ಪಿಂಚಣಿದಾರರಿಗೆ ಶಾಕಿಂಗ್ ನ್ಯೂಸ್! ಪೆನ್ಶನ್ ಮೊತ್ತ ಇಳಿಸಲು ಮುಂದಾದ ಸರ್ಕಾರ
ಇಪಿಎಫ್‌ಒದ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಲಾದ ಸುತ್ತೋಲೆಯ ಪ್ರಕಾರ, ಸೆಪ್ಟೆಂಬರ್ 1, 2014 ರ ಮೊದಲು ನಿವೃತ್ತರಾದ ಮತ್ತು ಹೆಚ್ಚಿನ ವೇತನದ ಆಧಾರದ ಮೇಲೆ ನೀಡಲಾಗುತ್ತಿದ್ದ ಪಿಂಚಣಿ ಪಾವತಿ ಬಗ್ಗೆ ಮರುಪರಿಶೀಲಿಸಲಾಗುತ್ತದೆ.
ನವದೆಹಲಿ : ಪಿಂಚಣಿ ಪಡೆಯುವ ಜನರಿಗೊಂದು ಶಾಕಿಂಗ್ ನ್ಯೂಸ್. ಸೆಪ್ಟೆಂಬರ್ 2014 ರ ಮೊದಲು ನಿವೃತ್ತಿ ಹೊಂದಿದ ವ್ಯಕ್ತಿಗಳ ಪಿಂಚಣಿ ಕುರಿತು ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಸುತ್ತೋಲೆ ಇದೀಗ ಪಿಂಚಣಿದಾರರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರವು ಅನೇಕ ನೌಕರರ ಪಿಂಚಣಿಯನ್ನು ರದ್ದುಗೊಳಿಸಬಹುದು ಎಂದು ಹೇಳಲಾಗಿದೆ. ಕಳೆದ 5 ವರ್ಷಗಳಿಂದ ನೌಕರರು ಈ ಪ್ರಯೋಜನವನ್ನು ಪಡೆಯುತ್ತಿದ್ದಾರೆ. .
ಪಿಂಚಣಿ ಪಾವತಿಯನ್ನು ನಿಲ್ಲಿಸಬಹುದು :
ಇಪಿಎಫ್‌ಒದ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಲಾದ ಸುತ್ತೋಲೆಯ ಪ್ರಕಾರ, ಸೆಪ್ಟೆಂಬರ್ 1, 2014 ರ ಮೊದಲು ನಿವೃತ್ತರಾದ ಮತ್ತು ಹೆಚ್ಚಿನ ವೇತನದ ಆಧಾರದ ಮೇಲೆ ನೀಡಲಾಗುತ್ತಿದ್ದ ಪಿಂಚಣಿ ಪಾವತಿ ಬಗ್ಗೆ ಮರುಪರಿಶೀಲಿಸಲಾಗುತ್ತದೆ. ಈ ಪಿಂಚಣಿದಾರರ ಪಿಂಚಣಿಗೆ ಕತ್ತರಿ ಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದನ್ನೂ ಓದಿ : ಇನ್ನು ಇಲ್ಲೂ ಸಿಗುತ್ತದೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್
2023ರ ಜನವರಿಯಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಪಿಂಚಣಿ ನೀಡದಂತೆ ನೋಡಿಕೊಳ್ಳುವುದು ಅಗತ್ಯ ಎಂಬ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಪಿಂಚಣಿಯನ್ನು 5000 ಅಥವಾ 6000 ಸಂಬಳದ ಆಧಾರದ ಮೇಲೆ ಬದಲಾಯಿಸಲಾಗುತ್ತದೆ. ಈ ಕುರಿತು ಪ್ರಸ್ತಾವನೆಯನ್ನು ಇಪಿಎಫ್‌ಒ ನೀಡಿದೆ.
ಪಿಂಚಣಿದಾರರ ಹಕ್ಕುಗಳ ಬಗ್ಗೆ ಕಳವಳ :
ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ನಿವೃತ್ತ ಉದ್ಯೋಗಿಗಳು ನಷ್ಟವನ್ನು ಅನುಭವಿಸುತ್ತಾರೆ. 2003 ರಲ್ಲಿ OTIS ಎಲಿವೇಟರ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ EPS-95 ಅನ್ನು ಎತ್ತಿಹಿಡಿದಿದ್ದು, ಇದಾದ ನಂತರ 24,672 ಜನರ ಪಿಂಚಣಿಯನ್ನು ಪರಿಷ್ಕರಿಸಲಾಯಿತು.
ಇದನ್ನೂ ಓದಿ : ಮಾರುಕಟ್ಟೆಯ ಭಾರಿ ಕುಸಿತಕ್ಕೆ ಕಾರಣವಾದ ಅಡಾನಿ ಗ್ರೂಪ್, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ
ಸುತ್ತೋಲೆ ಹೊರಡಿಸಿದ EPFO :
EPFO ಸುತ್ತೋಲೆಯ ಪ್ರಕಾರ, ಯಾವುದೇ ಪಿಂಚಣಿ ಅರ್ಹತೆಯನ್ನು ಪರಿಷ್ಕರಿಸುವ ಮೊದಲು, ಅದರ ಬಗ್ಗೆ ಪಿಂಚಣಿದಾರರಿಗೆ ತಿಳಿಸುವುದು ಅವಶ್ಯಕ. ಇದಕ್ಕಾಗಿ ಮುಂಚಿತವಾಗಿ ಅಧಿಸೂಚನೆಯನ್ನು ಕಳುಹಿಸುವುದು ಅನಿವಾರ್ಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.