Viral Video: ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು.. ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ

Viral Video: ಹಸಿರು ಅನಕೊಂಡ ವಿಶ್ವದ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ಇದು ದಕ್ಷಿಣ ಅಮೆರಿಕದ ಉತ್ತರ ಪ್ರದೇಶಗಳಿಗೆ ಸ್ಥಳೀಯವಾದ ಬೋವಾ ಜಾತಿಯ ಹಾವಾಗಿದೆ. ಹಸಿರು ಅನಕೊಂಡವು ಅತ್ಯಂತ ಭಾರವಾದ ಮತ್ತು ಸುದೀರ್ಘವಾದ ಅಸ್ತಿತ್ವದಲ್ಲಿರುವ ಹಾವಿನ ಜಾತಿಗಳಲ್ಲಿ ಒಂದಾಗಿದೆ. 

Written by - Chetana Devarmani | Last Updated : Jul 17, 2022, 04:49 PM IST
  • ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು
  • ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ
Viral Video: ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು.. ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ  title=
ಮೊಸಳೆ

Viral Video: ಹಸಿರು ಅನಕೊಂಡ ವಿಶ್ವದ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ಇದು ದಕ್ಷಿಣ ಅಮೆರಿಕದ ಉತ್ತರ ಪ್ರದೇಶಗಳಿಗೆ ಸ್ಥಳೀಯವಾದ ಬೋವಾ ಜಾತಿಯ ಹಾವಾಗಿದೆ. ಹಸಿರು ಅನಕೊಂಡವು ಅತ್ಯಂತ ಭಾರವಾದ ಮತ್ತು ಸುದೀರ್ಘವಾದ ಅಸ್ತಿತ್ವದಲ್ಲಿರುವ ಹಾವಿನ ಜಾತಿಗಳಲ್ಲಿ ಒಂದಾಗಿದೆ. 30 ಅಡಿ ಉದ್ದ, 250 ಕಿಲೋಗ್ರಾಂಗಳಷ್ಟು ತೂಕ ಹೊಂದಬಲ್ಲದು. ಅಲ್ಲದೇ ಇದು ಅತ್ಯಂತ ವಿಷಕಾರಿ ಹಾವಾಗಿದೆ. 

ಇದನ್ನೂ ಓದಿ: Vikrant Rona Making: ಕಿಚ್ಚ ಸುದೀಪ ಅಭಿನಯದ 'ವಿಕ್ರಾಂತ್ ರೋಣ' ಮೇಕಿಂಗ್ ವಿಡಿಯೋ ಹೈಲೈಟ್ಸ್

ಹಸಿರು ಅನಕೊಂಡಗಳು ಸಾಮಾನ್ಯವಾಗಿ ನೀರಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಸಣ್ಣ ಅನಕೊಂಡಗಳು ಸಾಮಾನ್ಯವಾಗಿ ಸಣ್ಣ ಸಸ್ತನಿಗಳು, ಪಕ್ಷಿಗಳು, ಮೀನುಗಳು, ಇತ್ಯಾದಿಗಳನ್ನು ಬೇಟೆಯಾಡುತ್ತವೆ. ಆದಾಗ್ಯೂ, ವಯಸ್ಕ ಅನಕೊಂಡಗಳು ಹೆಚ್ಚು ದೊಡ್ಡ ಪ್ರಾಣಿಗಳನ್ನು ತಿನ್ನಲು ಸಮರ್ಥವಾಗಿವೆ. ಮೊಸಳೆಗಳು ದೊಡ್ಡ ನೀರಿನ ಪರಭಕ್ಷಕಗಳಾಗಿವೆ ಮತ್ತು ಸಾಮಾನ್ಯವಾಗಿ ಕಾದಾಟದಲ್ಲಿ ಹಾವುಗಳನ್ನು ಸೋಲಿಸುತ್ತವೆ. ಈ ಬೃಹತ್ ಹಸಿರು ಅನಕೊಂಡದ ಮುಂದೆ ಈ ಮೊಸಳೆ ಸಾಟಿಯಾಗಿರಲಿಲ್ಲ. 

 

 

ವೈರಲ್ ಆಗುತ್ತಿರುವ ವಿಡಿಯೋವನ್ನು Instagram ನಲ್ಲಿ 'africanwildlife1' ಪುಟವು ಹಂಚಿಕೊಂಡಿದೆ. ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಸ್‌ನ್ನು ವಿಡಿಯೋ ಸ್ವೀಕರಿಸಿದೆ. ಇದು ದೈತ್ಯ ಅನಕೊಂಡ ಒಂದು ನೀರಿನಲ್ಲಿ ಮೊಸಳೆಯ ಸಂಪೂರ್ಣ ದೇಹದ ಸುತ್ತಲೂ ಬಿಗಿಯಾಗಿ ಸುತ್ತಿರುವುದನ್ನು ತೋರಿಸುತ್ತದೆ. ಮೊಸಳೆಯು ಉಸಿರಾಡಲು ಸಾಧ್ಯವಾಗದೇ, ಸತ್ತೇ ಹೋಗುತ್ತದೆ. ಈ ಎರಡು ಪರಭಕ್ಷಕಗಳ ನಡುವಿನ ತೀವ್ರ ಕಾದಾಟವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೆಟಿಜನ್‌ಗಳನ್ನು ಆಕರ್ಷಿಸುತ್ತಿದೆ. 

ಇದನ್ನೂ ಓದಿ: Dangerous Snakes: ಇವು ವಿಶ್ವದ ಅತ್ಯಂತ ವಿಷಕಾರಿ ಹಾವುಗಳು, ಕೆಲವೇ ಸೆಕೆಂಡುಗಳಲ್ಲಿ ಜೀವ ತೆಗೆಯುತ್ತವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News