Gold Price in India: ದೇಶದಲ್ಲಿ ಜನರು ಕಾಲಕಾಲಕ್ಕೆ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಲೇ ಇರುತ್ತಾರೆ. ಅನೇಕರು ಹೂಡಿಕೆಯ ದೃಷ್ಟಿಯಿಂದ ಸಹ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಚಲನವಲನ ಕಂಡು ಬರುತ್ತದೆ. ಇದೇ ವೇಳೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇದೀಗ ಮತ್ತೆ ಇಳಿಕೆಯಾಗಿದೆ. ಈ ಕುಸಿತದಿಂದಾಗಿ ಚಿನ್ನ ಮತ್ತು ಬೆಳ್ಳಿ ಎರಡೂ ಅಗ್ಗವಾಗಿವೆ. ಆದರೆ ಇಂದು ಚಿನ್ನದ ಬೆಲೆ 300 ರೂ.ಗೂ ಹೆಚ್ಚು ಕುಸಿದಿದೆ. ಇದಲ್ಲದೇ ಬೆಳ್ಳಿ ಬೆಲೆ ರೂ.650ಕ್ಕೂ ಹೆಚ್ಚು ಕುಸಿದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Airtelನ Top-5 5G Plans!: ಉಚಿತ Amazon Prime, Disney+ Hotstar ಸೇರಿ ಹಲವು ಸೌಲಭ್ಯ


ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಬಾಳುವ ಲೋಹಗಳ ಬೆಲೆ ಕುಸಿತದ ನಡುವೆ ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. 345 ರೂ. ಕುಸಿತದೊಂದಿಗೆ, ಚಿನ್ನದ ಬೆಲೆ 10 ಗ್ರಾಂಗೆ 60,065 ರೂ. ಗೆ ವಹಿವಾಟು ನಡೆಸುತ್ತಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಮಾಹಿತಿಯನ್ನು ನೀಡಿದೆ. ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 60,410 ರೂ. ಆಗಿತ್ತು. 


ಬೆಳ್ಳಿ ಬೆಲೆಯಲ್ಲೂ ಕುಸಿತ: ಇದಲ್ಲದೇ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಬೆಳ್ಳಿಯ ಬೆಲೆ ರೂ.675 ಇಳಿಕೆಯಾಗಿದೆ. ಇಷ್ಟೊಂದು ಕುಸಿದ ಬಳಿಕ ಬೆಳ್ಳಿ 75 ಸಾವಿರದ ಕೆಳಗೆ ಇಳಿದಿದೆ. ಕುಸಿತದ ನಂತರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 74,400 ರೂ.ಗೆ ಇಳಿದಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ಸೌಮಿಲ್ ಗಾಂಧಿ ಹೇಳಿದ್ದಾರೆ.  


ಇದನ್ನೂ ಓದಿ: 18 ತಿಂಗಳ ಡಿಎ ಬಾಕಿ ಬಗ್ಗೆ ಸರ್ಕಾರದ ಘೋಷಣೆ ! ಈ ದಿನ ಖಾತೆ ಸೇರುವುದು ಹಣ


ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕುಸಿತ: ಅದೇ ಸಮಯದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ - ಬೆಳ್ಳಿ ಬೆಲೆ ಕುಸಿತ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 1,982 ಡಾಲರ್‌ಗೆ ಕುಸಿದರೆ, ಬೆಳ್ಳಿ 24.95 ಡಾಲರ್‌ಗೆ ಇಳಿಕೆಯಾಗಿದೆ. ಸೋಮವಾರ ಏಷ್ಯನ್ ವಹಿವಾಟಿನ ವೇಳೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.