ನವದೆಹಲಿ: GST Council Meeting 2021 - ಕೊರೊನಾವೈರಸ್ನ (Coronavirus) ಎರಡನೇ ಅಲೆಯ ನಡುವೆ ಸುಮಾರು ಏಳು ತಿಂಗಳ ಬಳಿಕ ಜಿಎಸ್ಟಿ ಕೌನ್ಸಿಲ್ನ (GST Council Meet) ಈ ವರ್ಷದ ಮೊದಲ ಸಭೆ ಇಂದು ಮುಕ್ತಾಯಗೊಂಡಿದೆ. ಈ 43 ನೇ GST ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman) ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ಸಭೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ಚರ್ಚಿಸಲಾಗಿದ್ದು, ಅದರಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಈ ಸಭೆಯಲ್ಲಿ (GST Meet) ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.
1. ಆಗಸ್ಟ್ 31ರವರೆಗೆ ಆಮದು ಮಾಡಿಕೊಳ್ಳಲಾಗುವ ಪರಿಹಾರ ಸಾಮಗ್ರಿಗಳಿಗೆ ವಿನಾಯ್ತಿ - ಕೊವಿಡ್ ಗೆ ಸಂಬಂಧಿಸಿದ ಪರಿಹಾರ ಸಾಮಗ್ರಿಗಳ ಆಮದಿನ ಮೇಲೆ ವಿನಾಯ್ತಿ ನೀಡಲು (GST Council Meeting Today) ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಂದರೆ, ಆಗಸ್ಟ್ 31, 2021 ರವರೆಗೆ ಕೊವಿಡ್-19 ಗೆ ಸಂಬಂಧಿಸಿದಂತೆ ಅಮದು ಮಾಡಿಕೊಳ್ಳಲಾಗುವ ಪರಿಹಾರ ಸಾಮಗ್ರಿಗಳು IGST ಮುಕ್ತವಾಗಿರಲಿವೆ. ಇದುವರೆಗೆ ಉಚಿತವಾಗಿ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಮೇಲೆ IGST ವಿನಾಯ್ತಿ ಸಿಗುತ್ತಿತ್ತು.
2. Amphotericin B ಕೂಡ IGST ವಿನಾಯ್ತಿಯ ಪಡೆಯಲಿದೆ - ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಇದರ ಚಿಕಿತ್ಸೆಗೆ ಬಳಸಲಾಗುವ ಔಷಧಿ Amphotericin Bಯನ್ನು ಕೂಡ IGST ವಿನಾಯಿತಿ ಪಟ್ಟಿಗೆ ಸೇರಿಸಲಾಗಿದೆ.
3. GST ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ 1.58 ಲಕ್ಷ ಕೋಟಿ ರೂ. ಸಿಗಲಿದೆ - ಜಿಎಸ್‌ಟಿ ಪರಿಹಾರವಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ 1.58 ಲಕ್ಷ ಕೋಟಿ ರೂ.ಗಳನ್ನು ನೀಡಲಿದೆ ಎಂದು ಹಣಕಾಸು ಸಚಿವರು (Finance Minister) ಘೋಷಿಸಿದ್ದಾರೆ.
4. ಮೆಡಿಕಲ್ ಉಪಕರಣಗಳ ಮೇಲೆ GST ರೇಟ್ ಕಟ್ ಮೇಲೆ ಜೂನ್ 8 ರವರೆಗೆ ನಿರ್ಧಾರ ಹೊರಬೀಳಲಿದೆ - ಕೋವಿಡ್ ಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳ ಮೇಲಿನ ಜಿಎಸ್ಟಿ ದರ ಕಡಿತದ (GST Rate Cut) ಬಗ್ಗೆ ಚರ್ಚೆ ನಡೆಸಲಾಗಿದೆ ಮತ್ತು ಫಿಟ್ಮೆಂಟ್ ಪ್ಯಾನೆಲ್ನ ಶಿಫಾರಸುಗಳನ್ನು ಕೌನ್ಸಿಲ್ ಮುಂದೆ ಇಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಂತ್ರಿಗಳ ಗುಂಪು (GoM) ಇವುಗಳ ಕುರಿತು ಚರ್ಚೆ ನಡೆಸಿ ಜೂನ್ 8 ರವರೆಗೆ ತನ್ನ ವರದಿ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-RBI News - ಬ್ಯಾಂಕ್ ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಶೀಘ್ರವೇ ನಿಮ್ಮ ಹಣದ ಸುರಕ್ಷತೆಗೆ ಜಾರಿಯಾಗಲಿದೆ ಈ ಸಿಸ್ಟಂ
5. ಅಕ್ಚುವಲ್ ರಿಟರ್ನ್ ಫೈಲಿಂಗ್ ಆಪ್ಷನಲ್ ಆಗಿರಲಿದೆ - 2020-21ರ ಆರ್ಥಿಕ ವರ್ಷಕ್ಕೆ ವಾರ್ಷಿಕ ರಿಟರ್ನ್ ಫೈಲಿಂಗ್ ಐಚ್ಛಿಕವಾಗಿರಲಿದೆ ಎಂದು ನಿರ್ಮಲಾ ಹೇಳಿದ್ದಾರೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಟರ್ನ್ಓವರ್ ಹೊಂದಿರುವ ಸಣ್ಣ ತೆರಿಗೆದಾರರಿಗೆ ಇದು ಐಚ್ಛಿಕವಾಗಿರುತ್ತದೆ. 2020-21ರ ಮರು ಲೆಕ್ಕಾಚಾರದ ಹೇಳಿಕೆ ಕೂಡ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ತೆರಿಗೆದಾರರಿಗೆ ಮಾತ್ರ ನೀಡಬೇಕು ಎಂದು ಅವರು ಹೇಳಿದ್ದಾರೆ.
6. GST ತೆರಿಗೆ ಪಾವತಿದಾರರಿಗೆ ತಡವಾಗಿ ಶುಲ್ಕ ಪಾವತಿಸುವುದರ ಮೇಲೆ ಸಿಗುವ ನೆಮ್ಮದಿ ಮುಂದುವರೆಯಲಿದೆ - ಇಂದು ತೆಗೆದುಕೊಳ್ಳಲಾಗಿರುವ ಅತಿದೊಡ್ಡ ನಿರ್ಧಾರ, ಸಣ್ಣ ತೆರಿಗೆ ಪಾವತಿದಾರರ ಹೊರೆಯನ್ನು ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ತೆರಿಗೆ ಪಾವತಿದಾರರಿಗೆ ಪರಿಹಾರ ಒದಗಿಸಲು ನಡೆಯುತ್ತಿರುವ ಅಮ್ನೆಸ್ಟಿ ಯೋಜನೆ (Amnesty Scheme) ಮುಂದುವರೆಯಲಿದೆ. ಇದರಿಂದಾಗಿ ತಡವಾದ ಶುಲ್ಕ ಪಾವತಿಯ ಮೇಲೂ ಕೂಡ ನೆಮ್ಮದಿ ಸಿಗಲಿದೆ. ಇದು ಸುಮಾರು 89% ಜಿಎಸ್ಟಿ ತೆರಿಗೆದಾರರಿಗೆ ಪರಿಹಾರ ನೀಡಲಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ- Bank, Post Office ಗ್ರಾಹಕರಿಗೆ ಸಿಹಿ ಸುದ್ದಿ: ಇನ್ಮುಂದೆ ಆಧಾರ್ ಕಾರ್ಡ್ ಬಳಸಿ ನಿಮ್ಮ ಮನೆ ಬಾಗಿಲಲ್ಲೇ ಹಣ ಹಿಂಪಡೆಯಬಹುದು!
ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, ಕೋವಿಡ್ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲಿನ ಜಿಎಸ್ಟಿ ದರವನ್ನು ಕಡಿಮೆ ಮಾಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಮ್ಮತ ಮೋಡಿ ಬಂದಿಲ್ಲ ಎನ್ನಲಾಗಿದೆ. ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ನಾವು ಕರೋನಾ ಲಸಿಕೆ, ಆಮ್ಲಜನಕ ಸಿಲಿಂಡರ್ ಸಾಂದ್ರಕ, ಆಕ್ಸಿಮೀಟರ್, ಪಿಪಿಇ ಕಿಟ್, ಸ್ಯಾನಿಟೈಜರ್, ಮಾಸ್ಕ್, ಟೆಸ್ಟಿಂಗ್ ಕಿಟ್ ಇತ್ಯಾದಿಗಳನ್ನು GST ತೆರಿಗೆ ಮುಕ್ತಗೊಳಿಸಲು ಪ್ರಸ್ತಾಪಿಸಿದ್ದೇವೆ ಎಂದು ದೆಹಲಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.