Green Cement in India: ಭಾರತದ ಹಲವು ನಗರಗಳಲ್ಲಿ ವಾಯುಮಾಲಿನ್ಯ ತುಂಬಾ ಹೆಚ್ಚಾಗಿದೆ. ಈ ಹಿನ್ನೆಲೆ ವಾತಾವರಣಕ್ಕೆ ಹೆಚ್ಚಿನ ಹಾನಿ ತಲುಪುತ್ತದೆ. ಇನ್ನೊಂದೆಡೆ ಈ ಮಾಲಿನ್ಯವನ್ನು ತಪ್ಪಿಸಲು ಜನರೂ ಕೂಡ ಏನನ್ನು ಮಾಡುವುದಿಲ್ಲ. ಆದರೆ, ಕೆಲವರು ವಾತಾವರಣವನ್ನು ರಕ್ಷಿಸಲು ಹೆಜ್ಜೆ ಕೂಡ ಇಡುತ್ತಾರೆ.
 
ಗ್ರೀನ್ ಸಿಮೆಂಟ್
ಮಾಲಿನ್ಯವನ್ನು ಹೆಚ್ಚಿಸುವಲ್ಲಿ ಉದ್ಯಮ ರಂಗ ಸಾಕಷ್ಟು ಕೊಡುಗೆ ನೀಡುತ್ತದೆ. ಉದ್ಯಮಗಳಿಂದ ಹೊರಹೊಮ್ಮುವ ಮಾಲಿನ್ಯ ತುಂಬಾ ಅಪಾಯಕಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನವರತ್ನ ಗ್ರೂಪ್, ಗ್ರೀನ್ ಸಿಮೆಂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನವರತ್ನ ಗ್ರೀನ್ ಸಿಮೆಂಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (NGCIPL) ಗ್ರೀನ್ ಕ್ರೀಟ್‌ ಬಿಡುಗಡೆ ಮಾಡಿದೆ. ಇದು ಶೂನ್ಯ ಇಂಗಾಲ ಹೊರಸೂಸುವಿಕೆಯ ಉತ್ಪನ್ನವಾಗುವುದರ ಜೊತೆಗೆ ಗಡಿ ಮುಕ್ತ ಕಟ್ಟಡ ಸಾಮಗ್ರಿಯ ಗುಣಗಳನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ಗುಣಮಟ್ಟ
NGCIPL ನ 'ಗ್ರೀನ್ ಕ್ರೀಟ್'ನಲ್ಲಿ  ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗಿಲ್ಲ. ಜೊತೆಗೆ, ಇದು ನಿರ್ಮಾಣ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ. ನವರತ್ನ ಸಮೂಹ ಸಂಸ್ಥೆಗಳ ಸಿಇಒ ಹಿಮಾಂಶ್ ವರ್ಮಾ ಅವರು ತನ್ಮೂಲಕ ನಿರ್ಮಾಣ ಉದ್ಯಮವನ್ನು ಪರಿಸರ ಸ್ನೇಹಿಯಾಗಿಸುವ ಕನಸನ್ನು ನನಸಾಗಿಸಿದ್ದಾರೆ.


ಇದನ್ನೂ ಓದಿ-Vegetable Price: ಕರ್ನಾಟಕದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ: ಗಮನಿಸಿ


ಜಗತ್ತಿನಲ್ಲಿ ಬಿಕ್ಕಟ್ಟು ಸೃಷ್ಟಿ
ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಶೋಷಣೆ ಜಗತ್ತಿನಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಹಿಮಾಂಶ್ ವರ್ಮಾ ಹೇಳಿದ್ದಾರೆ. ಇದನ್ನೇ ಸವಾಲಾಗಿ ಸ್ವೀಕರಿಸಿರುವ ತಮ್ಮ ಕಂಪನಿಯ ತಜ್ಞರು ಹಾಗೂ ವಿಜ್ಞಾನಿಗಳ ತಂಡ ‘ಗ್ರೀನ್ ಕ್ರೀಟ್’ ರೂಪದಲ್ಲಿ ಉತ್ತಮ ವಿಕಲ್ಪವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿದ್ದಾರೆ.. ಪರಿಸರ ಸ್ನೇಹಿಯಾಗಿ ಕೆಲಸ ಮಾಡುವಾಗ ಗಾಳಿ, ನೀರು ಮತ್ತು ಭೂ ಮಾಲಿನ್ಯವನ್ನು ಪರಿಶೀಲಿಸುವುದು ಮತ್ತು ಕಡಿಮೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ವರ್ಮಾ ಹೇಳಿದ್ದಾರೆ.


ಇದನ್ನೂ ಓದಿ-Service Charge: ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ..!


ರನ್ನಿಂಗ್ ಉತ್ಪನ್ನ
ಗ್ರೀನ್ ಸಿಮೆಂಟ್ ಹೆಚ್ಚು ಬಾಳಿಕೆ ಬರುವ ಒಂದು ರನ್ನಿಂಗ್ ಉತ್ಪನ್ನವಾಗಿದೆ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ, ಗ್ರೀನ್ ಕ್ರೀಟ್ ಶಕ್ತಿ, ಡಕ್ಟಿಲಿಟಿ, ಬಾಳಿಕೆ ಮತ್ತು ಬಿರುಕು ಪ್ರತಿರೋಧವನ್ನು ಹೊಂದಿದೆ, ಇದು ಸಾಂಪ್ರದಾಯಿಕ ಸಿಮೆಂಟ್ಗಿಂತ ಉತ್ತಮವಾಗಿದೆ. ಅದರಲ್ಲಿಯೂ ಮುಖ್ಯವಾಗಿ, 'ಗ್ರೀನ್ ಕ್ರೀಟ್' ಸಾಮಾನ್ಯ ಸಿಮೆಂಟ್ಗಿಂತ ಹೆಚ್ಚು ಕಾಲ ಬಾಳಿಕೆಯನ್ನು ಹೊಂದಿದೆ, ಇದು ಬೃಹತ್ ಕಟ್ಟಡಗಳನ್ನು ನಿರ್ಮಿಸಲು ಅತ್ಯುತ್ತಮ ಆಯ್ಕೆಯಾಗಿದೆ ಎಂದು ವರ್ಮಾ  ಹೇಳಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.