Airtelನ Top-5 5G Plans!: ಉಚಿತ Amazon Prime, Disney+ Hotstar ಸೇರಿ ಹಲವು ಸೌಲಭ್ಯ

Airtelನ Top-5 5G Plans: ಏರ್‌ಟೆಲ್ ಇದೀಗ ಹೊಸ ಗುರಿ ಹೊಂದಿದೆ. ಡಿಸೆಂಬರ್ 2023ರ ವೇಳೆಗೆ ಪ್ರತಿಯೊಂದು ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸುವ ಯೋಜನೆ ಹೊಂದಿದೆ. ಏರ್‌ಟೆಲ್ 300ಕ್ಕೂ ಹೆಚ್ಚು ನಗರಗಳಲ್ಲಿ 5G ನೆಟ್‌ವರ್ಕ್ ಸೇವೆ ನೀಡಬಹುದು.

Written by - Puttaraj K Alur | Last Updated : Apr 24, 2023, 05:01 PM IST
  • ಏರ್‌ಟೆಲ್‌ 300ಕ್ಕೂ ಹೆಚ್ಚು ನಗರಗಳಲ್ಲಿ 5G ನೆಟ್‌ವರ್ಕ್ ಸೇವೆ ನೀಡಲು ಯೋಜನೆ ರೂಪಿಸಿದೆ
  • 5G ಸೇವೆಯು ಕೆಲವೇ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ಲಭ್ಯವಿದೆ
  • 5G ಸೇವೆಯೊಂದಿಗೆ ಏರ್‌ಟೆಲ್‌ ಹಲವು ಅತ್ಯುತ್ತಮ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ
Airtelನ Top-5 5G Plans!: ಉಚಿತ Amazon Prime, Disney+ Hotstar ಸೇರಿ ಹಲವು ಸೌಲಭ್ಯ title=
ಏರ್ಟೆಲ್ ರಿಚಾರ್ಜ್ ಯೋಜನೆಗಳು

ನವದೆಹಲಿ: ಏರ್‌ಟೆಲ್ ಇದೀಗ ಹೊಸ ಗುರಿ ಹೊಂದಿದೆ. ಡಿಸೆಂಬರ್ 2023ರ ವೇಳೆಗೆ ಪ್ರತಿಯೊಂದು ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸುವ ಯೋಜನೆ ಹೊಂದಿದೆ. ಏರ್‍ಟೆಲ್‍ 300ಕ್ಕೂ ಹೆಚ್ಚು ನಗರಗಳಲ್ಲಿ 5G ನೆಟ್‌ವರ್ಕ್ ಸೇವೆ ನೀಡಬಹುದು. ಮುಂಬರುವ ವಾರದಲ್ಲಿ ಹಲವು ನಗರಗಳಲ್ಲಿ 5G ಸೇವೆ ದೊರೆಯಲಿದೆ. ಆದರೆ ಕಂಪನಿಯು ಬಳಕೆದಾರರಿಗೆ 5G ಸೇವೆಯನ್ನು ಉಚಿತವಾಗಿ ನೀಡುತ್ತಿಲ್ಲ. 5G ಸೇವೆಯು ಕೆಲವೇ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ಲಭ್ಯವಿದೆ. ಏರ್‌ಟೆಲ್‌ನ ಈ ಯೋಜನೆಗಳಲ್ಲಿ ಉಚಿತ Amazon Prime ಮತ್ತು Disney + Hotstar ಚಂದಾದಾರಿಕೆ ಲಭ್ಯವಿವೆ. ಈ ಯೋಜನೆಗಳ ಬಗ್ಗೆ ತಿಳಿಯಿರಿ.

ಏರ್‌ಟೆಲ್‍ನ 499 ರೂ. ಪ್ಲಾನ್

ಏರ್‌ಟೆಲ್‌ನ 499 ರೂ. ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ 5G ಇಂಟರ್ನೆಟ್‌ನೊಂದಿಗೆ ಪ್ರತಿದಿನ 100 SMS ಲಭ್ಯವಿದೆ. ಇದಲ್ಲದೇ 3 ತಿಂಗಳ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಯೋಜನೆಯಲ್ಲಿ ಲಭ್ಯವಿದೆ. ಅದೇ ರೀತಿ Xtream ಅಪ್ಲಿಕೇಶನ್ ಪ್ರಯೋಜನಗಳು ಸಹ ಯೋಜನೆಯೊಂದಿಗೆ ಲಭ್ಯವಿದೆ. ಇನ್ನೂ 5G ಪಡೆಯದ ಬಳಕೆದಾರರು ಅನಿಯಮಿತ 4G ಡೇಟಾದೊಂದಿಗೆ 3GB ದೈನಂದಿನ ಡೇಟಾ ಪಡೆಯುತ್ತಾರೆ.

ಇದನ್ನೂ ಓದಿ: ಮನೆ ಬಾಡಿಗೆಗೆ ಕೊಡುವ ಮುನ್ನ ಈ ಮುಖ್ಯ ನಿಯಮಗಳು ತಿಳಿದಿರಿ ! ಇಲ್ಲದಿದ್ದರೆ ಬಾಡಿಗೆದಾರರೇ ಮನೆ ಒಡೆಯರಾಗಬಹುದು !

ಏರ್‌ಟೆಲ್‍ನ 839 ರೂ. ಯೋಜನೆ

ಏರ್‌ಟೆಲ್‌ನ 839 ರೂ. ಯೋಜನೆಯು 84 ದಿನಗಳ ವ್ಯಾಲಿಟಿಡಿ ಹೊಂದಿದೆ. ಇದರಲ್ಲಿ ಅನಿಯಮಿತ 5G ಇಂಟರ್ನೆಟ್ ಡೇಟಾ, ಅನಿಯಮಿತ ಕರೆ ಮತ್ತು 100 SMS ಪ್ರತಿದಿನ ಲಭ್ಯವಿದೆ. ಈ ಯೋಜನೆಯಲ್ಲಿಯೂ 3 ತಿಂಗಳ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯವಿದೆ. ಕೊನೆಯವರೆಗೂ 5G ಸೇವೆ ಆನಂದಿಸಲು ಸಾಧ್ಯವಾಗದವರಿಗೆ ಈ ಯೋಜನೆ ಉತ್ತಮವಾಗಿದೆ. ಯೋಜನೆಯು 2GB ದೈನಂದಿನ ಅನಿಯಮಿತ 4G ಡೇಟಾ ನೀಡುತ್ತದೆ.

ಏರ್‌ಟೆಲ್‍ನ 3,359 ರೂ. ಯೋಜನೆ

ಏರ್‌ಟೆಲ್‌ನ 3,359 ರೂ. ಯೋಜನೆಯು 1 ವರ್ಷದ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ 5G ಡೇಟಾ, ಕರೆ ಮತ್ತು ದೈನಂದಿನ 100 SMS ಲಭ್ಯವಿದೆ. ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ 1 ವರ್ಷಕ್ಕೆ ಲಭ್ಯವಿದೆ. ಇದಲ್ಲದೆ Apollo 24x7 ಪ್ರಯೋಜನಗಳು, Wynk ಚಂದಾದಾರಿಕೆ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: 18 ತಿಂಗಳ ಡಿಎ ಬಾಕಿ ಬಗ್ಗೆ ಸರ್ಕಾರದ ಘೋಷಣೆ ! ಈ ದಿನ ಖಾತೆ ಸೇರುವುದು ಹಣ

ಏರ್‌ಟೆಲ್‍ನ 699 ರೂ. ಪ್ಲಾನ್

ಏರ್‌ಟೆಲ್‌ನ 699 ರೂ. ಯೋಜನೆಯಡಿ 56 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಇದರಲ್ಲಿ ಅನಿಯಮಿತ 5G ಡೇಟಾ, ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ. ಈ ಯೋಜನೆಯಡಿ Amazon Prime ಚಂದಾದಾರಿಕೆಯು 56 ದಿನಗಳವರೆಗೆ ಲಭ್ಯವಿದೆ. ಬಳಕೆದಾರರು 5G ನೆಟ್‌ವರ್ಕ್ ಪ್ರದೇಶದಲ್ಲಿ ಇಲ್ಲದಿದ್ದರೆ ಅವರು 3GB ಅನಿಯಮಿತ 4G ಡೇಟಾ ಪಡೆಯಬಹುದು.

ಏರ್‌ಟೆಲ್‍ನ 999 ರೂ. ಪ್ಲಾನ್

ಏರ್‌ಟೆಲ್‌ನ 999 ರೂ. ಯೋಜನೆಯು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ಅನಿಯಮಿತ ಕರೆ ಮತ್ತು ಅನಿಯಮಿತ 5G ಡೇಟಾ ಮತ್ತು 100 SMS ಪ್ರತಿದಿನ ಲಭ್ಯವಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವವು ಯೋಜನೆಯಲ್ಲಿ 84 ದಿನಗಳವರೆಗೆ ಲಭ್ಯವಿದೆ. ಏರ್‌ಟೆಲ್ 5G ನಗರದಲ್ಲಿಲ್ಲದ ಬಳಕೆದಾರರು 2.5GB ದೈನಂದಿನ ಡೇಟಾ ಜೊತೆಗೆ ಅನಿಯಮಿತ 4G ಡೇಟಾ ಬಳಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News