IT Return Last Date : IT ರಿಟರ್ನ್‌ ಸಲ್ಲಿಕೆಗೆ ಕೆಲವೇ ಗಂಟೆಗಳು ಬಾಕಿ : ತಪ್ಪಿದಲ್ಲ ಭಾರಿ ಮೊತ್ತದ ದಂಡ

ಐಟಿಆರ್ ಸಲ್ಲಿಸುವ ಗಡುವು ಶುಕ್ರವಾರ ಮಧ್ಯರಾತ್ರಿ 12 ಗಂಟೆಗೆ ಕೊನೆಗೊಳ್ಳಲಿದೆ. ಅದರ ನಂತರ ನೀವು ರಿಟರ್ನ್ ಸಲ್ಲಿಸಲು ಭಾರೀ ದಂಡವನ್ನು ಪಾವತಿಸಬೇಕಾಗಬಹುದು.

Written by - Channabasava A Kashinakunti | Last Updated : Dec 31, 2021, 08:39 PM IST
  • 'ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ'
  • 60 ಲಕ್ಷ ಹೆಚ್ಚು ರಿಟರ್ನ್ಸ್ ಸಲ್ಲಿಕೆಯಾಗಿದೆ
  • ತಪ್ಪಿದರೆ 5 ಸಾವಿರ ದಂಡ ತೆರಬೇಕಾಗುತ್ತದೆ
IT Return Last Date : IT ರಿಟರ್ನ್‌ ಸಲ್ಲಿಕೆಗೆ ಕೆಲವೇ ಗಂಟೆಗಳು ಬಾಕಿ : ತಪ್ಪಿದಲ್ಲ ಭಾರಿ ಮೊತ್ತದ ದಂಡ title=

ನವದೆಹಲಿ : 2020-21 ರ ಹಣಕಾಸು ವರ್ಷಕ್ಕೆ ನೀವು ಇನ್ನೂ ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸದಿದ್ದರೆ, ನಿಮಗೆ ಇನ್ನೂ ಕೆಲವು ಗಂಟೆಗಳು ಉಳಿದಿವೆ. ಐಟಿಆರ್ ಸಲ್ಲಿಸುವ ಗಡುವು ಶುಕ್ರವಾರ ಮಧ್ಯರಾತ್ರಿ 12 ಗಂಟೆಗೆ ಕೊನೆಗೊಳ್ಳಲಿದೆ. ಅದರ ನಂತರ ನೀವು ರಿಟರ್ನ್ ಸಲ್ಲಿಸಲು ಭಾರೀ ದಂಡವನ್ನು ಪಾವತಿಸಬೇಕಾಗಬಹುದು.

'ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ'

ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದ್ದು, ಅದನ್ನು ವಿಸ್ತರಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. ಶುಕ್ರವಾರ ಮಧ್ಯಾಹ್ನದವರೆಗೆ ದೇಶಾದ್ಯಂತ ಒಟ್ಟು 5.62 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :  January 1 : ನಾಳೆಯಿಂದ ಬದಲಾಗಲಿದೆ GST, LPG, ATM ಗೆ ಸಂಭಂದಿಸಿದ ಪ್ರಮುಖ ನಿಯಮಗಳು!

60 ಲಕ್ಷ ಹೆಚ್ಚು ರಿಟರ್ನ್ಸ್ ಸಲ್ಲಿಕೆ

ಕಳೆದ ವರ್ಷ ಡಿಸೆಂಬರ್ 30ರವರೆಗೆ 4.83 ಕೋಟಿ ರಿಟರ್ನ್ಸ್(IT Return) ಸಲ್ಲಿಕೆಯಾಗಿದೆ ಎಂದು ತಿಳಿಸಿದರು. ಈ ವರ್ಷ ಇದುವರೆಗೆ 5.62 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ. ಅದರಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 60 ಲಕ್ಷ ರಿಟರ್ನ್ಸ್ ಜಮೆಯಾಗಿದೆ. ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಜನರು ಇಂತಹ ವದಂತಿಗಳನ್ನು ನಂಬಬಾರದು ಎಂದು ಹೇಳಿದರು.

ತಪ್ಪಿದರೆ 5 ಸಾವಿರ ದಂಡ ತೆರಬೇಕಾಗುತ್ತದೆ

ನೀವು ಇನ್ನೂ ನಿಮ್ಮ ಆದಾಯ ತೆರಿಗೆ ರಿಟರ್ನ್(Income Tax Return) ಅನ್ನು ಸಲ್ಲಿಸದಿದ್ದರೆ, ನೀವು ಈ ಕೆಲಸವನ್ನು ಮಧ್ಯರಾತ್ರಿ 12 ರವರೆಗೆ ಮಾಡಬಹುದು. ಇದರ ನಂತರ, ರಿಟರ್ನ್ ಸಲ್ಲಿಸುವಾಗ ನೀವು ರೂ 5 ಸಾವಿರ ದಂಡವನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಜನರು 1,000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ :  PM Kisan 10ನೇ ಕಂತು ವರ್ಗಾವಣೆಗೆ ಇನ್ನೊಂದೇ ದಿನ ಬಾಕಿ, ಈಗಲೇ ನಿಮ್ಮ ಈ ದಾಖಲೆಗಳನ್ನು ಅಪ್ಡೇಟ್ ಮಾಡಿ

ಕೇಂದ್ರ ಸರ್ಕಾರ ಶುಕ್ರವಾರ ಜಿಎಸ್‌ಟಿ ಕೌನ್ಸಿಲ್‌ನ ಸಭೆಯನ್ನು ಕರೆದಿದೆ ಎಂದು ತಿಳಿಸೋಣ. ಈ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅದೇ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರು ಐಟಿ ರಿಟರ್ನ್‌ನ ಕೊನೆಯ ದಿನಾಂಕದ ವಿಷಯದ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News