Gruha Lakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಮಹಿಳಾ ಸಬಲೀಕರಣದ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ 2000 ರೂ. ಹಣ ಬರುತ್ತಿದೆ. ಈಗಾಗಲೇ 10 ಕಂತುಗಳಷ್ಟು ಹಣ ಯಜಮಾನಿಯರ ಖಾತೆಗೆ ಜಮಾ ಆಗಿದೆ. 12ನೇ ಕಂತಿನ ಗೃಹಲಕ್ಷ್ಮಿ ಹಣದ ಬಗ್ಗೆ ಹೊಸ ಅಪ್‌ಡೇಟ್‌ ಬಗ್ಗೆ ಬಹುತೇಕ ಮಹಿಳೆಯರು ಕಾಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದಾರೆ. ಇನ್ಮುಂದೆ ಯಾವಾಗ ಹಣ ಬರಲಿದೆ? ಯಾವ ಮಹಿಳೆಯರಿಗೆ ಹಣ ತಲುಪಲಿದೆ ಅನ್ನೋದರ ಮಾಹಿತಿಯನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ. 


COMMERCIAL BREAK
SCROLL TO CONTINUE READING

ಇದುವರೆಗೂ ಮನೆಯ ಯಜಮಾನೀಯರು ಸುಮಾರು 10 ಕಂತುಗಳಷ್ಟು ಗೃಹಲಕ್ಷ್ಮಿ ಹಣವನ್ನು ಸ್ವೀಕರಿಸಿದ್ದಾರೆ. 11 & 12ನೇ ಕಂತಿನ ಹಣಕ್ಕಾಗಿ ಬಹುತೇಕ ಮಹಿಳೆಯರು ಕಾಯುತ್ತಿದ್ದಾರೆ. ಈಗಾಗಲೇ ಜೂನ್‌ ತಿಂಗಳ ಹಣ ಬರುವುದು ಬಹಳಷ್ಟು ತಡವಾಗಿದ್ದು, ಹಣ ಬಂದಿಲ್ಲವೆಂದು ಅನೇಕರು ಚಿಂತಿತರಾಗಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದು, ಶೀಘ್ರವೇ ಜೂನ್‌ ತಿಂಗಳ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ. ಇದೇ ತಿಂಗಳಲ್ಲಿ ಜೂನ್‌ ಮತ್ತು ಜುಲೈ ತಿಂಗಳ ಹಣವನ್ನು ಜಮೆ ಮಾಡುವುದು ಅವರು ತಿಳಿಸಿದ್ದಾರೆ. 


ಇದನ್ನೂ ಓದಿ: ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು..? ಮಿತಿ ಮೀರಿದ್ರೆ ದಂಡ ಫಿಕ್ಸ್‌..! ಎಲ್ಲರೂ ತಿಳಿದುಕೊಳ್ಳಿ


ಗೃಹಲಕ್ಷ್ಮಿ ಯೋಜನೆಯ ಹಣ ಇದೇ ತಿಂಗಳ 20ರೊಳಗೆ ಮಹಿಳೆಯರ ಖಾತೆಗೆ ಜಮಾ ಆಗಬಹುದು ಎಂದು ಹೇಳಲಾಗುತ್ತಿದೆ. ಇನ್ನುಂದೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಯೋಜನೆಯ ಹಣ ತಲುಪಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. ಹೀಗಾಗಿ ಇದೇ ತಿಂಗಳಿನಲ್ಲಿ ಮಹಿಳೆಯರು 2 ತಿಂಗಳಿನ ಒಟ್ಟು ನಾಲ್ಕು ಸಾವಿರ ಹಣ ಪಡೆಯಲಿದ್ದಾರೆ. ಆದರೆ ಈ ಹಣ ದಾಖಲೆಗಳು ಸರಿ ಇರುವ ಮಹಿಳೆಯರು ಖಾತೆಗೆ ಮಾತ್ರ ಬರಲಿದೆ ಅಂತಾ ಹೇಳಲಾಗಿದೆ. 


ಹಣ ಬರದಿರುವ ಮಹಿಳೆಯರು ತಮ್ಮ ದಾಖಲೆಗಳನ್ನು ಸರಿಪಡಿಸಬೇಕು. ಈ ಬಗ್ಗೆ ಸರ್ಕಾರ ಈಗಾಗಲೇ ಹಲವು ಬಾರಿ ಮಹಿಳೆಯರಿಗೆ ಅರಿವು ಮೂಡಿಸಿದೆ. ಆದರೂ ಆಧಾರ್‌ ಕಾರ್ಡ್‌ ಸಿಡಿಂಗ್‌ ಸಮಸ್ಯೆ, ಬ್ಯಾಂಕ್‌ ಖಾತೆ ನಿಷ್ಕ್ರಿಯ, ರೇಷನ್‌ ಕಾರ್ಡ್‌ ಅಪ್‌ಡೇಟ್‌ ಇತ್ಯಾದಿ ಸಮಸ್ಯೆಯಾಗಿದ್ದು, ಮಹಿಳೆಯರು ಇಂತಹ ದಾಖಲೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಸೂಚನೆ ನೀಡಲಾಗಿದೆ. ಯಾ ದಾಖಲೆಗಳು ಸರಿಯಾಗಿರುತ್ತವೋ ಅವರಿಗೆ ಮಾತ್ರ ಯೋಜನೆಯ ಹಣ ಜಮಾ ಆಗುತ್ತದೆ. ಇಲ್ಲದಿದ್ದರೆ ಆಗುವುದಿಲ್ಲ, ಹೀಗಾಗಿ ಕೂಡಲೇ ಏನಾದರೂ ತಪ್ಪುಗಳಿದ್ದರೆ ಅದನ್ನು ಸರಿಪಡಿಸಬೇಕಾಗಿದೆ. 


ಇದನ್ನೂ ಓದಿ: Gruha Lakshmi Scheme: ಈ ದಿನ ಜಮೆಯಾಗಲಿದೆ ʼಗೃಹಲಕ್ಷ್ಮೀʼ ಜೂನ್‌ ತಿಂಗಳ ಹಣ!


ಇನ್ನು ಹಣ ಬಂದಿರುವ ಬಗ್ಗೆ ಪರಿಶೀಲಿಸಲು ಮಹಿಳೆಯಡು DBT ಕರ್ನಾಟಕ ಎಂಬ ಆಪ್‌ ಡೌನ್‌ಲೋಟ್‌ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ನಿಮ್ಮ ಹೆಸರು ನಮೂದಿಸಿ ಹಣ ಜಮಾ ಆಗಿರುವ ಬಗ್ಗೆ ಪರಿಶೀಲಿಸಬಹುದು. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲದಿದ್ದರೆ ಸರ್ಕಾರದ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.