ನವದೆಹಲಿ: ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಹಣದುಬ್ಬರ ಏರಿಳಿತ ನಡುವೆ 2021-22ನೇ ವರ್ಷದ 4ನೇ ತ್ರೈಮಾಸಿಕದಲ್ಲಿ NSC ಮತ್ತು PPF ಸೇರಿದಂತೆ ಸಣ್ಣ ಉಳಿತಾಯ ಯೋಜನೆ(Small Savings Schemes)ಗಳಲ್ಲಿನ ಬಡ್ಡಿದರದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.


COMMERCIAL BREAK
SCROLL TO CONTINUE READING

31 ಮಾರ್ಚ್ 2022ಕ್ಕೆ ಕೊನೆಗೊಳ್ಳುವ 4ನೇ ತ್ರೈಮಾಸಿಕಕ್ಕೆ ಸರ್ಕಾರವು ಸಣ್ಣ ಉಳಿತಾಯ ಯೋಜನೆಯ ಬಡ್ಡಿದರ(Interest Rates)ಗಳನ್ನು ಪ್ರಕಟಿಸಿದೆ. ಈ ಬಾರಿಯೂ ಸರ್ಕಾರವು ಸ್ಥಿರ ಆದಾಯ ಹೂಡಿಕೆದಾರರಿಗೆ ಜನವರಿ-ಮಾರ್ಚ್ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಬದಲಾಗದೆ ಇರಿಸುವ ಮೂಲಕ ಪರಿಹಾರವನ್ನು ಒದಗಿಸಿದೆ. ಇದರರ್ಥ ಸ್ಥಿರ ಠೇವಣಿಗಳು, ಸಾರ್ವಜನಿಕ ಭವಿಷ್ಯ ನಿಧಿ (PPF), ಹಿರಿಯ ನಾಗರಿಕ ಉಳಿತಾಯ ಯೋಜನೆ (SSCS), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NCS), ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದ ಸಣ್ಣ ಉಳಿತಾಯ ಯೋಜನೆಗಳು ತ್ರೈಮಾಸಿಕದಲ್ಲಿ ಅದೇ ಬಡ್ಡಿದರಗಳು ಮುಂದುವರಿಯಲಿದೆ.  


ಇದನ್ನೂ ಓದಿ: Arecanut Price: ಹೊಸ ವರ್ಷದ ಮೊದಲ ದಿನ ಅಡಿಕೆ ಧಾರಣೆ ಎಷ್ಟಿದೆ ತಿಳಿಯಿರಿ


ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. ಈ ರಾಜ್ಯಗಳಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆಯಿದೆ. ಪ್ರಸ್ತುತ ತ್ರೈಮಾಸಿಕದಲ್ಲಿ ನೀವು PPFನಲ್ಲಿ ಶೇ.7.1ರಷ್ಟು, SCSSನಲ್ಲಿ ಶೇ.7.4ರಷ್ಟು, NSCನಲ್ಲಿ ಶೇ.6.8ರಷ್ಟು ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇ.7.6ರಷ್ಟು ಬಡ್ಡಿಯನ್ನು ಗಳಿಸುವುದನ್ನು ಮುಂದುವರಿಸುತ್ತೀರಿ. ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳು ಶೇ.4ರಷ್ಟು ಬಡ್ಡಿದರ ಮುಂದುವರಿಯಲಿದ್ದು, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಅದೇ ಬಡ್ಡಿದರ ಅಂದರೆ ಶೇ.6.6ರಷ್ಟು ಗಳಿಕೆ ಇರಲಿದೆ.  


ಇದಲ್ಲದೆ ಕಿಸಾನ್ ವಿಕಾಸ್ ಪತ್ರ (KVP) ಶೇ.6.9ರಷ್ಟು ಬಡ್ಡಿದರವನ್ನು ಗಳಿಕೆ ಇರಲಿದೆ ಮತ್ತು 124 ತಿಂಗಳ ಅವಧಿಯನ್ನು ಹೊಂದಿರುತ್ತದೆ. ಇದಲ್ಲದೆ ಸರ್ಕಾರವು ಪೋಸ್ಟ್ ಆಫೀಸ್ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 1-5 ವರ್ಷಗಳ ಅವಧಿಗೆ ಶೇ.5.5-6.7ರಷ್ಟು ನಲ್ಲಿ ಉಳಿಸಿಕೊಂಡಿದೆ. ಏಪ್ರಿಲ್ 2020ರಿಂದ ಬಡ್ಡಿ ದರವು ಸ್ಥಿರವಾಗಿದೆ.


ಇದನ್ನೂ ಓದಿ: IT Return Last Date : IT ರಿಟರ್ನ್‌ ಸಲ್ಲಿಕೆಗೆ ಕೆಲವೇ ಗಂಟೆಗಳು ಬಾಕಿ : ತಪ್ಪಿದಲ್ಲ ಭಾರಿ ಮೊತ್ತದ ದಂಡ


‘ಜನವರಿ 1, 2022ರಿಂದ ಆರಂಭವಾಗಿದ್ದ 2021-22ನೇ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳಿಗೆ ಇದ್ದ ಬಡ್ಡಿ ದರವು 4ನೇ ತ್ರೈಮಾಸಿಕ ಅವಧಿ(Fourth Quarter of FY22)ಯಲ್ಲಿಯೂ ಮುಂದುವರೆಯಲಿದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆ ಸರ್ಕಾರ, ಸಣ್ಣ ಉಳಿತಾಯ ಯೋಜನೆಗಳಲ್ಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವೆಂದು ಹಣಕಾಸು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.