Home Loan: ಕೊರೊನಾ ಮಹಾಮಾರಿಯ ಪ್ರಭಾವ, ಗೃಹ ಸಾಲ ಬಡ್ಡಿದರ ಇಳಿಕೆ ಮಾಡಿದೆ SBI

Home Loan Interest Rate - ಒಂದು ವೇಳೆ ನೀವೂ ಕೂಡ ಹೊಸ ಮನೆ ಖರೀದಿಸಲು ಗೃಹ ಸಾಲ ಪಡೆಯಲು ಬಯಸುತ್ತಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗೃಹ ಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಿದೆ.

Written by - Nitin Tabib | Last Updated : May 1, 2021, 07:02 PM IST
  • ಬೇಸಿಕ್ ಬಡ್ಡಿ ದರ ಶೇ.6.70 ರಷ್ಟಿರಲಿದೆ
  • ಮಹಿಳೆಯರಿಗೆ ಗೃಹಸಾಲದಲ್ಲಿ ವಿಶೇಷ ಸವಲತ್ತು
  • SBI ಹೋಮ್ ಲೋನ್ ವಿಭಾಗದಲ್ಲಿ ಶೇ.34 ರಷ್ಟು ಪಾಲುದಾರಿಕೆ ಹೊಂದಿದೆ.
Home Loan: ಕೊರೊನಾ ಮಹಾಮಾರಿಯ ಪ್ರಭಾವ, ಗೃಹ ಸಾಲ ಬಡ್ಡಿದರ ಇಳಿಕೆ ಮಾಡಿದೆ SBI title=
SBI Home Loan Interest Rate (File Photo)

ನವದೆಹಲಿ: SBI Home Loan Interest Rate - ಕೊರೊನಾ ಸಂಕಷ್ಟದ ನಡುವೆ ಒಂದು ವೇಳೆ ನೀವೂ ಕೂಡ ಹೊಸ ಮನೆ ಖರೀದಿಸಲು ಪ್ರಯತ್ನಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ನೆಮ್ಮದಿಯ ಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗೃಹ ಸಾಲ (Home Loan) ಬಡ್ಡಿದರದಲ್ಲಿ (Rate of Interest) ಇಳಿಕೆಯ ಘೋಷಣೆ ಮಾಡಿದೆ.

ಬೇಸಿಕ್ ಬಡ್ಡಿ ದರ ಶೇ.6.70 ರಷ್ಟಿರಲಿದೆ
ಈ ಕುರಿತು ಶನಿವಾರ ಹೇಳಿಕೆ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ , 30 ಲಕ್ಷ ರೂ.ವರೆಗಿನ ಗೃಹ ಸಾಲದ ಮೇಲೆ ಇದೀಗ ಜನರು ಶೇ.6. 70ರಷ್ಟು ಬಡ್ಡಿ ಪಾವತಿಸಬೇಕಾಗಲಿದೆ ಎಂದಿದೆ. ಜೊತೆಗೆ 30 ಲಕ್ಷ ರೂ.ಗಳಿಂದ 75 ಲಕ್ಷ ರೂ.ಗಳವರೆಗಿನ ಮನೆ ಸಾಲದ ಮೇಲೆ ಶೇ.6.95 ರಷ್ಟು ಹಾಗೂ 75 ಲಕ್ಷಕ್ಕಿಂತ ಹೆಚ್ಚಿನ ಗೃಹಸಾಲದ ಮೇಲೆ ಶೇ.7.05 ರಷ್ಟು ಬಡ್ಡಿ ದರ ಪಾವತಿಸಬೇಕಾಗಲಿದೆ ಎಂದು ಬ್ಯಾಂಕ್ ಹೇಳಿದೆ.

ಬಡ್ಡಿ ದರ ಇಳಿಕೆಯ ಕುರಿತು ಮಾತನಾಡಿರುವ ಬ್ಯಾಂಕ್ ನ (SBI) ಪ್ರಧಾನ ನಿರ್ದೇಶಕ  (ರಿಟೇಲ್ ಹಾಗೂ ಡಿಜಿಟಲ್ ಬ್ಯಾಂಕಿಂಗ್) CS Shetty, ಹೋಮ್ ಲೋನ್ ಬಡ್ಡಿದರಗಳಲ್ಲಿನ ಇಳಿಕೆಯ ಬಳಿಕ ಗ್ರಾಹಕರಿಗೆ ಸಂಭವನೀಯತೆಗಳೂ ಕೂಡ ಹೆಚ್ಚಾಗಲಿವೆ. ಇದರಿಂದ ಅವರು ಪ್ರತಿತಿಂಗಳು ಪಾವತಿಸಬೇಕಾದ EMI ಇಳಿಕೆಯಾಗಲಿದೆ" ಎಂದಿದ್ದಾರೆ.

ಇದನ್ನೂ ಓದಿ- SBI Customers Alert : SBI ಗೃಹ ಸಾಲದ ಬಗ್ಗೆ ಮಹತ್ವದ ನಿರ್ಧಾರ!

ಮಹಿಳೆಯರಿಗಾಗಿ ಹೋಮ್ ಲೋನ್ ಗೆ ವಿಶೇಷ ಸವಲತ್ತು
ಮಹಿಳೆಯರಿಗಾಗಿ ಗೃಹಸಾಲದಲ್ಲಿ ಬ್ಯಾಂಕ್ ವಿಶೇಷ ಸವಲತ್ತು ನೀಡಿದೆ ಎಂದು CS Shetty ಹೇಳಿದ್ದಾರೆ. ಮಹಿಳೆಯರಿಗಾಗಿ ಗೃಹ ಸಾಲಗಳಿಗೆ 5 ಬೇಸಿಕ್ ಪಾಯಿಂಟ್ ಗಳ ರಿಯಾಯ್ತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. YONO App ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೂಲಕ ವಿಶೇಷ ಐದು ಬೇಸಿಕ್ ಅಂಕಗಳ ರಿಯಾಯ್ತಿಯ ಜೊತೆಗೆ ಬಡ್ಡಿದರದಲ್ಲಿಯೂ ಕೂಡ ರಿಯಾಯಿತಿ ಕೂಡ ಪಡೆಯಬಹುದಾಗಿದೆ.

ಇದನ್ನೂ ಓದಿ-BIG DECISION: EPFO ಚಂದಾದಾರರಿಗೊಂದು ನೆಮ್ಮದಿಯ ಸುದ್ದಿ

ಹೋಮ್ ಲೋನ್ ವಿಭಾಗದಲ್ಲಿ ಶೇ.34 ರಷ್ಟು ಪಾಲುದಾರಿಕೆ 
ಮಾರ್ಚ್ 31, 2021 ವರೆಗೆ ಬ್ಯಾಂಕ್ ತನ್ನ ಬೇಸಿಕ್ ಹೋಮ್ ಲೋನ್ ಗಳ ಮೇಲೆ ಶೇ.6.70 ರಸ್ತು ಬಡ್ಡಿದರ ಪಡೆಯುತ್ತಿತ್ತು. ಏಪ್ರಿಲ್ 1, 2021ರ ಬಳಿಕ ಮೂಲ ಬಡ್ಡಿ ದರವನ್ನು ಶೇ.6.95 ರಷ್ಟು ನಿಗದಿಪಡಿಸಿತ್ತು. ಆದರೆ, ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಈ ಬಡ್ಡಿದರವನ್ನು ಶೇ.6.70ಕ್ಕೆ ಇಳಿಕೆ ಮಾಡಲಾಗಿದೆ ಎಂದು ಶೆಟ್ಟಿ ಹೇಳಿದ್ದಾರೆ. ಹೋಮ್ ಲೋನ್ ವಿಭಾಗದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಶೇ.34 ರಷ್ಟು ಪಾಲುದಾರಿಕೆ ಹೊಂದಿದ್ದು, ಇದುವರೆಗೆ 5 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಗೃಹಸಾಲವನ್ನು ವಿತರಿಸಿದೆ.

ಇದನ್ನೂ ಓದಿ- Bank holidays in May 2021 : ಬೇಗ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ : ಈ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News