ನವದೆಹಲಿ:  ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ನೀವು ಮರೆತಿದ್ದೀರಾ? 2019-20ರ ಆರ್ಥಿಕ ವರ್ಷಕ್ಕೆ ಐಟಿಆರ್ ತುಂಬಲು  ಜನವರಿ 10 ಕೊನೆಯ ದಿನಾಂಕವಾಗಿತ್ತು.  ಸರ್ಕಾರವು ಈ ಬಾರಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಹಲವಾರು ಬಾರಿ ವಿಸ್ತರಿಸುತ್ತಾ ಬಂದಿದೆ. ಇದಾಗಿಯೂ ನಿಮ್ಮ ಐಟಿಆರ್ ಅನ್ನು ಭರ್ತಿ ಮಾಡಲು ನೀವು ಮರೆತಿದ್ದೀರಾ ? ಒಂದು ವೇಳೆ ಮರೆತಿದ್ದರೆ ಭಯಪಡುವ ಅಗತ್ಯವಿಲ್ಲ.  ಇನ್ನೂ ನಿಮ್ಮ ಐಟಿಆರ್ ಅನ್ನು ಭರ್ತಿ ಮಾಡಬಹುದು.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಐಟಿ ರಿಟರ್ನ್ಸ್ (IT Returns) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ. ಆದರೆ ಈ ವರ್ಷ  ಕರೋನಾ (Coronavirus) ಸಾಂಕ್ರಾಮಿಕದಿಂದಾಗಿ, ಈ ಗಡುವನ್ನು ಸರ್ಕಾರ ಮೂರು  ಬಾರಿ ವಿಸ್ತರಿಸಿದೆ.  ವೈಯಕ್ತಿಕ ತೆರಿಗೆದಾರರಿಗೆ ಐಟಿಆರ್ (ITR) ತುಂಬಲು ಜನವರಿ 10, 2021ಕೊನೆಯ ದಿನಾಂಕವಾಗಿತ್ತು. ಈ ಗಡುವನ್ನು ಮತ್ತೆ ವಿಸ್ತರಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದ್ದರೂ, ಸರ್ಕಾರ ಬೇಡಿಕೆಯನ್ನು ಒಪ್ಪಿರಲಿಲ್ಲ. ಮೂರು ಬಾರಿ ಐಟಿಆರ್ ಸಲ್ಲಿಕೆಯ ಗಡುವನ್ನು ವಿಸ್ತರಿಸಿದ್ದರೂ ಬೇರೆಬೇರೆ ಕಾರಣಗಳಿಂದ ಇನ್ನೂ ಅನೇಕರಿಗೆ ಐಟಿಆರ್ ಸಲ್ಲಿಸಲು ಸಾಧ್ಯವಾಗಿಲ್ಲ. 


ಇದನ್ನೂ ಓದಿ: ITR Date Extension News:ಫೆಬ್ರುವರಿ 15ರ ಬಳಿಕ ITR ಸಲ್ಲಿಕೆಯ ಡೆಡ್ಲೈನ್ ವಿಸ್ತರಣೆ ಇಲ್ಲ: ಕೇಂದ್ರ


ನಿಗದಿತ ದಿನಾಂಕದ ನಂತರ  ಐಟಿ ರಿಟರ್ನ್ ಸಲ್ಲಿಸಿದರೆ ಅದನ್ನು ಬಿಲೇಟೆಡ್ ರಿಟರ್ನ್ (belated return) ಎಂದು ಕರೆಯುತ್ತಾರೆ. ಈ ರೀತಿ ಬಿಲೇಟೆಡ್ ರಿಟರ್ನ್ ತುಂಬಲು  ನಿಮಗೆ ಇನ್ನೂ ಸಮಯಾವಕಾಶವಿದೆ. ಆದರೆ ಇದಕ್ಕೆ 10,000 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಈ ದಂಡ ಪಾವತಿಸಿದರೆ ಮಾತ್ರ ಬಿಲೇಟೆಡ್ ರಿಟರ್ನ್ ಸಲ್ಲಿಸಲು ಸಾಧ್ಯವಾಗುತ್ತದೆ. ಪ್ರತಿ ವರ್ಷ, ಜುಲೈ 31 ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.  ಇದರ ನಂತರ ರಿಟರ್ನ್ ಸಲ್ಲಿಸಿದರೆ,  5,000 ರೂ. ದಂಡ ಪಾವತಿಬೇಕಾಗುತ್ತದೆ. ಆದರೆ  ಅದನ್ನು ಡಿಸೆಂಬರ್ 31 ರೊಳಗೆ ಭರ್ತಿ ಮಾಡಬೇಕಾಗುತ್ತದೆ. ಈ ಸಮಯದಲ್ಲೂ ರಿಟರ್ನ್ ಸಲ್ಲಿಸಲು ಸಾಧ್ಯವಾಗದೇ ಹೋದರೆ, ಡಿಸೆಂಬರ್ 31 ರಿಂದ ಮಾರ್ಚ್ 31 ರವರೆಗೆ ರಿಟರ್ನ್ ಸಲ್ಲಿಸಬುದಾಗಿದೆ. ಆದರೆ,  10,000 ರೂ. ದಂಡ ತೆರಬೇಕಾಗಿತ್ತು.


ಸಣ್ಣ ತೆರಿಗೆದಾರರು ಅಂದರೆ ವಾರ್ಷಿಕ ಆದಾಯ 5 ಲಕ್ಷ ರೂ ಇದ್ದು,  ಆದಾಯ ತೆರಿಗೆ ರಿಟರ್ನ್ಸ್ ಅನ್ನು ಮಾರ್ಚ್ 31 ರೊಳಗೆ ಸಲ್ಲಿಸಿದರೆ, ಆ ಸಂದರ್ಭದಲ್ಲಿ 1,000 ರೂ. ದಂಡ ಪಾವತಿಸಬೇಕಾಗುತ್ತದೆ. ನೀವು ದಂಡ ಮತ್ತು ಬಾಕಿ ತೆರಿಗೆಯನ್ನು (Tax) ಜಮಾ ಮಾಡಿದಾಗ ಮಾತ್ರ ITRಸಲ್ಲಿಸಲು ಸಾಧ್ಯವಾಗುತ್ತದೆ. ನೆನಪಿಡಿ..  ದಂಡವನ್ನು ಪಾವತಿಸುವ ಮೊದಲು ನಿಮ್ಮ ಐಟಿಆರ್ ಪಾವತಿಸುವವರೆಗೆ ನೀವು ಪ್ರತಿ ತಿಂಗಳು ಪಾವತಿಸದ ತೆರಿಗೆಗೆ ಬಡ್ಡಿಯನ್ನು (Interest) ತೆರಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 244 ಎ ಅಡಿಯಲ್ಲಿ, ನಿಮ್ಮ ಗಳಿಕೆಗಿಂತ  ಹೆಚ್ಚಿನ ಹಣವನ್ನು ತೆರಿಗೆ ಪಾವತಿಸಿದ್ದರೆ ಆ ಮೊತ್ತವನ್ನು  ಮರುಪಾವತಿಸಲಾಗುತ್ತದೆ.


ಇದನ್ನೂ ಓದಿ: ವೀಡಿಯೊ ಮೂಲಕ ದೇಶದ ಅತಿದೊಡ್ಡ BANK ನೀಡಿದೆ ಈ ಎಚ್ಚರಿಕೆ


 ಒಂದು ವೇಳೆನೀವು ಐಟಿಆರ್ ಅನ್ನು ಭರ್ತಿ ಮಾಡದಿದ್ದರೆ, ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ (Notice) ಕಳುಹಿಸಬಹುದು.  3 ತಿಂಗಳಿಂದ 2 ವರ್ಷಗಳವರೆಗೆ ಜೈಲಿನಲ್ಲಿಡಲೂಬಹುದು (Jail). ಬಾಕಿ ಇರುವ ತೆರಿಗೆ 25 ಲಕ್ಷ ರೂ.ಗಿಂತ ಹೆಚ್ಚಿದ್ದರೆ, 7 ವರ್ಷಗಳ ಜೈಲು ಶಿಕ್ಷೆಯೂ ಆಗಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.