Current Train Ticket Rules:  ರಜಾದಿನಗಳಿಗಾಗಿ ಯೋಚಿಸುತ್ತಿದ್ದರೆ ಈ ಸಂದರ್ಭದಲ್ಲಿ ರೈಲಿನಲ್ಲಿ ಕನ್ಫರ್ಮ್ ಸೀಟ್ (Confirm Seat) ಪಡೆಯುವುದು ಅಷ್ಟು ಸುಲಭವಲ್ಲ. ಪ್ರಯಾಣದ ದಿನಾಂಕಕ್ಕಿಂತ 1 ದಿನ ಮೊದಲು ತತ್ಕಾಲ್ ಟಿಕೆಟ್ ಬುಕ್ಕಿಂಗ್ (Tatkal Ticket Booking) ಆಯ್ಕೆಯಿದೆ. ಆದರೆ, ಪ್ರಸ್ತುತ ತತ್ಕಾಲ್ ಟಿಕೆಟ್‌ಗಳ (Tatkal Ticket) ಬೇಡಿಕೆ ಹೆಚ್ಚಿರುವುದರಿಂದ ತತ್ಕಾಲ್ ಟಿಕೆಟ್‌ಗಳನ್ನು  ಬುಕ್ಕಿಂಗ್ ಏಜೆಂಟ್‌ಗಳು ಬುಕ್ ಮಾಡುತ್ತಾರೆ ಎಂದು ಕೆಲವರು ದೂರುವುದು ಉಂಟು. ಆದರೆ, ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ರೈಲಿನಲ್ಲಿ ಪ್ರತಿ ಬಾರಿಯೂ ದೃಢೀಕೃತ ಟಿಕೆಟ್ ಅನ್ನು ಪಡೆಯಬಹುದು. ಇದಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಕರೆಂಟ್ ಟಿಕೆಟ್ (Current Train Ticket Rules)  ಸೌಲಭ್ಯವನ್ನು ಒದಗಿಸಿದೆ. 


COMMERCIAL BREAK
SCROLL TO CONTINUE READING

ಏನಿದು ಕರೆಂಟ್ ಟಿಕೆಟ್? 
ರೈಲು ಪ್ರಯಾಣಿಕರಿಗೆ ದೃಢೀಕೃತ ಟಿಕೆಟ್‌ಗಳನ್ನು ಒದಗಿಸುವ ನಿಟ್ಟಿಯಲ್ಲಿ ಭಾರತೀಯ ರೈಲ್ವೇಯೂ (Indian Railways) ಕರೆಂಟ್ ಟಿಕೆಟ್ ಸೌಲಭ್ಯವನ್ನು ಒದಗಿಸಿದೆ. ಇದರಲ್ಲಿ ಪ್ರಯಾಣಿಕರು ರೈಲು ಹೊರಡುವ ನಾಲ್ಕು ಗಂಟೆಯಿಂದ 5 ನಿಮಿಷಗಳ ಮೊದಲು ಟಿಕೆಟ್ ಬುಕ್ ಮಾಡಬಹುದಾಗಿದೆ. 


ಇದನ್ನೂ ಓದಿ- Cibil Score: ಕೆಟ್ಟ ಕ್ರೆಡಿಟ್ ಸ್ಕೋರ್ ಸುಧಾರಿಸಲು ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ


ಯಾವುದೇ ಹೆಚ್ಚುವರಿ ಶುಲ್ಕ ಪಾವತಿ ಇಲ್ಲ: 
ಇನ್ನೊಂದು ಪ್ರಮುಖವಾದ ವಿಷಯವೆಂದರೆ ಕರೆಂಟ್ ಟಿಕೆಟ್‌ಗಳನ್ನು ಪಡೆಯಲು ಪ್ರಯಾಣಿಕರು  ತತ್ಕಾಲ್ ಅಥವಾ ಪ್ರೀಮಿಯಂ ತತ್ಕಾಲ್‌ನಂತೆ (Tatkal or Premium Tatkal)ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವಟಿಸುವ ಅವಶ್ಯಕತೆಯೂ ಇರುವುದಿಲ್ಲ. 


ಕನ್ಫರ್ಮ್ ಟಿಕೆಟ್ ಪಡೆಯಲು ಖಚಿತ ಮಾರ್ಗ: 
ತತ್ಕಾಲ್ ಟಿಕೆಟ್‌ಗೆ ಹೊಲಿಸಿದರೆ ಕರೆಂಟ್ ಟಿಕೆಟ್‌ನಲ್ಲಿ (Current Ticket vs Tatkal Ticket) ದೃಢೀಕೃತ ಟಿಕೆಟ್ ಅನ್ನು ಬುಕ್ ಮಾಡುವುದು ತುಂಬಾ ಸುಲಭ. ಗಮನಾರ್ಹ ವಿಷಯವೆಂದರೆ ಸೀಟ್ ಲಭ್ಯತೆಯನ್ನು ಅವಲಂಬಿಸಿ ನೀವು ಇದರಲ್ಲಿ ಸುಲಭವಾಗಿ ದೃಢೀಕೃತ ಟಿಕೆಟ್‌ಗಳನ್ನು ಬುಕಿಂಗ್ ಮಾಡಬಹುದು. 


ಇದನ್ನೂ ಓದಿ- Credit Card Tips: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳಿದ್ದು ಅವುಗಳನ್ನು ಬಳಸದಿದ್ದರೆ ಏನಾಗುತ್ತೆ!


ಕರೆಂಟ್ ಟ್ರೈನ್ ಟಿಕೆಟ್ ಅನ್ನು ಎಲ್ಲಿ? ಹೇಗೆ ಬುಕ್ ಮಾಡಬಹುದು? 
ಐ‌ಆರ್‌ಸಿ‌ಟಿ‌ಸಿಯ (IRCTC) ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ರೈಲ್ವೇ ಟಿಕೆಟ್ ಕಾಯ್ದಿರಿಸುವಿಕೆ ಬುಕಿಂಗ್ ಕೌಂಟರ್‌ನಿಂದ ನೀವು ಕರೆಂಟ್ ಟ್ರೈನ್ ಟಿಕೆಟ್ ಬುಕ್ (Current Train Ticket Booking) ಮಾಡಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.