ನವದೆಹಲಿ: ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೀರೋ ಮೋಟೋಕಾರ್ಪ್(Hero MotoCorp) ಭಾರತೀಯ ಮಾರುಕಟ್ಟೆಗೆ ಹೊಚ್ಚ ಹೊಸ ಹೀರೋ Xtreme 160R Stealth ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ 160CC ಯಲ್ಲಿ ಲಭ್ಯವಿರುತ್ತದೆ. ಸಿಂಗಲ್-ಚಾನೆಲ್ ABS ವೈಶಿಷ್ಟ್ಯದೊಂದಿಗೆ ಈ ಬೈಕ್‌ನಲ್ಲಿ ಡಬಲ್ ಡಿಸ್ಕ್ ಬ್ರೇಕ್ ನೀಡಲಾಗಿದೆ. ಕಂಪನಿಯು ಈ ಬೈಕ್ ಅನ್ನು ಕಪ್ಪು ಬಣ್ಣ (Matte Black Color)ದಲ್ಲಿ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

USB ಚಾರ್ಜರ್ ನಂತಹ ಹಲವು ವೈಶಿಷ್ಟ್ಯಗಳಿವೆ  


ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಬೈಕಿನ ‘ಎಕ್ಸ್ ಶೋರೂಂ’ ಬೆಲೆಯು 1.67 ಲಕ್ಷ ರೂ. ಇದೆ. ಹೊಸ Xtreme 160R Stealth ಆವೃತ್ತಿಯು LED ವಿಂಕ್ಸ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಇಂಟಿಗ್ರೇಟೆಡ್ USB ಚಾರ್ಜರ್ ಮತ್ತು LCD ಬ್ರೈಟ್ನೆಸ್ ಅಡ್ಜಸ್ಟ್‌ ಮೆಂಟ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬೈಕ್ ಸ್ಪೀಡೋಮೀಟರ್‌ನಲ್ಲಿ ಹೊಸ ಗೇರ್ ಸೂಚಕ ವೈಶಿಷ್ಟ್ಯವನ್ನು ಕೂಡ ಹೊಂದಿದೆ.


ಇದನ್ನೂ ಓದಿ: Airtel Offer: ಸ್ಮಾರ್ಟ್ ಫೋನ್ ಖರೀದಿಸಿದರೆ ಸಿಗಲಿದೆ 6 ಸಾವಿರ ರೂಪಾಯಿಗಳ ಕ್ಯಾಶ್ ಬ್ಯಾಕ್ , ಹೇಗೆ ತಿಳಿಯಿರಿ


ಬೈಕಿನ ವೇಗದ ಬಗ್ಗೆ ನಿಮಗೆ ಅಚ್ಚರಿಯಾಗುತ್ತದೆ


ಹೊಸ ಬೈಕಿನಲ್ಲಿ 160CC ಎಂಜಿನ್ ಇದೆ, ಇದು 8500 RPMನಲ್ಲಿ 15.2PS ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್ ಕೇವಲ 4.7 ಸೆಕೆಂಡುಗಳಲ್ಲಿ 0 ರಿಂದ 60Kmph ವೇಗವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


ರೈಡಿಂಗ್ ಅನುಭವವನ್ನು ಸುಧಾರಿಸುತ್ತದೆ


ಹೀರೋ ಮೋಟೋಕಾರ್ಪ್ ಸ್ಟ್ರಾಟಜಿ ಮತ್ತು ಜಾಗತಿಕ ಉತ್ಪನ್ನ ಯೋಜನೆ ಮುಖ್ಯಸ್ಥ ಮಾಲೋ ಲೆ ಮೈಸನ್(Malo Le Maison) ಹೇಳಿರುವ ಪ್ರಕಾರ, ‘ಹೊಸ Xtreme 160R Stealth ಎಡಿಶನ್ ಕ್ಲಾಸ್-ಲೀಡಿಂಗ್ ತಂತ್ರಜ್ಞಾನ ಮತ್ತು ಡಾರ್ಕ್ ಸ್ಟೈಲಿಂಗ್ ಅನ್ನು ಹೊಂದಿದ್ದು, ಅದು ಗ್ರಾಹಕರಿಗೆ ಅವರ ದೈನಂದಿನ ಪ್ರಯಾಣದಲ್ಲಿ ರೋಮಾಂಚನಗೊಳಿಸುತ್ತದೆ’ ಎಂದು ಹೇಳಿದ್ದಾರೆ. ರೈಡಿಂಗ್ ಅನುಭವವನ್ನು ಸುಧಾರಿಸುವುದರಿಂದ ಹಿತಪ್ರಯಾಣ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Indian Railways: ರೈಲಿನಲ್ಲಿ ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸುವ ಮೊದಲು IRCTC ಯ ಈ ನಿಯಮ ನಿಮಗೂ ಗೊತ್ತಿರಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ