ಬೆಂಗಳೂರು : Google Pay,Paytm, phonepay ಹೀಗೆ UPI ಮೂಲಕ ವ್ಯವಹಾರ ನಡೆಸುವವರಿಗೆ ಇದು ಆಘಾತಕಾರಿ ಸುದ್ದಿ. ಹೌದು, ಏಪ್ರಿಲ್ 1, 2023 ರಿಂದ UPI ವಹಿವಾಟು ದುಬಾರಿಯಾಗಲಿದೆ. ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಪಾವತಿಗೆ ಸಂಬಂಧಿಸಿದ ಸುತ್ತೋಲೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊರಡಿಸಿದೆ. ಇದರ ಪ್ರಕಾರ, ಏಪ್ರಿಲ್ 1 ರಿಂದ ಯುಪಿಐ ಮೂಲಕ ನಡೆಸುವ ವಹಿವಾಟುಗಳ ಮೇಲೆ 'ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಶುಲ್ಕವನ್ನು ವಿಧಿಸಲು ಶಿಫಾರಸು ಮಾಡಲಾಗಿದೆ. ಈ ಬದಲಾವಣೆ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಲಿದೆ.
1.1 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ಸಲಹೆ :
NPCI ಹೊರಡಿಸಿದ ಸುತ್ತೋಲೆಯಲ್ಲಿ, ಏಪ್ರಿಲ್ 1 ರಿಂದ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ 1.1 ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸುವಂತೆ ಸೂಚಿಸಲಾಗಿದೆ. ಈ ಶುಲ್ಕವನ್ನು ವ್ಯಾಪಾರ ವಹಿವಾಟಿಗೆ ಅಂದರೆ ವ್ಯಾಪಾರಿಗಳಿಗೆ ಪಾವತಿಸುವ ಗ್ರಾಹಕರ ಮೇಲೆ ವಿಧಿಸಲಾಗುತ್ತದೆ. ವ್ಯಾಲೆಟ್ ಅಥವಾ ಕಾರ್ಡ್ ಮೂಲಕ ಮಾಡಿದ ವಹಿವಾಟು PPI ನಲ್ಲಿ ಬರುತ್ತದೆ.
ಇದನ್ನೂ ಓದಿ : ಪಿಪಿಎಫ್ ಮತ್ತು ಸುಕನ್ಯ ಸಮೃದ್ದಿ ಯೋಜನೆಯಲ್ಲಿ ಬದಲಾವಣೆ ! ಏಪ್ರಿಲ್ ನಿಂದ ಹೊಸ ನಿಯಮ ಜಾರಿ
ಡಿಜಿಟಲ್ ಮೋಡ್ ಮೂಲಕ ಮಾಡುವ ಪೇಮೆಂಟ್ ಆಗಲಿವೆ ದುಬಾರಿ :
NPCI ಯ ಸುತ್ತೋಲೆಯ ಪ್ರಕಾರ ಏಪ್ರಿಲ್ 1 ರಿಂದ, Google Pay, Phone Pay ಮತ್ತು Paytm ನಂತಹ ಡಿಜಿಟಲ್ ಮೋಡ್‌ಗಳ ಮೂಲಕ ಮಾಡಿದ ಪಾವತಿಗಳು ದುಬಾರಿಯಾಗುತ್ತವೆ. 2,000 ರೂ.ಗಿಂತ ಹೆಚ್ಚು ಹಣ ಪಾವತಿಸಿದರೆ, ಅದರ ಬದಲಿಗೆ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.
70 ಪ್ರತಿಶತದಷ್ಟು ಯುಪಿಐ ವಹಿವಾಟುಗಳು 2,000 ರೂಪಾಯಿಗಿಂತ ಹೆಚ್ಚಾಗಿರುತ್ತದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಏಪ್ರಿಲ್ 1 ರಿಂದ ನಿಯಮವನ್ನು ಜಾರಿಗೊಳಿಸಲಾಗುವುದು. ನಂತರ ಅದನ್ನು ಸೆಪ್ಟೆಂಬರ್ 30, 2023 ರ ಮೊದಲು ಪರಿಶೀಲಿಸಲಾಗುವುದು ಎಂದು ಎನ್‌ಪಿಸಿಐ ಸುತ್ತೋಲೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಬುಧವಾರದ ಅಡಿಕೆ ಧಾರಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.