Karnataka Gruha Lakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಗೃಹಲಕ್ಷ್ಮೀʼ ಯೋಜನೆಯ ಜೂನ್‌ ತಿಂಗಳ ಕಂತಿನ ಹಣ ಶೀಘ್ರವೇ ಯಜಮಾನಿಯರ ಖಾತೆಗೆ ಜಮೆಯಾಗಲಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈ ಯೋಜನೆಯಡಿ ಮಾರ್ಚ್ ನಂತರ ಹೊಸದಾಗಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನೂ ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ʼಗೃಹಲಕ್ಷ್ಮೀʼ ಯೋಜನೆಯ ಹಣ ಬರದಿದ್ದರೆ ಹೆಲ್ಪ್‌ಲೈನ್‌ಗೆ ಕರೆ ಮಾಡಬಹುದು ಎಂದು ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಅನರ್ಹರಿಗೆ ಯೋಜನೆಯ ಲಾಭ!


ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ಮುನ್ನ ಮತ್ತು ನಂತರ ಅರ್ಜಿ ಸಲ್ಲಿಸಿದವರನ್ನೂ ʼಗೃಹಲಕ್ಷ್ಮೀʼ ಯೋಜನೆಗೆ ಪರಿಗಣಿಸಲಾಗುತ್ತಿದೆ. ಈ ಅವಧಿಯಲ್ಲಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಯೋಜನೆಗೆ ಬಿಪಿಎಲ್‌, ಎಪಿಎಲ್‌ ಪಡಿತರ ಹೊಂದಿರುವವರು ಎಂಬ ಭೇದ-ಭಾವವಿಲ್ಲದೆ ಎರಡೂ ವರ್ಗದ ಕಾರ್ಡ್‌ದಾರರನ್ನು ಪರಿಗಣಿಸಲಾಗುತ್ತದೆ. ಆದಾಯ ತೆರಿಗೆ ಪಾವತಿದಾರರನ್ನು ʼಗೃಹಲಕ್ಷ್ಮೀʼ ಯೋಜನೆಯಿಂದ ಹೊರಗಿಡಲಾಗಿದೆ. ಆದರೆ ಆದಾಯ ತೆರಿಗೆ ಪಾವತಿಸುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದರು. ಇಂತಹ 1.78 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ.


ಇದನ್ನೂ ಓದಿ: ಅಗ್ನಿವೀರರಿಗೆ ಗುಡ್ ನ್ಯೂಸ್: CISF ನಲ್ಲಿ ಶೇ 10% ಮೀಸಲಾತಿ ಘೋಷಣೆ


ಆದಾಯ ತೆರಿಗೆ ಪಾವತಿಸುತ್ತಿಲ್ಲವೆಂದು ಹಲವರು ಹೇಳುತ್ತಿದ್ದಾರೆ. ಇಂತಹವರಿಗೆ ಆದಾಯ ತೆರಿಗೆ ಪಾವತಿಸದ ಕುರಿತು ದೃಢೀಕರಣ ಪತ್ರ ತರಲು ಕೇಳಿದ್ದೆವು. 1.78 ಲಕ್ಷ ಮಂದಿಯ ಪೈಕಿ 6 ಸಾವಿರಕ್ಕೂ ಹೆಚ್ಚು ಮಂದಿ ಮಾತ್ರ ದೃಢೀಕರಣ ಪತ್ರ ಸಲ್ಲಿಸಿದ್ದಾರೆ. ಇವರನ್ನು ಯೋಜನೆಗೆ ಪರಿಗಣಿಸಲಾಗುವುದು. ದೃಢೀಕರಣ ಪತ್ರ ಸಲ್ಲಿಸಿದವರಿಗೆ 2 ಸಾವಿರ ರೂ. ನೀಡಲಾಗುತ್ತದೆ. ಆದರೆ ದೃಢೀಕರಣ ಪತ್ರ ಸಲ್ಲಿಸದವರಿಗೆ ಯೋಜನೆಯ ಹಣ ದೊರೆಯುವುದಿಲ್ಲ. 


ಶೀಘ್ರವೇ ಹಣ ಜಮಾ!


2023ರ ಜುಲೈ ತಿಂಗಳಲ್ಲಿ  ʼಗೃಹಲಕ್ಷ್ಮೀʼ ಯೋಜನೆಗೆ ನೋಂದಣಿ ಆರಂಭವಾಗಿತ್ತು. ನಂತರ ಆಗಸ್ಟ್‌ ತಿಂಗಳಿನಿಂದ ಖಾತೆಗೆ ಹಣ ವರ್ಗಾವಣೆ ಮಾಡಲಾಯಿತು. ಆರಂಭದಲ್ಲಿ ಈ ಯೋಜನೆಯಡಿ 1.8 ಕೋಟಿ ಫಲಾನುಭವಿಗಳಿದ್ದರು. ತೆರಿಗೆ ವ್ಯಾಪ್ತಿಗೆ ಬರುವ ಲಕ್ಷಾಂತರ ಮಂದಿ ಸಹ ಈ ಯೋಜನೆಯ ಲಾಭ ಪಡೆದಿದ್ದರು. ಈ ಪೈಕಿ 1.78 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, ಇವರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ GST, ತೆರಿಗೆ ವ್ಯಾಪ್ತಿಗೆ ಬರುವ ಅರ್ಜಿದಾರರನ್ನು ಪರಿಶೀಲಿಸಿದ ನಂತರ ಇದೀಗ ರಾಜ್ಯದಲ್ಲಿ 1.23 ಕೋಟಿ ಫಲಾನುಭವಿಗಳಿದ್ದಾರೆ. ಶೀಘ್ರವೇ ಜೂನ್‌ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ.  


ಇದನ್ನೂ ಓದಿ: ಒಂದು ವರ್ಷದಲ್ಲಿ ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆ ದ್ವಿಗುಣ! ವಿದೇಶವನ್ನೇ ಇಷ್ಟಪಡ್ತಿರೋದೇಕೆ ಭಾರತೀಯರು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.