ಅಕ್ಟೋಬರ್ 1 ರಿಂದ ಪ್ರಯೋಜನಕ್ಕಿಲ್ಲ ಹಳೆಯ ಚೆಕ್ ಬುಕ್ , ಈ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ

ಅಕ್ಟೋಬರ್ 1 ರಿಂದ, ಈ 3 ದೊಡ್ಡ ಬ್ಯಾಂಕ್‌ಗಳ (Bank) ಎಲ್ಲಾ ಚೆಕ್‌ಬುಕ್‌ಗಳು ಅಮಾನ್ಯವಾಗುತ್ತವೆ. ಆದ್ದರಿಂದ, ಈ ಬ್ಯಾಂಕುಗಳ ಗ್ರಾಹಕರು ತಕ್ಷಣವೇ ತಮ್ಮ ಶಾಖೆಗೆ ಭೇಟಿ ನೀಡಿ ಹೊಸ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. 

Written by - Ranjitha R K | Last Updated : Sep 15, 2021, 05:01 PM IST
  • ಬ್ಯಾಂಕ್ ಗ್ರಾಹಕರಿಗೆ ಬಹಳ ಮುಖ್ಯವಾದ ಸುದ್ದಿ
  • ಹಳೆಯ ಚೆಕ್ ಬುಕ್ ಅಕ್ಟೋಬರ್ 1 ರಿಂದ ಕೆಲಸಕ್ಕೆ ಬರುವುದಿಲ್ಲ
  • ಯಾವ ಬ್ಯಾಂಕುಗಳ ಚೆಕ್ ಬುಕ್ ಅಮಾನ್ಯವಾಗಿದೆ ಎಂದು ತಿಳಿಯಿರಿ
ಅಕ್ಟೋಬರ್ 1 ರಿಂದ ಪ್ರಯೋಜನಕ್ಕಿಲ್ಲ ಹಳೆಯ ಚೆಕ್ ಬುಕ್ , ಈ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ title=
ಹಳೆಯ ಚೆಕ್ ಬುಕ್ ಅಕ್ಟೋಬರ್ 1 ರಿಂದ ಕೆಲಸಕ್ಕೆ ಬರುವುದಿಲ್ಲ (file photo)

ನವದೆಹಲಿ : ದೇಶದ 3 ಸಾರ್ವಜನಿಕ ವಲಯದ ಬ್ಯಾಂಕುಗಳ ಚೆಕ್ ಬುಕ್ ನಿರುಪಯುಕ್ತವಾಗುತ್ತಿದೆ. ನಿಮ್ಮ ಖಾತೆಯು ಈ ಬ್ಯಾಂಕುಗಳಲ್ಲಿದ್ದರೆ, ಚೆಕ್ ಬುಕ್ ಅನ್ನು ಸಮಯಕ್ಕೆ ಬದಲಿಸಿಕೊಳ್ಳಿ. ಯಾಕೆಂದರೆ ಈ ಬ್ಯಾಂಕುಗಳು ಇತ್ತೀಚೆಗೆ ಇತರ ಬ್ಯಾಂಕುಗಳೊಂದಿಗೆ ವಿಲೀನಗೊಂಡಿವೆ. ಬ್ಯಾಂಕ್‌ಗಳ ವಿಲೀನದಿಂದಾಗಿ ಖಾತೆದಾರರ ಐಎಫ್‌ಎಸ್‌ಸಿ (IFSC) ಮತ್ತು ಎಂಐಸಿಆರ್ (MICR) ಕೋಡ್ ಗಳು ಕೂಡಾ ಬದಲಾಗಿವೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1, 2021 ರಿಂದ, ಹಳೆಯ ಚೆಕ್ (Old cheque) ಅನ್ನು ಬಳಸುವುದು ಸಾಧ್ಯವಿಲ್ಲ. 

ಅಮಾನ್ಯವಾಗಲಿದೆ ಚೆಕ್ ಬುಕ್  : 
ಅಕ್ಟೋಬರ್ 1 ರಿಂದ, ಈ 3 ದೊಡ್ಡ ಬ್ಯಾಂಕ್‌ಗಳ (Bank) ಎಲ್ಲಾ ಚೆಕ್‌ಬುಕ್‌ಗಳು ಅಮಾನ್ಯವಾಗುತ್ತವೆ. ಆದ್ದರಿಂದ, ಈ ಬ್ಯಾಂಕುಗಳ ಗ್ರಾಹಕರು ತಕ್ಷಣವೇ ತಮ್ಮ ಶಾಖೆಗೆ ಭೇಟಿ ನೀಡಿ ಹೊಸ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅಕ್ಟೋಬರ್ 1 ರಿಂದ, ಅಲಹಾಬಾದ್ ಬ್ಯಾಂಕ್ (Alahabad bank) , ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (United Bank of India) ಚೆಕ್ ಬುಕ್ ಮತ್ತು MICR ಕೋಡ್ ಅಮಾನ್ಯವಾಗಲಿದೆ.

ಇದನ್ನೂ ಓದಿ : ನೀವೂ ಕೆಲಸ ಕಳೆದುಕೊಂಡಿದ್ದೀರಾ ? ಹಾಗಿದ್ದರೆ ನಿರುದ್ಯೋಗ ಭತ್ಯೆಗಾಗಿ ಇಲ್ಲಿ ನೋಂದಾಯಿಸಿಕೊಳ್ಳಿ

ಟ್ವೀಟ್ ಮೂಲಕ ಮಾಹಿತಿ ನೀಡಿರುವ ಬ್ಯಾಂಕ್ : 
ಈ ಮೂರು ಬ್ಯಾಂಕುಗಳ MICR ಕೋಡ್‌ಗಳು ಮತ್ತು ಚೆಕ್‌ಬುಕ್‌ಗಳು (Cheque book) 30 ಸೆಪ್ಟೆಂಬರ್ 2021 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ಗ್ರಾಹಕರಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಡಚಣೆಯಿಲ್ಲದೆ ಬ್ಯಾಂಕಿಂಗ್ ವಹಿವಾಟುಗಳನ್ನು ಮುಂದುವರಿಸಬೇಕಾದರೆ ಗ್ರಾಹಕರು ಅಕ್ಟೋಬರ್ 1 2021 ರ ಮೊದಲು ಹೊಸ ಚೆಕ್ ಪುಸ್ತಕವನ್ನು ಪಡೆದುಕೊಳ್ಳಬೇಕು. ಅಕ್ಟೋಬರ್ 1, 2021 ರಿಂದ ಹಳೆಯ MICR ಕೋಡ್ ಮತ್ತು ಚೆಕ್ ಬುಕ್ ಅಮಾನ್ಯವಾಗಿರುತ್ತದೆ. 

ಹೊಸ ಚೆಕ್ ಬುಕ್ ಪಡೆಯುವುದು ಹೇಗೆ ? 
ಗ್ರಾಹಕರು ಹೊಸ ಚೆಕ್ ಬುಕ್ ಅನ್ನು ಹತ್ತಿರದ ಶಾಖೆಯಿಂದ ಸಂಗ್ರಹಿಸಬಹುದು. ಇದಲ್ಲದೇ, ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್ (Internet Banking/Online Banking)  ಅಥವಾ ಮೊಬೈಲ್ ಬ್ಯಾಂಕಿಂಗ್ (Mobile Banking) ಮೂಲಕವೂ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ : EPFO New Rule : ತುರ್ತು ಸಮಯದಲ್ಲಿ ನೀವು 1 ಗಂಟೆಯಲ್ಲಿ PF ಖಾತೆಯಿಂದ ₹1 ಲಕ್ಷ ಹಿಂಪಡೆಯಬಹುದು : ಸಂಪೂರ್ಣ ಮಾಹಿತಿ ಇಲ್ಲಿದೆ

ಈ ಬ್ಯಾಂಕುಗಳ ಖಾತೆದಾರರು ಆನ್‌ಲೈನ್ ಬ್ಯಾಂಕಿಂಗ್ (Online banking) ವಹಿವಾಟಿನ ಸೌಲಭ್ಯವನ್ನು ಬಳಸಲು ವಿಲೀನದ ನಂತರದ ಬ್ಯಾಂಕ್ ನಿಯಮಗಳ ಪ್ರಕಾರ ತಮ್ಮ ಹಳೆಯ ಐಎಫ್‌ಎಸ್‌ಸಿ ಕೋಡ್ (IFSC Code) ಅನ್ನು ಬದಲಾಯಿಸಬೇಕಾಗುತ್ತದೆ.  ಅಂದರೆ, ನೀವು ಈ ಬ್ಯಾಂಕುಗಳ ಗ್ರಾಹಕರಾಗಿದ್ದರೆ, ಎಲ್ಲಾ ಅಪ್‌ಡೇಟ್‌ಗಳನ್ನು ತಕ್ಷಣವೇ ಮಾಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News