GST Hike: Fashion ಪ್ರಿಯರಿಗೊಂದು ಕಹಿ ಸುದ್ದಿ
GST Hike: ಕೇಂದ್ರ ಸರ್ಕಾರ ಶೇ. 5 ರ GST ಸ್ಲ್ಯಾಬ್ ಅನ್ನು ತೆಗೆದು ಹಾಕಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈಗ ಕೇವಲ ಶೇ.12, ಶೇ. 18 ಮತ್ತು ಶೇ. 28ರ ದರಗಳನ್ನು ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಬಹುದು ಎಂದೂ ಕೂಡ ಹೇಳಲಾಗುತ್ತಿದೆ.
ನವದೆಹಲಿ: GST Hike - ಜವಳಿ, ಬಟ್ಟೆ ಮತ್ತು ಪಾದರಕ್ಷೆಗಳು ಇನ್ಮುಂದೆ ದುಬಾರಿಯಾಗಲಿವೆ. ಏಕೆಂದರೆ ಸರ್ಕಾರವು ಈ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 5 ರಿಂದ 12 ಕ್ಕೆ ಹೆಚ್ಚಿಸಿದೆ. ಈ ದರಗಳು ಜನವರಿ 2022 ರಿಂದ ಅನ್ವಯಿಸಲಿವೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ನವೆಂಬರ್ 18ರಂದು ಅಧಿಸೂಚನೆ ಹೊರಡಿಸುವ ಮೂಲಕ ಈ ಕುರಿತು ಮಾಹಿತಿ ನೀಡಿದೆ.
ಜವಳಿ, ಬಟ್ಟೆ ಮತ್ತು ಪಾದರಕ್ಷೆಗಳ ಮೇಲೆ 12 ಪ್ರತಿಶತ ಜಿಎಸ್‌ಟಿ
ಜನವರಿ 2022 (Budget 2022) ರಿಂದ ಜಾರಿಗೆ ಬರುವಂತೆ ಬಟ್ಟೆಯ ಮೇಲಿನ ಜಿಎಸ್‌ಟಿಯನ್ನು ಶೇಕಡಾ 5 ರಿಂದ ಶೇಕಡಾ 12 ಕ್ಕೆ ಹೆಚ್ಚಿಸಲಾಗಿದೆ. ಈಗ ಯಾವುದೇ ಬೆಲೆಯ ಬಟ್ಟೆಯ ಮೇಲೆ ಶೇಕಡಾ 12 ಜಿಎಸ್‌ಟಿ ವಿಧಿಸಲಾಗುತ್ತದೆ. ಈ ಹಿಂದೆ 1000 ರೂ.ವರೆಗಿನ ಬಟ್ಟೆಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ಅನ್ವಯವಾಗುತ್ತಿತ್ತು. ಇನ್ಮುಂದೆ ನೇಯ್ದ ಬಟ್ಟೆಗಳು, ಸಿಂಥೆಟಿಕ್ ದಾರಗಳು, ಥಾನಸ್, ಬ್ಲಾಂಕೆಟ್‌ಗಳು, ಟೆಂಟ್‌ಗಳು, ಟೇಬಲ್ ಕ್ಲಾತ್‌ಗಳು, ರಗ್‌ಗಳು ಸೇರಿದಂತೆ ಹಲವು ರೀತಿಯ ಬಟ್ಟೆಗಳ ಮೇಲೆ ಜಿಎಸ್‌ಟಿಯನ್ನು ಶೇ.5 ರಿಂದ ಶೇ. 12 ಕ್ಕೆ ಹೆಚ್ಚಿಸಲಾಗಿದೆ. ಪಾದರಕ್ಷೆಗಳ ಮೇಲೆ ಶೇ 12ರಷ್ಟು ಜಿಎಸ್‌ಟಿಯೂ ಬೀಳಲಿದೆ.
ಅನೇಕ ಸಾಮಾನ್ಯ ಬಳಕೆಯ ವಸ್ತುಗಳನ್ನು ಸಹ GST ಯಿಂದ ವಿನಾಯಿತಿ ನೀಡಲಾಗಿದೆ. 150 ಸರಕುಗಳು ಮತ್ತು 80 ಕ್ಕೂ ಹೆಚ್ಚು ಸೇವೆಗಳಿಗೆ ಜಿಎಸ್‌ಟಿ ವ್ಯಾಪ್ತಿಯ ಹೊರಗಿಡಲಾಗಿದೆ. ಕಳೆದ ಹಲವು ತಿಂಗಳುಗಳಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಉತ್ತೇಜಕ ಪ್ರವೃತ್ತಿ ಕಂಡುಬಂದಿದೆ ಎಂದು ತೆರಿಗೆ ತಜ್ಞರು ಹೇಳಿದ್ದಾರೆ. ಆದ್ದರಿಂದ ಸ್ಲ್ಯಾಬ್‌ನಲ್ಲಿ ಕೆಲವು ಸುಧಾರಣೆಗಳು ಕಂಡುಬರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-SBI Alert : ತಪ್ಪಿ ನೀವೇನಾದರೂ ಮಾಡಿಬಿಟ್ಟರೆ ಈ ಕೆಲಸ, ಖಾಲಿಯಾಗಿ ಬಿಡುತ್ತದೆ ನಿಮ್ಮ ಅಕೌಂಟ್
ನಾಲ್ಕು GST ದರಗಳ ಬದಲಿಗೆ ಮೂರು ದರಗಳು?
ಶೇ. 5 ರ ತೆರಿಗೆ ಸ್ಲ್ಯಾಬ್ (GST Slab) ಅನ್ನು ಸರ್ಕಾರ ತೆಗೆದುಹಾಕಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಇನ್ಮುಂದೆ ಕೇವಲ ಶೇ. 12, ಶೇ. 18 ಮತ್ತು ಶೇ. 28 ರ ದರಗಳನ್ನು ಇರಿಸಿಕೊಳ್ಳಲು ಸರ್ಕಾರ ನಿರ್ಧರಿಸಬಹುದು. ಶೇ. 5 ಮತ್ತು ಶೇ.12 ರ ಸ್ಲ್ಯಾಬ್‌ಗಳನ್ನು ಒಟ್ಟುಗೂಡಿಸಿ, ಈಗ ಕೇವಲ 12 ಶೇಕಡಾ ಸ್ಲ್ಯಾಬ್ ಅನ್ನು ಉಳಿಸಿಕೊಳ್ಳಲಾಗುವುದು. ಕರ್ನಾಟಕದ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಚಿವರ ಗುಂಪು (GoM) ಶೀಘ್ರದಲ್ಲೇ ಸಭೆ ಸೇರುವ ಸಾಧ್ಯತೆಯಿದೆ, ಇದರಲ್ಲಿ GST ಕೌನ್ಸಿಲ್‌ನ (GST Council) ಶಿಫಾರಸುಗಳನ್ನು ಪರಿಗಣಿಸಿ ಅಂತಿಮಗೊಳಿಸಬಹುದು.
ಕಳೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ಆದಾಯದ ವಿವಿಧ ಅಂಶಗಳ ಕುರಿತು ಪ್ರಸ್ತುತಿಯನ್ನು ನೀಡಲಾಗಿದೆ. ಆದರೆ, ಇದರಲ್ಲಿ ರಾಜ್ಯಗಳ ಪರಿಹಾರವನ್ನು ಕೊನೆಗೊಳಿಸುವ ಅಂಶವನ್ನು ಪರಿಗಣಿಸಲಾಗಿಲ್ಲ. ಜುಲೈ 2022 ರಲ್ಲಿ, ರಾಜ್ಯಗಳಿಗೆ ಪರಿಹಾರ ನೀಡುವ ನಿಯಮವು ಮುಕ್ತಾಯಗೊಳ್ಳಲಿದೆ. ಇದರ ನಂತರ, ಈ ಬಗ್ಗೆ ಹೇಗೆ ಮುಂದುವರಿಯಬೇಕು ಎಂಬುದನ್ನು ರಾಜ್ಯಗಳು ನಿರ್ಧರಿಸಬೇಕು.
ಇದನ್ನೂ ಓದಿ-Indian Railways: ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲುಗಳಲ್ಲಿ ಮತ್ತೆ ಆರಂಭವಾಗಲಿದೆ ಈ ಅಗತ್ಯ ಸೇವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ