ಮಾರುಕಟ್ಟೆಯ ಭಾರಿ ಕುಸಿತಕ್ಕೆ ಕಾರಣವಾದ ಅಡಾನಿ ಗ್ರೂಪ್, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ

Indian Stock Market Big Update: ಅಡಾಣಿ ಗ್ರೂಪ್ ಕುರಿತು ಹಿಂಡೇನ್ ಬರ್ಗ್ ರಿಸರ್ಚ್ ವರದಿ ಬಿಡುಗಡೆ ಮಾಡಿದ ಹಿನ್ನೆಲೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದ್ದು, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಮುಳುಗಿಹೋಗಿವೆ.

Written by - Nitin Tabib | Last Updated : Jan 27, 2023, 03:04 PM IST
  • ಇಂದಿನ ವ್ಯವಹಾರದಲ್ಲಿ ಬ್ಯಾಂಕ್ ಮತ್ತು ಹಣಕಾಸು ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ.
  • ನಿಫ್ಟಿಯ ಎರಡೂ ಸೂಚ್ಯಂಕಗಳು ಸುಮಾರು ಶೇ.3ರಷ್ಟು ಕುಸಿತ ದಾಖಲಿಸಿವೆ.
  • ಲೋಹ ಸೂಚ್ಯಂಕದಲ್ಲಿ ಶೇ 4ರಷ್ಟು ಕುಸಿತ ಸಂಭವಿಸಿದೆ.
ಮಾರುಕಟ್ಟೆಯ ಭಾರಿ ಕುಸಿತಕ್ಕೆ ಕಾರಣವಾದ ಅಡಾನಿ ಗ್ರೂಪ್, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ title=
ಷೇರು ಪೇಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ

Sensex-Nifty Crash: ಇಂದಿನ ದಿನದ ವಹಿವಾಟಿನಲ್ಲಿ, ದೇಶೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಬಿಕರಿ ಕಂಡುಬಂದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ವರ್ಷದ ಬಹುತೇಕ ಅತಿ ದೊಡ್ಡ ಕುಸಿತ ಸಂಭವಿಸಿದೆ. ಇಂಟ್ರಾಡೇನಲ್ಲಿ ಸೆನ್ಸೆಕ್ಸ್ 1000 ಅಂಕಗಳಿಗಿಂತ ಹೆಚ್ಚು ಕುಸಿತಕಂಡಿದೆ. ಇದೇ ವೇಳೆ ನಿಫ್ಟಿ ಕೂಡ 17550ರ ಕೆಳಗೆ ಬಂದಿದೆ. ಇಂದು ಅಡಾಣಿ ಗ್ರೂಪ್ ಷೇರುಗಳಲ್ಲಿ ಭಾರಿ ಮಾರಾಟ ಪ್ರಕ್ರಿಯೆ ಮುಂದುವರಿದಿದೆ. ಇದೇ ವೇಳೆ, ಬ್ಯಾಂಕ್ ಮತ್ತು ಹಣಕಾಸು ಷೇರುಗಳಲ್ಲಿ ಮಾರಾಟದಿಂದಾಗಿ ಮಾರುಕಟ್ಟೆಯ ಪರಿಸ್ಥಿತಿ ತೀರಾ   ಹದಗೆಟ್ಟಿದೆ. ಮೆಟಲ್ ಷೇರುಗಳಲ್ಲಿಯೂ ಸಾಕಷ್ಟು ಲಾಭದ ಬುಕಿಂಗ್ ನಡೆದಿದೆ. ಪ್ರಸ್ತುತ  ಸೆನ್ಸೆಕ್ಸ್ ನಲ್ಲಿ 991 ಅಂಕ ಕುಸಿತ ಕಾಣಿಸುತ್ತಿದ್ದು, 59,214 ಮಟ್ಟದಲ್ಲಿ ತನ್ನ ದಿನದ  ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ನಿಫ್ಟಿ 329 ಅಂಕಗಳ ಕುಸಿತ ಕಂಡು 17,563 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ
ಮಾರುಕಟ್ಟೆಯ ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರ ಸುಮಾರು 8 ಲಕ್ಷ ಕೋಟಿ ರೂ. ಮುಳುಗಿವೆ.  ಬುಧವಾರದ ಮಾರುಕಟ್ಟೆಯ ಮುಕ್ತಾಯಕ್ಕೆ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯ 2,76,49,559.08 ಕೋಟಿ ರೂ.ಗಳಷ್ಟಿತ್ತು. ಅದು ಇಂದು ಇಂಟ್ರಾಡೇನಲ್ಲಿ 2,68,95,065.56 ಕೋಟಿ ರೂ.ಗೆ ಇಳಿಕೆಯಾಗಿದೆ.

ಇಂದಿನ ವ್ಯವಹಾರದಲ್ಲಿ ಬ್ಯಾಂಕ್ ಮತ್ತು ಹಣಕಾಸು ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ನಿಫ್ಟಿಯ ಎರಡೂ ಸೂಚ್ಯಂಕಗಳು ಸುಮಾರು ಶೇ.3ರಷ್ಟು ಕುಸಿತ ದಾಖಲಿಸಿವೆ. ಲೋಹ ಸೂಚ್ಯಂಕದಲ್ಲಿ ಶೇ 4ರಷ್ಟು ಕುಸಿತ ಸಂಭವಿಸಿದೆ. ಆದರೆ, ಆಟೋ ಇಂಡೆಕ್ಸ್ ಹಸಿರು ನಿಶಾನೆಯಲ್ಲಿ ವಹಿವಾಟನ್ನು ಮುಂದುವರೆಸಿದೆ. ಐಟಿ, ರಿಯಾಲ್ಟಿ ಮತ್ತು ಫಾರ್ಮಾ ಸೂಚ್ಯಂಕ ಕೂಡ ಕೆಂಪು ನಿಶಾನೆಯಲ್ಲಿ ವ್ಯವಹರಿಸುತ್ತಿವೆ.

ಯಾವ ಷೇರುಗಳು ಏರಿಕೆ ಮತ್ತು ಯಾವುದರಲ್ಲಿ ಕುಸಿತ?
ಹೆವಿವೇಯ್ಟ್ ಷೇರುಗಳಲ್ಲಿ ಭಾರಿ ಮಾರಾಟ ಪ್ರಕ್ರಿಯೆ ನಡೆದಿದೆ. ಸೆನ್ಸೆಕ್ಸ್ 30 ರ 16 ಷೇರುಗಳು ಪ್ರಸ್ತುತ ರೆಡ್ ಮಾರ್ಕ್ ನಲ್ಲಿವೆ. ಇಂದಿನ ಟಾಪ್ ಗೇನರ್‌ಗಳಲ್ಲಿ  TATAMOTORS, ITC, SunPHARMA, HCLTECH. ಟಾಪ್ ಲೂಸರ್‌ಗಳಲ್ಲಿ ICICIBANK, HDFC, AXISBANK, HDFCBANK, SBIN, RELIANCE, BHARTIARTL, TITAN ಶಾಮೀಲಾಗಿವೆ.

ಮಾರುಕಟ್ಟೆ ಇಷ್ಟೊಂದು ಕುಸಿತಕ್ಕೆ ಕಾರಣವೇನು?
ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಹೇಳುವ ಪ್ರಕಾರ, ಅಡಾಣಿ ಗ್ರೂಪ್ ಕುರಿತು ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯನ್ನು ಬಿಡುಗಡೆ ಮಾಡಿದ ನಂತರ, ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಭಾರೀ ಮಾರಾಟದ ಒತ್ತಡ ನಿರ್ಮಾಣಗೊಂಡಿದೆ ಎಂದು ಹೇಳಿದ್ದಾರೆ.  ಈ ವರದಿ ಹಿನ್ನೆಲೆ ಅಡಾಣಿ ಗ್ರೂಪ್ ಷೇರುಗಳಲ್ಲಿ ಭಾರಿ ಏರಿಳಿತ ಸಂಭವಿಸಿದೆ. ವರದಿಯು ಗ್ರೂಪ್ ನ ಹೈ ಡೆಟ್ ಕುರಿತು ಉಲ್ಲೇಖಿಸಲಾಗಿದೆ. ಈ ವರದಿಯು ಬ್ಯಾಂಕಿಂಗ್ ವಲಯದ ಮೇಲೂ ಪರಿಣಾಮ ಬೀರಿದೆ. ವಿಶೇಷವಾಗಿ ಪಿಎಸ್‌ಯು ಬ್ಯಾಂಕ್ ಷೇರುಗಳಲ್ಲಿ ಭಾರೀ ಮಾರಾಟ ಪ್ರಕ್ರಿಯೆ ನಡೆದಿದೆ.

ನಿಫ್ಟಿ 100-ಡಿಎಂಎಗೆ ಸರೆಂಡರ್
ಬ್ಯಾಂಕ್ ನಿಫ್ಟಿ ತನ್ನ 100-DMA 41500 ಅನ್ನು ಒಪ್ಪಿಸಿದೆ, ಇದು ಮಲ್ಟಿ ಸ್ಟಾಪ್ ನಷ್ಟಗಳನ್ನು ಪ್ರಚೋದಿಸುತ್ತದೆ, ಇದರಿಂದ  ಮಾರಾಟದ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಜನವರಿ 2022 ರ ಎರಡನೇ ಮತ್ತು ಮೂರನೇ ವಾರದಲ್ಲಿ ನಿಫ್ಟಿ ಡೋಜಿ ಕ್ಯಾಂಡಲ್‌ಗಳನ್ನು (ಇದು ಶ್ರೇಣಿಯ ಬೌಂಡ್ ಮೂವ್) ಕಂಡಿದ್ದರಿಂದ ಮಾರುಕಟ್ಟೆಯು ಕಳೆದ ವರ್ಷದ ಮಾದರಿಯನ್ನು ಅನುಸರಿಸುತ್ತಿದೆ, ನಂತರ ಜನವರಿ ಕೊನೆಯ ವಾರದಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಇದನ್ನೂ ಓದಿ-ಹಳೆ ಪೆನ್ಷನ್ ಯೋಜನೆಯ ಕುರಿತು ಇಲ್ಲಿದೆ ಒಂದು ಅಪ್ಡೇಟ್! ಈ ಸರ್ಕಾರಿ ನೌಕರರಿಗೆ ಸಿಗಲಿದೆ ಓಪಿಎಸ್ ಲಾಭ

ತಾಂತ್ರಿಕವಾಗಿ, ಬ್ಯಾಂಕ್ ನಿಫ್ಟಿಗೆ 40000 ಮಾನಸಿಕ ಬೆಂಬಲದ ಮಟ್ಟವಾಗಿದೆ, ಆದರೆ 39500 ಪ್ರಮುಖ ಬೆಂಬಲದ ಮಟ್ಟವಾಗಿದೆ. ಬ್ಯಾಂಕ್ ನಿಫ್ಟಿ 40000-39500 ಶ್ರೇಣಿಯಿಂದ ಪುಟಿದೇಳಲು ನಿರ್ವಹಿಸಿದರೆ, ನಾವು ಮತ್ತಷ್ಟು ಬೌನ್ಸ್‌ಬ್ಯಾಕ್ ನಿರೀಕ್ಷಿಸಬಹುದು. ಆದಾಗ್ಯೂ, ಬ್ಯಾಂಕ್ ನಿಫ್ಟಿ ಉತ್ತಮ ಚೇತರಿಕೆಗಾಗಿ 42000 ಕ್ಕಿಂತ ಹೆಚ್ಚು ಹಿಂತಿರುಗಬೇಕಾಗಿದೆ.

ಇದನ್ನೂ ಓದಿ-ಯುವಕರಿಗೊಂದು ಭಾರಿ ಸಂತಸದ ಸುದ್ದಿ! ಏಪ್ರಿಲ್ 1 ರಿಂದ ಸಿಗಲಿದೆ ನಿರುದ್ಯೋಗ ಭತ್ಯೆ, ಎಷ್ಟು?

ಬಜೆಟ್‌ಗೂ ಮುನ್ನವೇ ಮಾರುಕಟ್ಟೆ ಎಚ್ಚರಿಕೆ
ಈ ಕುರಿತು ಮಾತನಾಡಿರುವ ಮಾರುಕಟ್ಟೆಯ ಮತ್ತೋರ್ವ ತಜ್ಞ ಅಡಾಣಿ ಗ್ರೂಪ್ ಷೇರುಗಳ ಮಾರಾಟವೇ ಮಾರುಕಟ್ಟೆಯ ಭಾರಿ ಕುಸಿತಕ್ಕೆ ಕಾರಣವೆಂದು ಹೇಳಿದ್ದಾರೆ. ಅಡಾಣಿ ಸಮೂಹದ ಕುರಿತಾದ  ನಕಾರಾತ್ಮಕ ವರದಿಗೆ ಮಾರುಕಟ್ಟೆಯು ಪ್ರತಿಕ್ರಿಯಿಸಿದೆ ಎಂದು ಅವರು ಹೇಳಿದ್ದಾರೆ. ಏಕೆಂದರೆ ಕೆಲವು ಸ್ಟಾಕ್‌ಗಳಲ್ಲಿ ಸ್ಟಾಕ್ ನಿರ್ದಿಷ್ಟ ಧನಾತ್ಮಕ ಪ್ರತಿಕ್ರಿಯೆಯೂ ಕಂಡುಬಂದಿದೆ. ಉದಾಹರಣೆಗೆ, ಟಾಟಾ ಮೋಟಾರ್ಸ್ ಉತ್ತಮ ಫಲಿತಾಂಶಗಳನ್ನು ನೀಡಿದ್ದು, ಷೇರುಗಳು ಶೇಕಡಾ 8 ರಷ್ಟು ಏರಿಕೆಯನ್ನು ದಾಖಲಿಸಿವೆ. ಇದೇ ವೇಳೆ ಬಜೆಟ್‌ಗೆ ಮುಂಚೆಯೇ, ಹೂಡಿಕೆದಾರರು ಲಾಭ ಗಳಿಸುತ್ತಿದ್ದಾರೆ. ಹೀಗಾಗಿ ಬಜೆಟ್‌ ನಂತರ ಹೊಸ ಹಂಚಿಕೆಗೆ ಅವಕಾಶ ಸಿಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News