ITR Date Extension News: ಲೆಕ್ಕಪರಿಶೋಧನೆಯ ಅಗತ್ಯವಿರುವ ಎಲ್ಲ ಸ್ಥಾನಗಳಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲು ಹಣಕಾಸು ಸಚಿವಾಲಯ ನಿರಾಕರಿಸಿದೆ. 2020 ರ ಡಿಸೆಂಬರ್‌ನಲ್ಲಿ ಸರ್ಕಾರ ಐಟಿಆರ್ ಸಲ್ಲಿಸುವ ದಿನಾಂಕವನ್ನು ಜನವರಿ 10 ಕ್ಕೆ ವಿಸ್ತರಿಸಿತು. ಇದೀಗ ಆ ಗಡುವನ್ನು ಫೆಬ್ರವರಿ 15 ಕ್ಕೆ ಮತ್ತೆ ವಿಸ್ತರಿಸಲಾಗಿದೆ.
ಈ ಗಡುವನ್ನು ಹೆಚ್ಚಿಸುವ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಗುಜರಾತ್ ಹೈಕೋರ್ಟ್ ಹಣಕಾಸು ಸಚಿವಾಲಯಕ್ಕೆ ಸೂಚಿಸಿತ್ತು. ಆ ಬಳಿಕ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ಮಾಹಿತಿಯನ್ನು ನೀಡಿದೆ. ಡ್ಯೂ-ಡೇಟ್ ಕುರಿತಾದ ಎಲ್ಲ ವರದಿಗಳನ್ನು ತಳ್ಳಿಹಾಕಲಾಗಿದೆ ಎಂದು CBDT ಹೇಳಿದೆ.
ಇದನ್ನು ಓದಿ-Income Tax Return Filing Online: ಮತ್ತೆ ವಿಸ್ತರಣೆಯಾದ ITR ಸಲ್ಲಿಕೆಯ ಗಡುವು
1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡ ತೆರೆಗೆ ಪಾವತಿದಾರರಿಗೂ ಕೂಡ ಸ್ವಯಂಪರಿಶೀಲಿತ ತೆರಿಗೆ ಪಾವತಿಸುವ ಗಡುವು ಹಾಗೂ ITR ಸಲ್ಲಿಕೆಯ ಗಡುವು ಒಂದೇ ಆಗಿರಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನು ಓದಿ-ನೀವು ಇನ್ನೂ ಐಟಿ ರಿಟರ್ನ್ಸ ಸಲ್ಲಿಸಿಲ್ಲವೇ? ಹಾಗಿದ್ದಲ್ಲಿ ಇಲ್ಲಿದೆ ಮಹತ್ವದ ಮಾಹಿತಿ
ತೆರಿಗೆ ಲೆಕ್ಕಪರಿಶೋಧನಾ ವರದಿ ಸಲ್ಲಿಸುವ ದಿನಾಂಕವನ್ನು ಸರ್ಕಾರ 15 ಫೆಬ್ರವರಿ 2021 ಕ್ಕೆ ವಿಸ್ತರಿಸಿದೆ. ಇದನ್ನು ಈಗಾಗಲೇ ಮೂರು ಬಾರಿ ವಿಸ್ತರಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಲೆಕ್ಕಪರಿಶೋಧನೆಯಲ್ಲದ ಪ್ರಕರಣಗಳಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸಲು ಗಡುವು ಜನವರಿ 10 ಆಗಿದ್ದು, ಅದು ಈಗಾಗಲೇ ಜಾರಿಗೆ ಬಂದಿದೆ.
ಇದನ್ನು ಓದಿ-Taxಗೆ ಸಂಬಂಧಿಸಿದ ಈ ಮೂರು ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.