Airtel Offer: ಸ್ಮಾರ್ಟ್ ಫೋನ್ ಖರೀದಿಸಿದರೆ ಸಿಗಲಿದೆ 6 ಸಾವಿರ ರೂಪಾಯಿಗಳ ಕ್ಯಾಶ್ ಬ್ಯಾಕ್ , ಹೇಗೆ ತಿಳಿಯಿರಿ

ಈ ಆಫರ್‌ ನ ಲಾಭ ಪಡೆಯಲು ಇಚ್ಛಿಸುವ ಗ್ರಾಹಕರಿಗೆ 150 ಕ್ಕೂ ಹೆಚ್ಚು ಸ್ಮಾರ್ಟ್ ಫೋನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

Written by - Ranjitha R K | Last Updated : Oct 8, 2021, 08:59 PM IST
  • ಏರ್ಟೆಲ್ ನೀಡಿದೆ ಭರ್ಜರಿ ಆಫರ್
  • ಗ್ರಾಹಕರಿಗೆ ಘೋಷಿಸಿದೆ 6,000 ರೂಪಾಯಿಗಳ ಕ್ಯಾಶ್ ಬ್ಯಾಕ್
  • 'ಮೇರಾ ಪೆಹ್ಲಾ ಸ್ಮಾರ್ಟ್ ಫೋನ್' ಕಾರ್ಯಕ್ರಮ ಆರಂಭಿಸಿದ ಏರ್ಟೆಲ್
Airtel Offer: ಸ್ಮಾರ್ಟ್ ಫೋನ್ ಖರೀದಿಸಿದರೆ ಸಿಗಲಿದೆ 6 ಸಾವಿರ ರೂಪಾಯಿಗಳ ಕ್ಯಾಶ್ ಬ್ಯಾಕ್ , ಹೇಗೆ ತಿಳಿಯಿರಿ title=
ಏರ್ಟೆಲ್ ನೀಡಿದೆ ಭರ್ಜರಿ ಆಫರ್ (file photo)

ನವದೆಹಲಿ : 12,000 ವರೆಗಿನ ಹೊಸ ಸ್ಮಾರ್ಟ್‌ಫೋನ್‌ಗಳನ್ನು (Smartphone) ಖರೀದಿಸುವ ಗ್ರಾಹಕರಿಗೆ ಏರ್‌ಟೆಲ್ (Airtel) 6,000 ರೂಪಾಯಿಗಳ ಕ್ಯಾಶ್‌ಬ್ಯಾಕ್ (Cashback) ಘೋಷಿಸಿದೆ. ಈ ಆಫರ್‌ ಅಡಿಯಲ್ಲಿ ಗ್ರಾಹಕರು, ತನ್ನ 'ಮೇರಾ ಪೆಹ್ಲಾ ಸ್ಮಾರ್ಟ್‌ಫೋನ್' ಕಾರ್ಯಕ್ರಮದ ಭಾಗವಾಗಿ ಗುಣಮಟ್ಟದ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಲು ಅವಕಾಶ ಸಿಗುತ್ತದೆ. ಈ ಆಫರ್‌ ನ ಲಾಭ ಪಡೆಯಲು ಇಚ್ಛಿಸುವ ಗ್ರಾಹಕರಿಗೆ 150 ಕ್ಕೂ ಹೆಚ್ಚು ಸ್ಮಾರ್ಟ್ ಫೋನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಕ್ಯಾಶ್‌ಬ್ಯಾಕ್ ಹೇಗೆ ಪಡೆಯಬಹುದು ? 
ಕ್ಯಾಶ್‌ಬ್ಯಾಕ್ (Cashback) ಪಡೆಯಲು ಗ್ರಾಹಕರು 249 ರೂ ಅಥವಾ ಅದಕ್ಕಿಂತ ಹೆಚ್ಚಿನ ಏರ್‌ಟೆಲ್ ಪ್ರಿಪೇಯ್ಡ್ ಪ್ಯಾಕ್‌ನೊಂದಿಗೆ (Airtel prepaid pack) 36 ತಿಂಗಳುಗಳವರೆಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರು ಎರಡು ಭಾಗಗಳಲ್ಲಿ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ - 18 ತಿಂಗಳ ನಂತರ ಮೊದಲ ಕಂತಿನ ರೂ 2 ಸಾವಿರ ಮತ್ತು 36 ತಿಂಗಳ ನಂತರ ಉಳಿದ 4000 ರೂ. ಪಡೆಯುತ್ತಾರೆ.

ಇದನ್ನೂ ಓದಿ : Vi ಗ್ರಾಹಕರಿಗೆ ಸಿಹಿ ಸುದ್ದಿ : ಈ ಪ್ಲಾನ್ ರಿಚಾರ್ಜ್ ಮಾಡಿ 2 ತಿಂಗಳು ಪ್ರತಿದಿನ 4GB ಡೇಟಾ ಮತ್ತು ಅನೇಕ ಪ್ರಯೋಜನಗಳು 

ಉಚಿತ ಸ್ಕ್ರೀನ್ ರಿಪ್ಲೆಸ್‌ ಮೆಂಟ್‌ : 
ಈ ಪ್ರೋಗ್ರಾಂ ಆಯ್ಕೆ ಮಾಡಿದ ಗ್ರಾಹಕರು, ಸ್ಕ್ರೀನ್ ಬ್ರೇಕ್ ಆದರೆ ಅದನ್ನು ರಿಪ್ಲೆಸ್‌ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ. ಈ ಆಫರ್‌ ನಲ್ಲಿ 4,800 ರೂ.ವರೆಗೆ ಲಾಭವಿದೆ. ಗ್ರಾಹಕರು ಒಮ್ಮೆ ರೀಚಾರ್ಜ್ ಪ್ಯಾಕ್‌ಗೆ (Recharge pack) ಅರ್ಹರಾದರೆ, ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ (Airtel thanks app) ಸ್ಕ್ರೀನ್ ರಿಪ್ಲೇಸ್ಮೆಂಟ್ ದಾಖಲಾತಿಯನ್ನು 90 ದಿನಗಳ ಅವಧಿಯಲ್ಲಿ ಮಾಡಬಹುದು ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ : BSNL ಗ್ರಾಹಕರಿಗೆ ಸಿಹಿ ಸುದ್ದಿ : ಈ ಪ್ಲಾನ್ ರಿಚಾರ್ಜ್ ಮಾಡಿ 95 ದಿನಗಳವರೆಗೆ ಪ್ರತಿದಿನ 3GB ಡೇಟಾ, ಅನಿಯಮಿತ ಕರೆ!

ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News