ನವದೆಹಲಿ : ಏಪ್ರಿಲ್ 2019 ಕ್ಕಿಂತ ಮೊದಲು ಖರೀದಿಸಿದ ಕಾರು ಮತ್ತು ಬೈಕ್‌ಗಳಿಗೆ ಸೆಪ್ಟೆಂಬರ್ 30ಕ್ಕಿಂತ ಮುನ್ನ ಹೈ ಸೆಕ್ಯುರಿಟಿ ಲೈಸೆನ್ಸ್ ಪ್ಲೇಟ್‌ಗಳನ್ನು (high security number plate) ಹಾಕುವುದು ಕಡ್ಡಾಯವಾಗಿದೆ. ಒಂದು ವೇಳೆ ಇದು ಆಗದಿದ್ದರೆ, ಭಾರೀ ದಂಡವನ್ನು ಪಾವತಿಸಬೇಕಾಗಬಹುದು. ಈ ಹಿಂದೆ ಹಲವು ರಾಜ್ಯಗಳಲ್ಲಿ ಇದರ ಗಡುವನ್ನು  ಏಪ್ರಿಲ್ 15 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಕರೋನಾದ (Coronavirus) ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮತ್ತೆ ಸೆಪ್ಟೆಂಬರ್ 30 ರವರೆಗೆ  ವಿಸ್ತರಿಸಲಾಯಿತು. 


COMMERCIAL BREAK
SCROLL TO CONTINUE READING

ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್ ಎಂದರೇನು?
ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್  (high security number plate)  ಹೊಲೊಗ್ರಾಮ್ ಸ್ಟಿಕ್ಕರ್ ಆಗಿದೆ. ಇದು ವಾಹನದ ಎಂಜಿನ್ ಮತ್ತು ಚಾಸಿಸ್ ಸಂಖ್ಯೆಯನ್ನು ಒಳಗೊಂಡಿದೆ. ಈ ಸಂಖ್ಯೆಯನ್ನು ಕೈಯಿಂದ ಬರೆಯಲಾಗುವುದಿಲ್ಲ. ಇದನ್ನು ಬಲ್ಕಿ ಪ್ರೆಶರ್ ಮೆಷಿನ್ ಸಹಾಯದಿಂದ  ಬರೆಯಲಾಗುತ್ತದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ಇದನ್ನು ಅಗತ್ಯವಾಗಿ ಹಾಕಿಸಿಕೊಳ್ಳಲೇ ಬೇಕು. 


ಇದನ್ನೂ ಓದಿ : Relief To Telecom Sector: Telecom ಕ್ಷೇತ್ರದಲ್ಲಿ ಶೇ.100 ರಷ್ಟು FDIಗೆ ಅನುಮೋದನೆ ನೀಡಿದ Modi Cabinet


ಎಚ್‌ಎಸ್‌ಆರ್‌ಪಿಯ ಪ್ರಯೋಜನಗಳೇನು?
-ದೇಶಾದ್ಯಂತ ಎಲ್ಲಾ ವಾಹನಗಳ ನಂಬರ್ ಪ್ಲೇಟ್‌ಗಳು ಒಂದೇ ರೀತಿ ಆಗಿರುತ್ತವೆ.
-ನಂಬರ್ ಪ್ಲೇಟ್ ನಲ್ಲಿ (Number plate) ಯಾರಿಗೂ ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ.
-ವಾಹನಗಳ ದುರುಪಯೋಗ ಮತ್ತು ಕಳ್ಳತನ, ನಂಬರ್ ಪ್ಲೇಟ್‌  ಅವ್ಯವಹಾರವನ್ನು ತಡೆಯಬಹುದು.
-ಇದು ರಸ್ತೆ ಸಂಬಂಧಿತ ಅಪರಾಧಗಳ ವಿಚಾರದಲ್ಲಿ ಕಾನೂನನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ಸಹಾಯವಾಗಲಿದೆ. 
-ಎಚ್‌ಎಸ್‌ಆರ್‌ಪಿ (HSRP) ಮೂಲಕ ಅಕ್ರಮ ನಂಬರ್ ಪ್ಲೇಟ್‌ಗಳ ಮಾರಾಟಗಳ ಮೇಲೆ ಕಡಿವಾಣ ಹಾಕಬಹುದು.  
-ಪೊಲೀಸರು ನಿಮ್ಮ ವಾಹನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಂಬರ್ ಪ್ಲೇಟ್ ಮೂಲಕ  ಪಡೆಯುತ್ತಾರೆ.
-ಡೇಟಾವನ್ನು ಡಿಜಿಟಲೀಕರಣಗೊಳಿಸಲಾಗುವುದು


ಇದನ್ನೂ  ಓದಿ : ಅಕ್ಟೋಬರ್ 1 ರಿಂದ ಪ್ರಯೋಜನಕ್ಕಿಲ್ಲ ಹಳೆಯ ಚೆಕ್ ಬುಕ್ , ಈ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ


HSRP ನಂಬರ್ ಪ್ಲೇಟ್ ಬುಕ್ ಮಾಡುವುದು ಹೇಗೆ ? :
ನಿಮ್ಮ ಮನೆಯಿಂದಲೇ ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್ ಅನ್ನು ಬುಕ್ ಮಾಡಬಹುದು. 
1. ಮೊದಲಿಗೆ www.bookmyhsrp.com ಗೆ ಹೋಗಿ. 
2. ಇಲ್ಲಿ ದ್ವಿಚಕ್ರ ವಾಹನ, ಮೂರು ಚಕ್ರ, ನಾಲ್ಕು ಚಕ್ರ, ಭಾರೀ ವಾಹನಗಳ ಆಯ್ಕೆಗಳು ಲಭ್ಯವಿರುತ್ತವೆ. ನಿಮ್ಮ ವಾಹನದ ಪ್ರಕಾರ ಅದನ್ನು ಆಯ್ಕೆ ಮಾಡಿ. 
3. ಇದರ ನಂತರ ವಾಹನದ ಕಂಪನಿಯನ್ನು ಆಯ್ಕೆ ಮಾಡಿ. 
4. ಕಂಪನಿಯನ್ನು ಆಯ್ಕೆ ಮಾಡಿದ ನಂತರ, ನೀವು ರಾಜ್ಯದ ಆಯ್ಕೆಯನ್ನು ಪಡೆಯುತ್ತೀರಿ. ಅಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಬಹುದು. 
5. ಇದರ ನಂತರ ವಾಹನದ ಬಗ್ಗೆ ಸಂಪೂರ್ಣ ಮಾಹಿತಿ ಕೇಳಲಾಗುತ್ತದೆ. ಆ ಮಾಹಿತಿಯನ್ನು ಭರ್ತಿ ಮಾಡಿ. 
6. ಮಾಹಿತಿಯನ್ನು ತುಂಬಿದ ನಂತರ ಹೊಸ ವಿಂಡೋ ತೆರೆಯುತ್ತದೆ. ಇದರಲ್ಲಿ, ವಾಹನದ ಆರ್‌ಸಿ ಮತ್ತು ಐಡಿ ಪುರಾವೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. 
7. ನಿಮ್ಮ ಮೊಬೈಲ್ ನಲ್ಲಿ OTP ಬರುತ್ತದೆ. ಭರ್ತಿ ಮಾಡಿ ಮತ್ತು ಸಲ್ಲಿಸಿ. 
8. ಇದರ ನಂತರ ಪೇಮೆಂಟ್ ಆಯ್ಕೆ ಕಾಣಿಸುತ್ತದೆ. ಪಾವತಿ ಮಾಡಿದ ನಂತರ ರಶೀದಿ ಸಿಗುತ್ತದೆ. ನಂತರ ನಿಗದಿತ ಸಮಯಕ್ಕೆ  RTO ಕಚೇರಿಗೆ ಹೋಗಿ ನಂಬರ್ ಪ್ಲೇಟ್ ಪಡೆಯಬಹುದು. 


ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್ ಹಾಕುವ ಮೂಲಕ  ವಾಹನದ ಮಾಲೀಕರು,  ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ನಂಬರ್ ಪ್ಲೇಟ್‌ಗಳ ಟ್ಯಾಂಪರಿಂಗ್ ಮತ್ತು ವಾಹನಗಳ ದುರುಪಯೋಗಕ್ಕೆ ಕಡಿವಾಣ ಹಾಕಲಾಗುವುದು.  ಒಂದು ವೇಳೆ ವಾಹನ ಕಳುವಾದರೆ, ವಾಹನವನ್ನು ಹುಡುಕುವುದು ಪೋಲಿಸರಿಗೆ  ಸುಲಭವಾಗುತ್ತದೆ. 


ಇದನ್ನೂ  ಓದಿ :  ನೀವೂ ಕೆಲಸ ಕಳೆದುಕೊಂಡಿದ್ದೀರಾ ? ಹಾಗಿದ್ದರೆ ನಿರುದ್ಯೋಗ ಭತ್ಯೆಗಾಗಿ ಇಲ್ಲಿ ನೋಂದಾಯಿಸಿಕೊಳ್ಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.