ಗ್ರಾಹಕರಿಗೆ ಏಕಾಏಕಿ ಬಿಗ್ ಶಾಕ್ ನೀಡಿದ HDFC ಬ್ಯಾಂಕ್..!
ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಎಲ್ಲಾ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಮಾಹಿತಿಯ ಪ್ರಕಾರ, HDFC ಬ್ಯಾಂಕ್ ಎಲ್ಲಾ ಸಾಲದ ಅವಧಿಗೆ 5-10 ಬೇಸಿಸ್ ಪಾಯಿಂಟ್‌ಗಳಷ್ಟು (bps) ನಿಧಿಗಳ ಆಧರಿತ ಸಾಲದ ದರದ (MCLR) ಮಾರ್ಜಿನಲ್ ವೆಚ್ಚವನ್ನು ಹೆಚ್ಚಿಸಿದೆ.
ನವದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಲಕ್ಷಾಂತರ ಗ್ರಾಹಕರಿಗೆ ಏಕಾಏಕಿ ದೊಡ್ಡ ಶಾಕ್ ನೀಡಿದೆ. ದೇಶದ ನಂ.1 ಖಾಸಗಿ ಬ್ಯಾಂಕ್ ಆಗಿರುವ HDFC ತನ್ನ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕಿನ ಮಾಹಿತಿಯ ಪ್ರಕಾರ, HDFC ಬ್ಯಾಂಕ್ ಎಲ್ಲಾ ಸಾಲದ ಅವಧಿಗೆ 5 ರಿಂದ 10 ಬೇಸಿಸ್ ಪಾಯಿಂಟ್‌ಗಳಷ್ಟು (bps) ನಿಧಿಗಳ ಆಧರಿತ ಸಾಲದ ದರದ (MCLR) ಮಾರ್ಜಿನಲ್ ವೆಚ್ಚವನ್ನು ಹೆಚ್ಚಿಸಿದೆ.
HDFC ಗ್ರಾಹಕರಿಗೆ ದೊಡ್ಡ ಹೊಡೆತ !
ಆಗಸ್ಟ್ 8 ಅಂದರೆ ಇಂದಿನಿಂದಲೇ HDFC ಬ್ಯಾಂಕ್ ಹೊಸಬಡ್ಡಿದರಗಳು ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು (ಶೇ.0.50) ಹೆಚ್ಚಿಸುವುದಾಗಿ ಘೋಷಿಸಿದ ನಂತರ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಆಗಸ್ಟ್‌ನಲ್ಲಿ ಆರ್‌ಬಿಐನ ಎಂಪಿಸಿ ಸಭೆಯಲ್ಲಿ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಇದನ್ನೂ ಓದಿ: ಅತ್ಯಂತ ಹಗುರ ಬೈಕ್ ನ ಬೆಲೆ ಎಷ್ಟು ಗೊತ್ತಾ?
ರೆಪೋ ದರ ಹೆಚ್ಚಿಸಿದ RBI
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ(ಆಗಸ್ಟ್ 5) ನಡೆದ ಹಣಕಾಸು ನೀತಿ ಸಮಿತಿ ಸಭೆ(RBI MPC Meeting)ಯಲ್ಲಿ ಶೇ.0.50ರಷ್ಟು ರೆಪೋ ದರ ಹೆಚ್ಚಳ ಘೋಷಿಸಿದರು. ಈ ಹೆಚ್ಚಳದ ನಂತರ ರೆಪೊ ದರವು 5.40 ಪ್ರತಿಶತಕ್ಕೆ ಏರಿತು. ಈ ವರ್ಷ ಆರ್‌ಬಿಐ ಸತತ 3ನೇ ಬಾರಿಗೆ ರೆಪೊ ದರವನ್ನು ಹೆಚ್ಚಿಸಿದೆ.
3ನೇ ಬಾರಿ ರೆಪೋ ದರ ಏರಿಕೆ
ಇದಕ್ಕೂ ಮೊದಲು ಮೇ 2022ರಲ್ಲಿ ಆರ್‌ಬಿಐ ಇದ್ದಕ್ಕಿದ್ದಂತೆ ರೆಪೊ ದರವನ್ನು ಶೇ.0.50ರಷ್ಟು ಹೆಚ್ಚಿಸಿತ್ತು. ಇದರ ನಂತರ ಜೂನ್ 2022ರ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಶೇ.0.40ರಷ್ಟು ಹೆಚ್ಚಿಸಲಾಯಿತು. ಈ ಮೂಲಕ ಮೇ ತಿಂಗಳಿನಿಂದ ರೆಪೊ ದರದಲ್ಲಿ ಒಟ್ಟು ಶೇ.1.40ರಷ್ಟು ಏರಿಕೆಯಾಗಿದೆ. ಈ ಹೆಚ್ಚಳದಿಂದ ಗ್ರಾಹಕರ ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಅಂದರೆ ಬ್ಯಾಂಕ್‌ನಿಂದ ತೆಗೆದುಕೊಳ್ಳುವ ಎಲ್ಲಾ ರೀತಿಯ ಸಾಲಗಳು ದುಬಾರಿಯಾಗುತ್ತವೆ. ಇದರ ನೇರ ಪರಿಣಾಮ ಗ್ರಾಹಕರ ಜೇಬಿನ ಮೇಲಾಗಲಿದೆ.
ಇದನ್ನೂ ಓದಿ: ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.