ಬೆಂಗಳೂರು : ಕೇಂದ್ರ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ವಿವಾಹಿತ ಮಹಿಳೆಯರಿಗೆ ಆರು ಸಾವಿರ ರೂಪಾಯಿಗಳನ್ನು ನೀಡಲಾಗುವುದು. ಈ ಯೋಜನೆಯಡಿ ಸರ್ಕಾರವು ವಿವಾಹಿತ ಮಹಿಳೆಯರಿಗೆ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯ ಲಾಭ ಪಡೆಯುವುದು ಹೇಗೆ ನೋಡೋಣ. 


COMMERCIAL BREAK
SCROLL TO CONTINUE READING

ಮಹಿಳೆಯರಿಗೆ ಆರ್ಥಿಕ ನೆರವು :
ಸರ್ಕಾರಿ ಯೋಜನೆಯ ಹೆಸರು ಮಾತೃತ್ವ ವಂದನಾ ಯೋಜನೆ. ಇದರ ಅಡಿಯಲ್ಲಿ ಗರ್ಭಿಣಿಯರಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ. ದೇಶಾದ್ಯಂತ ಜನಿಸುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಮತ್ತು ಯಾವುದೇ ರೀತಿಯ ಕಾಯಿಲೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.


ಇದನ್ನೂ ಓದಿ :  Post Office Rule: ಏಪ್ರಿಲ್ 01ರಿಂದ ಬದಲಾಗಲಿದೆ ಅಂಚೆ ಕಚೇರಿಯ ಈ ಯೋಜನೆಗಳ ನಿಯಮ


ಏನಿದು ಮಾತೃತ್ವ ವಂದನಾ  ಯೋಜನೆ : 
>> ಗರ್ಭಿಣಿಯರ ವಯಸ್ಸು 19 ವರ್ಷಗಳಾಗಿರಬೇಕು.
>> ಈ ಯೋಜನೆಯಲ್ಲಿ ನೀವು ಆಫ್ ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
>> ಈ ಯೋಜನೆಯಲ್ಲಿ ಸರ್ಕಾರವು 6000 ರೂಪಾಯಿಗಳನ್ನು 4 ಕಂತುಗಳಲ್ಲಿ ನೀಡುತ್ತದೆ. 
>> ಈ ಯೋಜನೆಯನ್ನು ಮೋದಿ ಸರ್ಕಾರವು ಕಳೆದ ಜನವರಿ 1, 2017 ರಂದು ಪ್ರಾರಂಭಿಸಿತು.


ಹಣವನ್ನು ಹೇಗೆ  ನೀಡಲಾಗುತ್ತದೆ ?
ಈ ಯೋಜನೆಯಲ್ಲಿ ಗರ್ಭಿಣಿಯರಿಗೆ ಮೊದಲ ಹಂತದಲ್ಲಿ 1000 ರೂಪಾಯಿ, ಎರಡನೇ ಹಂತದಲ್ಲಿ 2000 ರೂಪಾಯಿ ಮತ್ತು ಮೂರನೇ ಹಂತದಲ್ಲಿ 2000 ರೂಪಾಯಿಗಳನ್ನು ನೀಡಲಾಗುತ್ತದೆ.  ಮಗು ಜನಿಸಿದ ನಂತರ ಕೊನೆಯ ಕಂತಿನ 1000 ರೂಪಾಯಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ.


ಇದನ್ನೂ ಓದಿ :  ಏಪ್ರಿಲ್ ಒಂದರಿಂದ ಜೇಬು ಕತ್ತರಿಸಲಿದೆ ಆನ್‌ಲೈನ್‌ ಪೇಮೆಂಟ್! UPI ಪೇಮೆಂಟ್ ಮಾಡಿದರೆ ಬೀಳುವುದು ಹೆಚ್ಚುವರಿ ಶುಲ್ಕ !


ಯಾರನ್ನು ಸಂಪರ್ಕಿಸಬೇಕು ? : 
ಈ ಯೋಜನೆಯಲ್ಲಿ ಯಾವುದೇ ಸಮಸ್ಯೆ ಎದುರಾದರೆ ತಕ್ಷಣ ಅಧಿಕೃತ ಸಹಾಯವಾಣಿ ಸಂಖ್ಯೆ 7998799804 ಅನ್ನು ಸಂಪರ್ಕಿಸಬಹುದು. ಸರ್ಕಾರದಿಂದ ಪಡೆಯುವ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.


ಇತರ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ :
ಇನ್ನು ಹೆಚ್ಚಿನ ಮಾಹಿತಿಗಾಗಿ  https://wcd.nic.in/schemes/pradhan-mantri-matru-vandana-yojana  ವೆಬ್ ಸೈಟ್ ಅನ್ನು ಪರಿಶೀಲಿಸಬಹುದು.  ಇಲ್ಲಿ ಈ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು  ನೀಡಲಾಗಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.