹ ಸಾಲ ಬಡ್ಡಿದರ ಇಳಿಕೆ ಮಾಡಿದೆ SBI
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.