ಬೆಂಗಳೂರು: ಬೆಲೆ ಏರಿಕೆ ಸಂಕಷ್ಟದ ಸುಳಿಗೆ ಸಿಲುಕಿರೋ ಜನರಿಗೆ ನಾಳೆಯಿಂದ ಗಾಯದ ಮೇಲೆ ಬರೆ ಬೀಳಲಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ನೀತಿ ಬದಲಾವಣೆ ತಂದಿದ್ದು ಆಹಾರ ವಸ್ತು ಸೇರಿ ಹಲವು ದಿನಬಳಕೆ ವಸ್ತುಗಳ ಮೇಲೆ ತೆರಿಗೆ ಬರೆ ಬೀಳಲಿದೆ. ಈಗಾಗಲೇ ಕಂಗೆಟ್ಟಿರೋ ಜನರ ಜೇಬಿಗೆ ನಾಳೆಯಿಂದ ಮತ್ತಷ್ಟು ಕತ್ತರಿ ಬೀಳಲಿದೆ.


COMMERCIAL BREAK
SCROLL TO CONTINUE READING

ಪೆಟ್ರೋಲ್, ಅಡುಗೆಎಣ್ಣೆ, ಹಾಲು, ಹಣ್ಣು, ಹೂವು, ತರಕಾರಿ ಎಲ್ಲವೂ ತುಟ್ಟಿಯಾಗಲಿವೆ. ಕೇಂದ್ರ ಸರ್ಕಾರ ಜನರ ಮೇಲೆ ಕರಭಾರ ಹೊರಿಸಲು ಹೊರಟಿದೆ. ನಾಳೆಯಿಂದಲೇ ನೂತನ ಜಿಎಸ್‌ಟಿ ದರ ಜಾರಿಗೆ ಬರಲಿದ್ದು, ಅಗತ್ಯ ವಸ್ತುಗಳ ಬೆಲೆಯಲ್ಲಿ ಅಜಗಜಾಂತರ ವ್ಯತ್ಯಾಸವಾಗಲಿದೆ. ಹೊಸ ಜಿಎಸ್‌ಟಿ ನೂರಕ್ಕೆ ನೂರರಷ್ಟು ಜನರ ಜೇಬು ಸುಡಲಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗ್ತಿರೋದು ಜನಜೀವನವನ್ನ ಬುಡಮೇಲು ಮಾಡುವ ಆತಂಕ ಶುರುವಾಗಿದೆ.


ಯಾವುದಕ್ಕೆಲ್ಲಾ GST? ಏನೆಲ್ಲಾ ದುಬಾರಿ? 


  • ಪ್ಯಾಕ್ ಮಾಡಿರುವ ಬ್ರ್ಯಾಂಡ್ ಆಹಾರ ಪದಾರ್ಥಗಳು - 5% GST

  • ಮೊಸರು, ಲಸ್ಸಿ, ಬೆಣ್ಣೆ, ಹಪ್ಪಳ, ಜೇನುತುಪ್ಪ , ಉಪ್ಪಿನಕಾಯಿ - 5% GST

  • ಪನ್ನೀರ್, ಒಣಕಾಳು, ತರಕಾರಿ, ಮಾಂಸ, ಮೀನು - 5% GST

  • ಭೂಪಟ ಮತ್ತು ಅಟ್ಲಾಸ್ - 12% GST


ಇದನ್ನೂ ಓದಿ: ಗುರಾಯಿಸಿದ್ದಕ್ಕೆ‌ ರೌಡಿಗಳ‌‌ ನಡುವೆ ಮಾರಾಮಾರಿ: ಎಣ್ಣೆ ಬಾಟಲ್‌ನಲ್ಲಿ ಬಡಿದಾಟ


  • ಚೆಕ್ ಬುಕ್, ಆರ್‌ಬಿಐ, ಐಆರ್‌ಡಿಐ, ಸೆಬಿ ಸೇವೆಗಳು - 18% GST

  • ಸೋಲಾರ್ ವಾಟರ್ ಹೀಟರ್, ಲೆದರ್ ಸಾಮಗ್ರಿ  - 5% to 12% GST

  • ಚಾಕು, ಬ್ಲೇಡ್, ಚಮಚ, ಫೋರ್ಕ್ - 12% to 18% GST

  • ಪೆಟ್ರೋಲಿಯಂ, ಕಲ್ಲಿದ್ದಲು, ವೈಜ್ಞಾನಿಕ ಯಂತ್ರಗಳು - 12% to 18% GST

  • ಇಂಕ್, ಮೆಂಡರ್, ಬ್ಲೇಡ್, ಸೌಟು, ಜಾಲರಿ ಸೌಟು, - 12% to 18% GST

  • ವಿದ್ಯುತ್ ಚಾಲಿತ ವಾಟರ್ ಪಂಪ್, ಬೈಸಿಕಲ್ ಪಂಪ್ - 12% to 18% GST

  • ಟರ್ಬೈನ್ ಪಂಪ್, ಸಬ್ಮರ್ಸಿಬಲ್ ಪಂಪ್ - 12% to 18% GST

  • ಡೈರಿ ಉದ್ಯಮದ ಯಂತ್ರಗಳು, ರುಬ್ಬುವ ಯಂತ್ರ - 12% to 18% GST

  • ಧಾನ್ಯ ವಿಂಗಡಿಸುವ ಗ್ರೇಡಿಂಗ್ ಯಂತ್ರ - 12% to 18% GST

  • ₹1000 ಗಿಂತ ಕಡಿಮೆ ಇರೋ ಹೋಟೆಲ್ ರೂಂ - 0 to 12% GST

  • ₹5000 ಹೆಚ್ಚು ಶುಲ್ಕ ಇರೋ ಆಸ್ಪತ್ರೆಯ ಸ್ಪೆಷಲ್ ವಾರ್ಡ್ - 0 to 5% GST


ನ್ಯೂ ತರಗು ಪೇಟೆ ಮತ್ತು ಎಪಿಎಂಸಿ ಮಾರ್ಕೆಟ್ ನ ಹಳೆಯ ದರ ಮತ್ತು ನಾಳೆಯಿಂದ ಬದಲಾಗುವ ದರದ ಮಾಹಿತಿ:


  • ಅಕ್ಕಿ: 1 ಕೆಜಿ ಗೆ- 50 ರೂಪಾಯಿ 10 ಕೆಜಿಗೆ- 500  ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ - 10 ಕೆಜಿಗೆ- 525  ರೂಪಾಯಿ 

  • ಹೆಸರು ಬೆಳೆ- 1 ಕೆಜಿಗೆ- 110  ರೂಪಾಯಿ 10 ಕೆಜಿಗೆ- 1100  ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 1155  ರೂಪಾಯಿ

  • ತೊಗರಿಬೆಳೆ- ಕೆಜಿಗೆ- 100  ರೂಪಾಯಿ ಹತ್ತು ಕೆಜಿಗೆ- 1000  ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 1050  ರೂಪಾಯಿ

  • ಉದ್ದಿನಬೆಳೆ ಕೆಜಿಗೆ- 120  ರೂಪಾಯಿ ಹತ್ತು ಕೆಜಿಗೆ- 1200  ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 1260  ರೂಪಾಯಿ

  • ಹೆಸರು ಕಾಲು ಕೆಜಿಗೆ- 100  ರೂಪಾಯಿ ಹತ್ತು ಕೆಜಿಗೆ- 1000  ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 1050 ರೂಪಾಯಿ

  •  ಕಡಲೆ ಬೇಳೆ ಕೆಜಿಗೆ- 75 ರೂಪಾಯಿ ಹತ್ತು ಕೆಜಿಗೆ- 750 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 787 ರೂಪಾಯಿ

  • ಕಡಲೆಕಾಳು ಕೆಜಿಗೆ- 65 ರೂಪಾಯಿ ಹತ್ತು ಕೆಜಿಗೆ- 650 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 682 ರೂಪಾಯಿ

  • ಹುರಿಕಡಲೆ ಕೆಜಿಗೆ- 80 ರೂಪಾಯಿ ಹತ್ತು ಕೆಜಿಗೆ- 800 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ-840 ರೂಪಾಯಿ

  • ಉದ್ದಿನ ಕಾಲು- 110 ರೂಪಾಯಿ ಹತ್ತು ಕೆಜಿಗೆ- 1100 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ-  1155 ರೂಪಾಯಿ

  • ಹಲಸಂದೆ ಕಾಲು ಕೆಜಿಗೆ- 90 ರೂಪಾಯಿ ಹತ್ತು ಕೆಜಿಗೆ- 900 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 945 ರೂಪಾಯಿ

  • ಕಾಬೂಲ್ ಕಡಲೆ ಕೆಜಿಗೆ- 120 ರೂಪಾಯಿ ಹತ್ತು ಕೆಜಿಗೆ- 1200 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 1260 ರೂಪಾಯಿ

  • ಬಟಾಣಿ ಕೆಜಿಗೆ- 85 ರೂಪಾಯಿ ಹತ್ತು ಕೆಜಿಗೆ- 850 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 892 ರೂಪಾಯಿ

  • ಬೆಲ್ಲ ಕೆಜಿಗೆ- 60 ರೂಪಾಯಿ ಹತ್ತು ಕೆಜಿಗೆ- 600 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ- 630 ರೂಪಾಯಿ

  • ಗೋದಿ ಹಿಟ್ಟು ಕೆಜಿಗೆ- 45 ರೂಪಾಯಿ ಹತ್ತು ಕೆಜಿಗೆ-450 ರೂಪಾಯಿ ಜಿಎಸ್‌ಟಿ ಸೇರಿಸಿದ್ರೆ-472 ರೂಪಾಯಿ


KMF ಹಾಲಿನ ಉತ್ಪನ್ನಗಳಲ್ಲಿ ದರ ವ್ಯತ್ಯಾಸ: 


ಇನ್ನು ಕೆಎಂಎಫ್ ಹಾಲಿನ ದರದಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ ಮೊಸರು ಹಾಗೂ ಅದರ ಇತರ ಉತ್ಪನ್ನಗಳ ಬೆಲೆಯಲ್ಲಿ ಕೊಂಚ ವ್ಯತ್ಯಾತಸವಾಗಲಿದೆ. ಪ್ಯಾಕೆಟ್ ಮೇಲೆ ಹಳೆ ದರವೇ ಇರಲಿದೆ ಆದ್ರೆ ಗ್ರಾಹಕರು ಹೊಸ ದರವನ್ನ ನೀಡುವಂತೆ KMF ಸೂಚನೆ ನೀಡಿದೆ.


ಜು.18ರಿಂದ ನಂದಿನಿ ಉತ್ಪನ್ನಗಳಿಗೆ ಹೊಸ ದರ:


ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ 5%ರಷ್ಟು ಜಿಎಸ್‌ಟಿ ಹೆಚ್ಚಳವಾಗಲಿದ್ದು, ಮೊಸರು 1 ಲೀಟರ್‌ಗೆ 43 ರೂ. ಇದ್ದದ್ದು ನಾಳೆಯಿಂದ 46 ರೂ. ಆಗಲಿದೆ. ಅರ್ಧ ಲೀಟರ್ ಮೊಸರು 22 ರೂ. ನಿಂದ 24 ರೂ. ಗೆ ಏರಿಕೆಯಾಗಲಿದೆ. ಮಜ್ಜಿಗೆ 200ML ಬೆಲೆ ಮೇಲೆ 1 ರೂ ಏರಿಕೆಯಾಗಲಿದೆ. ಲಸ್ಸಿ ಬೆಲೆಯಲ್ಲೂ ನಾಳೆಯಿಂದ 1ರೂ ಏರಿಕೆಯಾಗಲಿದೆ.


ಇದನ್ನೂ ಓದಿ: Viral Video: ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು.. ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ


ಒಟ್ಟಾರೆ ಜಿಎಸ್‌ಟಿ ದರ ಏರಿಕೆ ಜನರನ್ನ ಕಂಗಾಲಾಗಿಸಿದೆ. ಜಿಎಸ್‌ಟಿಯಿಂದಾಗಿ ಹೋಟೆಲ್ ಉದ್ಯಮದವರೂ ಕಂಗಾಲಾಗಿದ್ದಾರೆ. ಇನ್ನೊಂದೆಡೆ ಆಹಾರ ವಸ್ತುಗಳ ಮಾರಾಟಗಾರರೂ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಬರಗಾಲದಲ್ಲೇ ಅಧಿಕಮಾಸ ಅನ್ನೋ ಗಾದೆ ಈಗ ಅಕ್ಷರಶಃ ಸತ್ಯವಾಗ್ತಿದೆ. ಈಗಾಗಲೇ ಹಣದುಬ್ಬರದಿಂದಾಗಿ ಬೆಲೆ ಏರಿಕೆ ಆಕಾಶಕ್ಕೆ ಮುಟ್ಟಿದೆ. ಇಂಥಾ ಸಂದರ್ಭದಲ್ಲಿ ಮತ್ತೆ ಗಾಯದ ಮೇಲೆ ಕೇಂದ್ರ ಬರೆ ಎಳೆಯುತ್ತಿರೋದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದ್ದಂತೂ ಸುಳ್ಳಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.